“ಸಿ.ಟಿ.ರವಿ ಬೇಡಿಕೊಂಡ್ರೂ ಕೂಡ ಅವರನ್ನು ಪೊಲೀಸರು ಬಿಡಲಿಲ್ಲ. ವಿಧಾನಸೌಧದಲ್ಲಿ ಪಾಕ್ ಜಿಂದಾಬಾದ್ ಕೂಗಿದವರ ಬಂಧನ ಆಗಿಲ್ಲ. ಅವರನ್ನು ಬಿಟ್ಬುಟ್ರು. ದೇಶ ಭಕ್ತ ಸಿ.ಟಿ.ರವಿ ಅವರನ್ನು ಅರೆಸ್ಟ್ ಮಾಡಿದರು” ಎಂದು ವಿಪಕ್ಷ ನಾಯಕ ಆರ್.ಆಶೋಕ್ ಸರ್ಕಾರದ ವಿರುದ್ಧ ಗರಂ ಆದರು.
ಇಲ್ಲಿ ನಡೆದಿರುವ ಘಟನೆ ಬಗ್ಗೆ ಶಿಕ್ಷೆ ಕೊಡುವವರು ಸಿಎಂ ಸಿದ್ದರಾಮಯ್ಯ ಅವರಾ? ಡಿ.ಕೆ.ಶಿವಕುಮಾರ್ ಅವರಾ? ಅವರು ನ್ಯಾಯಾಧೀಶರಾ ಎಂದು ಪ್ರಶ್ನೆ ಮಾಡಿದರು.

ಮಾಪಣೆ ಕೇಳ್ಬೇಕು ಎನ್ನುವ ಇವರಿಗೆ ನಾವೇಕೆ ಕ್ಷಮಾಪಣೆ ಕೇಳ್ಬೇಕು? ತಪ್ಪು ಎಂದು ಸಾಬೀತಾಗಬೇಕು, ಕಾನೂನು ವ್ಯವಸ್ಥೆಯಲ್ಲೂ ರವಿ ಹೇಳಿರುವುದು ಸಾಬೀತಾಗ್ಬೇಕು, ಆಗ ಇಲ್ಲದ ನಾವು ಪಾಲನೆ ಮಾಡ್ತೀವಿ” ಎಂದರು.
“ದೂರು ಕೊಡಲು ಠಾಣೆಗೆ ಹೋದಾಗ ನನಗೆ ಎಂಟ್ರಿ ಇಲ್ಲ. ಸಂವಿಧಾನದ ಬದ್ಧವಾದ ಸ್ಥಾನ ನನ್ನದು, ಭಯೋತ್ಪಾದಕ ಬಂದ್ರೆ ಚೇರ್ ಹಾಕಿ ಕೂರಿಸುತ್ತೀರಾ, ಐದು ಗಂಟೆ ಠಾಣೆ ಹೊರಗಿದೀನಿ, ನನಗೆ ಅವಕಾಶ ಕೊಡಲಿಲ್ಲ. ಈ ರೀತಿಯ ಘಟನೆ ಇತಿಹಾಸದಲ್ಲೇ ನೋಡಿಲ್ಲ.
ಸಿ.ಟಿ.ರವಿ ಒಬ್ಬಂಟಿ ಅಲ್ಲ. ನಾವು ಜೊತೆಯಲ್ಲಿದ್ದೇವೆ. ನಮ್ಮದು ಕೇಡರ್ ಪಾರ್ಟಿ, ಕಾಂಗ್ರೆಸ್ನಂತೆ ಅಬ್ಬೇಪಾರಿ ಪಾರ್ಟಿ ಅಲ್ಲ. ನಾವು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಡ್ತೇವೆ. ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಕೂಡ ದೂರು ನೀಡಲಿದ್ದೇವೆ” ಎಂದು ಅಶೋಕ್ ಎಚ್ಚರಿಕೆ ನೀಡಿದರು.