ಬೆಂಗಳೂರು:
ಕಳೆದ ಹಲವು ತಿಂಗಳುಗಳಿಂದ ಯಡಿಯೂರಪ್ಪ ಮತ್ತು ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಅಬ್ಬರಿಸುತ್ತಿದ್ದ ಫೈರಬ್ರ್ಯಾಂಡ್ ಬಸನಗೌಡ ಪಾಟೀಲ ಯತ್ನಾಳಗೆ ಬಿಜೆಪಿ ಹೈ ಕಮಾಂಡ್ ನೋಟೀಸ್ ಜಾರಿ ಮಾಡಿದೆ.

ಕಳೆದ ದಿನವಷ್ಟೆ ಬೆಳಗಾವಿಯಲ್ಲಿ ಯತ್ನಾಳ ಸೇರಿದಂತೆ ಅರವಿಂದ ಲಿಂಬಾವಳಿ ಅವರು ವಿಜಯೇಂದ್ರ ವಿರುದ್ಧ ಗುರುತರ ಆರೋಪ ಮಾಡಿದ್ದರು.

ಬಿಜೆಪಿ ರಾಷ್ಟ್ರೀಯ ಶಿಸ್ತು ಸಮಿತಿ “ಶೋಕಾಸ್ ನೋಟಿಸ್” ಜಾರಿ ಮಾಡಿದೆ.
ಬಿಜೆಪಿ ಪಕ್ಷದ ಅನುಮತಿಯಿಲ್ಲದೇ ವಕ್ಫ್ ಭೂ ಅಕ್ರಮಗಳ ವಿರುದ್ಧ ರಾಜ್ಯದಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿರುವ ಯತ್ನಾಳ ಪಕ್ಷದ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದರು.