ಕರ್ತವ್ಯಲೋಪ-ಮುಖ್ಯಕಾರ್ಯದರ್ಶಿಗೆ ತಲುಪಿದ ದೂರು
ಪಾಲಿಕೆ ಉಪ ಆಯುಕ್ತ ಸೇರಿ ಐವರಿಗೆ ನೋಟೀಸ್
ಖಾಸಗಿ ಶಿಕ್ಷಣ ಸಂಸ್ಥೆಗೆ ತೆರಿಗೆ ತುಂಬಲು ಚಲನ್ ನೀಡುವಲ್ಲಿ ಅನಗತ್ಯ ವಿಳಂಬ.
ಡಿಸಿ, ಪಾಲಿಕೆ ಆಯುಕ್ತರ ಸೂಚನೆಗೂ ಡೋಂಟಕೇರ್ ಎಂದಿದ್ದ ಕಂದಾಯ ಶಾಖೆ.
ಬೆಳಗಾವಿ
ಆಡಳಿತದಲ್ಲಿ ಹಿಡಿದಿರುವ ಜಿಡ್ಡನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಬರುವ ದೂರುಗಳನ್ನೇ ಗಂಭೀರವಾಗಿ ಪರಿಗಣಿಸಿ ಮಹಾನಗರ ಪಾಲಿಕೆಯ ಉಪ ಆಯುಕ್ತ (ಕಂದಾಯ) ಸೇರಿದಂತೆ ಒಟ್ಟು ಐದು ಜನರಿಗೆ ಪಾಲಿಕೆ ಆಯುಕ್ತರು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.

ಪಾಲಿಕೆ ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ, ಕಚೇರಿ ಸಹಾಯಕಿ ಶ್ರೀಮತಿ ಪ್ರಿಯಾಂಕಾ, ಕಚೇರಿ ವ್ಯವಸ್ಥಾಪಕಿ ಶ್ರೀಮತಿ ಮೀನಾಕ್ಷಿ ತೊಗರಿ, ವಿಷಯ ನಿವರ್ಾಹಕ ಮೃತ್ಯುಂಜಯ ಮಾಳಗಿಮನಿ ಮತ್ತು ಕಂದಾಯ ಶಾಖೆಯ ಪ್ರಥಮ ದಜರ್ೆ ಗುಮಾಸ್ತ ಮಲ್ಲಿಕ್ ಗುಂಡಪ್ಪಣ್ಣವರ ಅವರಿಗೆ ಈ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ.
ಖಾಸಗಿ ಶಿಕ್ಷಣ ಸಂಸ್ಥೆಯವರು ಆಸ್ತಿ ತೆರಿಗೆ ಪಾವತಿ ಮಾಡುವ ಸಂಬಂಧ ಕಳೆದ 2002-23, 2023-24 ಮತ್ತು 2024-25 ಚಲನ್ ನೀಡುವಂತೆ ಪತ್ರ ಬರೆದರೂ ಕೂಡ ಕ್ರಮ ತೆಗೆದುಕೊಳ್ಳದೇ ಇರುವ ಬಗ್ಗೆ ನೋಟೀಸ್ನಲ್ಲಿ ಪ್ರಸ್ತಾಪ ಮಾಡಲಾಗಿದೆ.

ಅಷ್ಟೇ ಅಲ್ಲ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಮತ್ತು ಪಾಲಿಕೆ ಆಯುಕ್ತ ಶುಭ ಅವರು ದಾಖಲೆಗಳನ್ನು ಪರಿಶೀಲಿಸಿ ಸಂಬಂಧಿಸಿದವರಿಗೆ ತಕ್ಷಣ ಚಲನ್ ನೀಡುವಂತೆ ಸೂಚಿಸಿದ್ದರು,
ಆದರೆ ಇಷ್ಟೆಲ್ಲ ಆದ ಮೇಲೂ ಕೂಡ ಪಾಲಿಕೆಯ ಕಂದಾಯ ಶಾಖೆಯವರು ವಾರಗಟ್ಟಲೆ ಅಲೆದಾಡಿಸಿ ಅವ್ಯವಹಾರ ಮಾಡಿ ಕೊನೆಗೆ ಚಲನ್ ಕೊಟ್ಟ ಬಗ್ಗೆ ಸಾರ್ವಜನಿಕರೊಬ್ಬರು ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದರು, ಅಷ್ಟೇ ಅಲ್ಲ ಇದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ಗಮನಕ್ಕೂ ಈ ದೂರು ತಲುಪಿತ್ತು.
ಈ ಹಿನ್ನೆಲೆಯಲ್ಲಿ ಒಟ್ಟಾರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಆಯುಕ್ತರು, ಸರ್ಕಾರದ ನಿಯಮಗಳನ್ನು ಗಾಳಿಗೆ ತೂದಿದ್ದು ಮೇಲ್ನೋಟಕ್ಕೆ ಕಂಡು ಬಂದಿದೆ, ಆದ್ದರಿಂದ ಈ ಕುರಿತು ತಕ್ಷಣ ತಮ್ಮ ಹೇಳಿಕೆಯನ್ನು ಸಲ್ಲಿಸಲು ಸೂಚನೆ ನೀಡಲಾಗಿದೆ ತಪ್ಪಿದಲ್ಲಿ ತಮ್ಮ ಹೇಳಿಕೆ ಏನೂ ಇಲ್ಲ ಎಂದು ಪರಿಗಣಿಸಿ ಸಕ್ಷಮ ಪ್ರಾಧಿಕಾರಕ್ಕೆ ಸೂಕ್ರ ಕ್ರಮಕ್ಕಾಗಿ ವರದಿ ಸಲ್ಲಿಸಲಾಗುವುದು ಎಂದು ಆಯುಕ್ತರು ಕಾರಣ ಕೇಳಿ ನೋಟೀಸ್ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಇನ್ನು ಮಲ್ಲಿಕ್ ಗುಂಡಪ್ಪಣ್ಣವರ ಅವರಿಗೆ ಪ್ರತ್ಯೇಕವಾಗಿ ಕಾರಣಕೇಳಿ ನೋಟೀಸ್ನ್ನು ಆಯುಕ್ತರು ಜಾರಿ ಮಾಡಿದ್ದಾರೆ. ಇ ಆಸ್ತಿ ತಂತ್ರಾಂಶದಲ್ಲಿನಮೂನೆ-2 ನೀಡುವಲ್ಲಿ ವಿಳಂಬ ಧೋರಣೆ ತೋರುತ್ತಿರುವ ಬಗ್ಗೆ ಕಾರಣ ಕೇಳಿ ನೋಟೀಸನಲ್ಲಿ ಉಲ್ಲೇಖ ಮಾಡಲಾಗಿದೆ.
ಕಳೆದ ದಿ. 5 ರಂದು ಸಾರ್ವಜನಿಕರು ನನ್ನನ್ನು ಖುದ್ದು ಭೆಟ್ಟಿ ಮಾಡಿ 2 ತಿಂಗಳಿಂದ ಅಜರ್ಿಗಳನ್ನು ವಿಲೇಪಡಿಸದೇ ತಮ್ಮಲ್ಲಿಯೇ ಇಟ್ಟುಕೊಂಡಿದ್ದಾಗಿಜನ ದೂರಿದ್ದರು, ಈ ಬಗ್ಗೆ ತಮಗೆ ಎಚ್ಚರಿಕೆ ನೀಡಲಾಗಿತ್ತು, ಆದರೂ ತಮ್ಮ ವಿರುದ್ಧ ದೂರುಗಳು ಕೇಳಿ ಬರುತ್ತಿವೆ,
ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಕರ್ತವ್ಯ ನಿರ್ಲಕ್ಷ್ಯತೆ ಮತ್ತು ಬೇಜಾವಬ್ದಾರಿತನವಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ, ಆದ್ದರಿಂದ ಈ ವಿಳಂಬಧೋರಣೆಗೆ ಮತ್ತು ಅಸಹಕಾರಕ್ಕೆ ಸೂಕ್ತ ಕಾರಣಗಳೊಂದಿಗೆ ತಮ್ಮ ಹೇಳಿಕೆಯನ್ನು ಖುದ್ದಾಗಿ ಭೆಟ್ಟಿಯಾಗಿ ಸಲ್ಲಿಸಲು ಸೂಚನೆ ನೀಡಲಾಗಿದೆ, ಇದಕ್ಕೆ ತಪ್ಪಿದಲ್ಲಿ ತಮ್ಮ ಹೇಳಿಕೆ ಏನೂ ಇಲ್ಲವೆಂದು ಪರಿಗಣಿಸಿ ತಮ್ಮಮೇಲೆ ಕೆಸಿಎಸ್ಆರ್ ಮತ್ತು ಸಿಸಿಎ ನಿಯಮಾವಳಿಗಳನ್ವಯ ಸೂಕ್ತ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಆಯುಕ್ತರು ಜಾರಿ ಮಾಡಿದ ನೊಟೀಸ್ ನಲ್ಲಿ ತಿಳಿಸಲಾಗಿದೆ.