ಬೆಳಗಾವಿ..
ಬೆಳಗಾವಿ ಚಳಿಗಾಲ ಅಧಿವೇಶನ ಕೊನೆ ಕ್ಷಣದಲ್ಲಿ ವಾತಾವರಣವನ್ನು ಕಾವೇರಿಸುವಂತೆ ಮಾಡಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಡಿದರೆನ್ನಲಾದ ಮಾತು ಈಗ ರಾಜಕೀಯ ಸಂಘರ್ಷಕ್ಜೆವಕಾರಣವಾಗಿದೆ.
ಇಲ್ಲಿ ಸಿ.ಟಿ ರವಿ ಅವರು ನಾನು ಆ ರೀತಿಯ ಕೆಟ್ಟ ಶಬ್ದ ಪ್ರಯೋಗ ಮಾಡಿಲ್ಲ ಎಂದು ಹತ್ತು ಹಲವು ಬಾರಿ ಹೇಳಿದ್ದಾರೆ.
ಫಾಸ್ಟಟೇಟ್ ಎಂದು ಹೇಳಿದ್ದೇನೆ ಹೊರತು ಪ್ರಾಸ್ಟಿ…ಟ್ ಎಂದು ಹೇಳಿಲ್ಲ ಎಂದು ಸಿ.ಟಿ.ರವಿ ಪದೇ ಪದೇ ಸ್ಪಷ್ಟಪಡಿಸಿದರೂ ಕೂಡ ಸಚಿವೆ ಹೆಬ್ಬಾಳಕರ ಕೊಟ್ಟ ದೂರಿನ ಮೇರೆಗೆ ಹಿರೇಬಾಗೇವಾಡಿ ಪೊಲೀಸರು ಅರೆಸ್ಟ್ ಮಾಡಿದರು.

ಇಲ್ಲಿ ಪೊಲೀಸರು ಸಭಾಪತಿಯವರು ನೀಡಿದ ಆಡಿಯೋ ಕೇಳಿದರೋ ಅಥವಾ ಇಲ್ಲವೋ ಎನ್ನುವುದು ಭಗವಂತನೇ ಬಲ್ಲ .ಆದರೆ ಪೊಲೀಸರು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಹೊತ್ತೊಯ್ದ ಪರಿಯನ್ನು ಗಮನಿಸಿದರೆ ಒತ್ತಡಕ್ಕೆ ಒಳಗಾಗಿ ಈ ಕ್ರಮ ಅನುಸರಿಸಿದರು ಎನ್ನುವ ಮಾತು ಕೇಳಿ ಬರುತ್ತಿದೆ.
ಇಲ್ಲಿ ಸಿ.ಟಿ.ರವಿ ಅರೆಸ್ಟ ಆಯಿತು ಎಲ್ಲವೂ ಆಯಿತು. ಆದರೆ ಸುವರ್ಣ ವಿಧಾನಸಭೆ ಆವರಣದಲ್ಲಿಯೇ ವಿಧಾನ ಪರಿಷತ್ ಸದಸ್ಯ ರವಿ ಮೇಲೆ ಹಲ್ಲೆಗೆ ಯತ್ನಿಸಿದ್ದಲ್ಲದೇ ಕಬ್ಬಿಣದ ಗೇಟನ್ನು ಒದ್ದವರ ಮೇಲೆ ಪೋಲೀಸರು ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ ಎನ್ನುಚ ಬಹುದೊಡ್ಡ ಪ್ರಶ್ನೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ
ಅವರನ್ನು ಬಿಟ್ಟವರು ಯಾರು?

ಇದೆಲ್ಲದರ ನಡುವೆ ಸುವರ್ಣ ವಿಧಾನಸೌಧ ಆವರಣದಲ್ಲಿ ಸಿ.ಟಿ ರವಿ ಮೇಲೆ ಹಲ್ಲೆ ಮಾಡಲು ಬಂದವರಿಗೆ ಪಾಸ್ ಕೊಟ್ಟವರು ಯಾರು ಎನ್ನುವ ಚರ್ಚೆ ಕೂಡ ನಡೆದಿದೆ.
ಇಲ್ಲಿ ಸಿ.ಟಿ.ರವಿ ಮೇಲೆ ಹಲ್ಲೆ ಅಷ್ಟೆ ಅಲ್ಲ ಹಲ್ಲೆ ಯತ್ನ ತಡೆಯಲು ಬಂದ ಮಾರ್ಷಲ್ ಗಳನ್ನು ಎಳೆದಾಡಿ ಪವಿತ್ರವಾದ ಸೌಧದ ಕಬ್ಬಿಣದ ಗೇಟ್ ಒದ್ದವರ ಮೇಲೆ ಪೊಲೀಸರು ಯಾಕೆ ಮೌನವಹಿಸಿದರು ಎನ್ನುವ ಯಕ್ಷ ಪ್ರಶ್ನೆ ಹಲವರನ್ನು ಕಾಡುತ್ತಿದೆ.
ಈ ಎಲ್ಲ ಘಟನೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತು ಬಿಜೆಪಿಯವರು ಪ್ರತಿಭಟನೆ ನಡೆಸಿದ್ದಾರೆ. ಆದರೆ ಕೊನೆಗೆ ಇದು ಯಾವ ಹಂತಕ್ಕೆ ತಲುಪಬಹುದು ಎನ್ನುವುದನ್ನು ಕಾದು ನೋಡಬೇಕಷ್ಟೆ..!
ಗಂಭೀರ ಆರೋಪ..

ಇಲ್ಲಿ ಹಿರೇಬಾಗೇವಾಡಿ ಪೊಲೀಸರಿಗೆ ಕೊಟ್ಟ ದೂರನ್ನು ಗಮನಿಸಿದರೆ ಅದು ಗಂಭೀರ ಸ್ವರೂಪದ್ದು. ಆದರೆ ಸಚಿವೆ ಉಲ್ಲೇಖಿಸಿದಂತೆ ಸಿ.ಟಿ ರವಿ ಅವರು ಪರಿಷತ್ ಸಭಾಗೃದಲ್ಲಿಯೇ ಆ ರೀತಿ ವರ್ತನೆ ತೋರಿದರಾ? ಎನ್ನುವ ಚರ್ಚೆ ಸಹ ನಡೆದಿದೆ.
ಒಂದು ವೇಳೆ ಸಿ.ಟಿ. ರವಿ ಅವರಾಗಲೀ ಅಥವಾ ಮತ್ತೆ ಯಾರೇ ಆಗಲಿ ಮಹಿಳೆಗೆ ಅಂತಹ ಶಬ್ದ ಪ್ರಯೋಗ ಮಾಡಿದ್ದರೆ ಅದು ಸನರ್ಥನೀಯವಲ್ಲ. ಆದರೆ ಇಷ್ಟೆಲ್ಕ ಗದ್ದಲದ ನಡುವೆ ಉಳಿದವರಿಗೆ ಕೇಳಿಸದ ಆ ಶಬ್ದಗಳು ಸಚಿವೆಗೆ ಕೇಳಿಸಿದ್ದು ವಿಚಿತ್ರ ಎನಿಸತೊಡಗಿದೆ.
ಡಿಕೆಶಿ ವಿರುದ್ಧವೂ ದೂರು..


ಇದೆಲ್ಲದರ ನಡುವೆ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರು ಸಚಿವೆ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ವಿರುದ್ಧ ಕೊಲೆ ಬೆದರಿಕೆ ದೂರು ನೀಡಿದ್ದಾರೆ.
ಆದರೆ ಪೊಲೀಸರು ಮಾತ್ರ ಇದನ್ನು ಅರ್ಜಿ ಎಂದು ಪರಿಗಣಿಸಿದ್ದಾರೆ ದೂರು ದಾಖಲು ಮಾಡಿಕೊಂಡಿಲ್ಲ.
ಅಶ್ಲೀಲ ಶಬ್ದಬಳಸಿಲ್ಲ…!

ಖಾನಾಪುರ ಪೊಲೀಸ್ ಠಾಣೆಯಲ್ಲಿಹಿರೇಬಾಗೇವಾಡಿ ಪೊಲೀಸರು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರು ವಿಡಿಯೋ ಹೇಳಿಕೆ ದಾಖಲಿಸಿಕೊಂಡರು.
ತಾವು ಸಚಿವೆ ವಿರುದ್ಧ ಯಾವುದೇ ಅಶ್ಲೀಲ ಶಬ್ದ ಅಥವಾ ಪದ ಬಳಸಿಲ್ಲ ಎಂದು ಸಿ.ಟಿ ರವಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಹಿಳೆಯರ ಬಗ್ಗೆ ನನಗೆ ಗೌರವವಿದೆ. ಯಾರೋ ಹೇಳಿದ ಹೇಳಿಕೆ ಕೇಳಿ ನಮ್ಮ ಮೇಲೆ ಸಚಿವರು ಸುಳ್ಳು ದಾಖಲು ಮಾಡಿದ್ದಾರೆ. ದೂರಿಲ್ಲಿರುವ ಅಂಶಗಳು ಸತ್ಯಕ್ಕೆ ದೂರವಾಗಿವೆ ಎಂದು ಸಿ.ಟಿ ರವಿ ಪ್ರತಿಪಾದಿಸಿದರು.