Headlines

ಬಾರದ ಲೋಕಕ್ಕೆ ಎಸ್ ಎಂ ಪಯಣ..!

ಬೆಂಗಳೂರು:

ಮಾಜಿ ಮುಖ್ಯಮಂತ್ರಿ
S M. ಕೃಷ್ಣ(92) ಅವರು ವಯೋಸಹಜ ಅನಾರೋಗ್ಯದಿಂದ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.
ಲೋಕಸಭೆ, ರಾಜ್ಯಸಭೆ ಸದಸ್ಯರಾಗಿ, ವಿಧಾನಪರಿಷತ್‌, ವಿಧಾನಸಭೆ ಸದಸ್ಯರಾಗಿ. ಸಚಿವ, ಸ್ಪೀಕರ್, ರಾಜ್ಯದ ಮೊದಲ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಮುಖ್ಯಮಂತ್ರಿಯಾಗಿ ನೀರಾವರಿ ಯೋಜನೆಗಳು, ಆಧುನಿಕ ಬೆಂಗಳೂರು ನಿರ್ಮಾಣದಲ್ಲಿ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದಾರೆ. ಬರಗಾಲ, ಡಾ. ರಾಜಕುಮಾರ್ ಅಪಹರಣ, ಕಾವೇರಿ ಗಲಾಟೆಯಂತಹ ಸವಾಲುಗಳನ್ನು ದಿಟ್ಟವಾಗಿ ಎದುರಿಸಿದ್ದರು.

ರಾಜಕೀಯದಲ್ಲಿ ಎಸ್.ಎಂ. ಕೃಷ್ಣ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಜೀವನ ಕುರಿತಾಗಿ 6 ಕೃತಿಗಳು ರಚನೆಯಾಗಿವೆ.

ಎಸ್.ಎಂ. ಕೃಷ್ಣ ನೆನಪುಗಳ ಸಂಕಲನ ‘ಸ್ಕೃತಿ ವಾಹಿನಿ’, ಜೀವನ ಚರಿತ್ರೆ ‘ಕೃಷ್ಣ ಪಥ’, ಅವರ ಚಿಂತನೆಗಳ ಸಂಕಲನ ‘ಭವಿಷ್ಯ ದರ್ಶನ’, ಇಂಗ್ಲಿಷ್ ಕೃತಿಗಳಾದ ‘ಡೌನ್ ಮೆಮೊರಿ ಲೇನ್’, ‘ಸ್ಟೇಟ್ಸ್ ಮನ್‌ ಎಸ್‌.ಎಂ. ಕೃಷ್ಣ’ ಕೃತಿಗಳು ರಚನೆಯಾಗಿವೆ.

ಸಂತಾಪ- ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನಿಧನಕ್ಕೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ಬಾಲಚಂದ್ರ ಜಾರಕುಹೊಳಿ ಸೇರಿದಂತೆ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!