Headlines

ರೋಡ್ ರಾಜಕಾರಣ ಬೇಡ

ನಾವು ಜಿದ್ದಿಗೆ ಬಿದ್ದಿದ್ದರೆ ಅವರ IAS ಗೂ ಕಷ್ಟ ಆಗ್ತಿತ್ತು.ಆದ್ರೆ ನಾವು ಆ ರೀತಿ ಮಾಡಲು ಹೋಗಲಿಲ್ಲ. ಆ ರೋಡ್ ಬಂದ್ ಆಗಿದ್ದರಿಂದ ಬೆಳಗಾವಿಗರಿಗೆ ತೊಂದರೆ ಆಗ್ತಿದೆ. ಅದನ್ನು ಸರಿಮಾಡೊಣ. ಇದರಲ್ಲಿ ರಾಜಕಾರಣ ಮಾಡಬೇಡಿ. ನಾವು ತಕ್ಕೊಂತ ಹೋದ್ರೆ ಬಹಳ ಇದೆ. ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲರು ಬಂದ್ ಆಗಿದ್ದ ಡಬಲ್ ರೋಡ್ ಬಗ್ಗೆ ಪ್ರಸ್ತಾಪಿಸಿದರು. ಶಹಾಪುರ ಡಬಲ್ ರೋಡ್ ಬಂದ್ ಆಗಿದ್ದರಿಂದ ಏನೇನು ಸಮಸ್ಯೆ ಆಗುತ್ತಿದೆ ಎನ್ನುವುದನ್ನು…

Read More

ಪಾಲಿಕೆ ಸಭೆ ಅಂದ್ರೆ ಶನಿವಾರ ಸಂತಿ ಆಗೈತಿ

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಇದೇ ದಿ.‌ 9 ರಿಂದ ಚಳಿಗಾಲ ಅಧಿವೇಶನ ಆರಂಭವಾಗಲಿದೆ. ಅಂತಹ ಸಂದರ್ಭದಲ್ಲಿ ಬೆಳಗಾವಿ ಬೇಕು ಬೇಡಗಳ ಬಗ್ಗೆ ಚರ್ಚೆ ನಡೆಸಬೇಕಾಗಿದ್ದ ನಗರಸೇವಕರು ಅನಗತ್ಯ ಚರ್ಚೆ ಮೂಲಕ ಕಾಲಹರಣ ಮಾಡಿದರು. ಒಂದು ರೀತಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ನಗರಸೇವಕರ ಈ ನಡುವಳಿಕೆ ಕಂಡ ಶಾಸಕ ಅಭಯ ಪಾಟೀಲರು, ಇದೇನ್ ಬೆಳಗಾವಿ ಸಂತಿ ಮಾಡೇರಿ ಎಂದು ಅಸಮಾಧಾನ ಹೊರಹಾಕಿದರು. ಒಂದೇ‌ವಿಷಯ ಇಟ್ಟು ಕೊಂಡು ಮಾಡುತ್ತಿರುವ ವಾದವನ್ನು ಗಮನಿಸಿದ ಅವರು, ಬೆಳಗಾವಿ ಜನ ನಿಮ್ಮ ವರ್ತನೆಯನ್ನು…

Read More

20 ವರ್ಷ ಶಿಕ್ಷೆ

ಬೆಳಗಾವಿ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಎಸುಗಿದ ಆರೋಪಿಗೆ ಜಿಲ್ಲಾ ಪೋಕ್ಸೊ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕುಡಚಿ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಬಂದು ೨೦೨೦ರಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.ದೂರುದಾರನ ಅಪ್ರಾಪ್ತ ವಯಸ್ಸಿನ ಮಗಳನ್ನು ಆರೋಪಿತ ಅಜೀತ ಸಹದೇವ ಪಾಟೀಲ ವಯಸ್ಸು 27 ವರ್ಷ ಸಾ ಮೋರಬ ತಾ: ರಾಯಬಾಗ ಇವನು ಆಗಾಗ ಬಾಲಕಿಯ ಮನೆಗೆ ಬಂದು ಆಕೆಯೊಂದಿಗೆ ಸಲುಗೆಯಿಂದ ಮಾತನಾಡಿಸುತ್ತಿದನು ಪುಸಲಾಯಿಸಿ ಅವಳ…

Read More

ಕೊಲೆ ಕೇಸ್- ಡಾಕ್ಟರ್ ಅರೆಸ್ಟ್

ರಿಯಲ್ ಎಸ್ಟೇಟ್ ಉದ್ಯಮಿ ಪದ್ಮಣ್ಣವರ ಕೊಲೆ ಪ್ರಕರಣ: ಐದನೇ ಆರೋಪಿ ಬಂಧನ…. ಬೆಳಗಾವಿ: ನಗರದ ರಿಯಲ್ ಎಸ್ಟೇಟ್ ಉದ್ಯಮಿ ಪದ್ಮಣ್ಣವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐದನೇ ಆರೋಪಿಯನ್ನು ಬುಧವಾರ ಬಂಧಿಸಿದ್ದಾರೆ.ಪ್ರಶಾಂತ ಶಿವಾನಂದ (೩೮) ಬಂಧಿತ ಅರೋಪಿ. ಬಿಎಎಂಎಸ್ ಡಾಕ್ಟರ್ ಆಗಿದ್ದು, ಈ ಕೊಲೆ ಪ್ರಕರಣದಲ್ಲಿ ಮಾತ್ರೆ ಹಾಗೂ ಇಂಜೆಕ್ಷನ್ ಹೇಗೆ ಕೊಡಬೇಕೆಂಬುದರ ಬಗ್ಗೆ ಸಲಹೆ ನೀಡಿದ ಆರೋಪ ಈತನ ಮೇಲಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ರಿಯಲ್ ಎಸ್ಟೇಟ್…

Read More

ಅಧಿಕಾರ ಹಂಚಿಕೆ ಒಪ್ಪಂದ ಸಾಧ್ಯತೆ

“ಬೆಂಗಳೂರು:  ಮುಖ್ಯ ಮಂತ್ರಿ ಅಥವಾ ಯಾವುದೋ ಅಧಿಕಾರ ಹಂಚಿಕೆ ದೆಹಲಿಯಲ್ಲಿ ಒಪ್ಪಂದಗಳಾಗಿರುವ ಸಾಧ್ಯತೆಗಳಿದ್ದು, ಈ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದೆಹಲಿಯಲ್ಲಿ ಏನು ಮಾತುಕತೆಯಾಗಿದೆ ಎಂಬುದು ನಮಗ್ಯಾರಿಗೂ ಗೊತ್ತಿಲ್ಲ. ಆದರೆ ಒಪ್ಪಂದಗಳಾಗಿರುವ ಬಗ್ಗೆ ಚರ್ಚೆಗಳಾಗುತ್ತಿವೆ. ಆರು ತಿಂಗಳ ಹಿಂದೆಯೇ ನಾನು ಈ ಹೇಳಿಕೆ ನೀಡಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಖಾಸಗಿ ಸಂದರ್ಶನದಲ್ಲಿ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಸುಳಿವು ನೀಡಿರುವುದು ಹೊಸದೇನಲ್ಲ ಎಂದರು.ಅಧಿಕಾರ…

Read More

ಸಾಯುವ ತನಕ ಜೈಲು

ಕಂದಮ್ಮನ ಮೇಲೆ ಅತ್ಯಾಚಾರ ಎಸಗಿದವನಿಗೆ ಸಾಯುವ ತನಕ ಜೈಲುಬೆಳಗಾವಿ: ಎರಡೂವರೆ ವರ್ಷದ ಪುಟ್ಟ ಕಂದಮ್ಮನ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿಕೊಲೆ ಮಾಡುವುದಕ್ಕೆ ಪ್ರಯತ್ನಿಸಿದ ಪ್ರಕರಣದಲ್ಲಿ ಆರೋಪಿಗೆ ಜಿಲ್ಲಾ ಪೋಕ್ಸೋ ನ್ಯಾಯಾಲಯ ಸಾಯುವ ತನಕವೂ ಕಠಿಣ ಜೈಲು ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ. ನೇಸರಗಿ ಠಾಣಾ ವ್ಯಾಪ್ತಿಯಲ್ಲಿ ೨೦೧೭ರಲ್ಲಿ ಈ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ ಎರಡು ವರ್ಷ ಆರು ತಿಂಗಳು ವಯಸ್ಸಿನ ಬಾಲಕಿಯ ಮೇಲೆಬೈಲಹೊಂಗಲ ತಾಲ್ಲೂಕು ವಣ್ಣೂರಿನ ಸುಭಾಷ ಮಹಾದೇವ ನಾಯಕ(೨೧) ಎಂಬಾತ ಅತ್ಯಾಚಾರವನ್ನುಎಸಗಿ…

Read More

ಸವದತ್ತಿ ಯಲ್ಲಮ್ಮ ಅಭಿವೃದ್ಧಿ 100 ಕೋಟಿ ರೂ. MINISTER H K PATIL

ಬೆಂಗಳೂರು. ಬೆಂಗಳೂರು: ರಾಜ್ಯದ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿರುವ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇಗುಲ ಅಭಿವೃದ್ಧಿಗೆ ಸಹಕಾರಿಯಾಗುವಂತೆ ರಾಜ್ಯ ಪ್ರವಾಸೋದ್ಯಮ, ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಅವರು ಕೇಂದ್ರ ಸರ್ಕಾರವನ್ನು ಕೋರಿದ ಪರಿಣಾಮ ಕೇಂದ್ರವು ರಾಜ್ಯದ ಈ ಧಾರ್ಮಿಕ ಕೇಂದ್ರದ ಅಭಿವೃದ್ಧಿಗೆ ನೂರು ಕೋಟಿ ರೂ. ಮಂಜೂರು ಮಾಡಿದೆ.ಸವದತ್ತಿ ಯಲ್ಲಮ್ಮ ದೇಗುಲ ಅಭಿವೃದ್ಧಿಗೆ ಸಂಬAಧಿಸಿದAತೆ ಸಚಿವ ಎಚ್.ಕೆ.ಪಾಟÃಲ ಅವರು 9-01-2024ರಂದು ಕೇಂದ್ರ ಪ್ರವಾಸೋಧ್ಯಮ ಕಾರ್ಯದರ್ಶಿ ಅವರಿಗೆ ಪತ್ರ ಮುಖೇನ ರಾಜ್ಯದ ಪ್ರಮುಖ ಧಾರ್ಮಿಕ…

Read More

ಇದೆಂತಹ ಭಂಡ ಧೈರ್ಯ ನೋಡಿ..

ಬೆಳಗಾವಿ.ಇದೊಂದು ಫೊಟೊ ನೆಳಗಾವಿ ಪೊಲೀಸ್ ವ್ಯವಸ್ಥೆ ಯಾವ ಹಂತಕ್ಕೆ ಬಂದು ತಲುಪಿದೆ ಎನ್ನುವುದನ್ನು ತೋರಿಸಿಕೊಡುತ್ತದೆ.ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ಪೊಲೀಸರು ಲಾಠಿಯನ್ನು ಬಿಗುಯಾಗಿ ಹಿಡಿಯದೇ ಇರುವ ಪರಿಣಾಮ ಠಾಣೆ ಮುಂದೆ ರಾಜಾರೋಷವಾಗಿ ಕುಳಿತು ಕುಡಿಯುವ ಪರಿಸ್ಥಿತಿ ಬಂದಿದೆ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ಮದ್ಯ ವ್ಯಸನಿಯೊಬ್ಬ ನಡು ರಸ್ತೆಯಲ್ಲಿ ಪೊಲೀಸ್ ಠಾಣೆಯ ಮುಂದೆ ಸಾರಾಯಿ ಸೇವನೆ ಮಾಡುವ ವಿಡಿಯೋ ವೈರಲ್ ಆಗಿದೆ.

Read More

ಬೆಳಗಾವಿಗೆ ಇನ್ನೊಂದು ಸಚಿವ ಸ್ಥಾನ ನೀಡುವ ಕುರಿತು ಗೊತ್ತಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: ಶಾಸಕ ಆಸೀಫ್‌ (ರಾಜು) ಸೇಠ್‌ ಅವರು ಸಚಿವ ಸ್ಥಾನ ನೀಡಬೇಕೆಂದು ಕೇಳಿದ್ದು ನಿಜ. ಬೆಳಗಾವಿ ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ನೀಡುವ ಬಗ್ಗೆ ನನಗೆ ಗೊತ್ತಿಲ್ಲ. ಅಧಿವೇಶನ ನಂತರ ಎನಾಗುತ್ತದೆ ಎಂದು ಕಾಯ್ದು ನೊಡೋಣ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು. ನಗರದ ಕಾಂಗ್ರೆಸ್‌ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಸಮುದಾಯದರು ನಮ್ಮ ಭಾಗದಲ್ಲಿ ಯಾರು ಸಚಿವರಾಗಿಲ್ಲ. ಹೀಗಾಗಿ ಶಾಸಕ ಆಸೀಫ್‌ (ರಾಜು) ಸೇಠ್‌ ಅವರು ಸಚಿವ ಸ್ಥಾನ…

Read More
error: Content is protected !!