
ಪಾಲಿಕೆಯಲ್ಲಿ ಹಮ್ ಭಿ ಚುಪ್.. ತುಮ್ ಭಿ ಚುಪ್..!
ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಏನು ಪ್ರಶ್ನೆ ಮಾಡಬೇಕು ಅದನ್ನು ಮಾಡಲ್ಲ.ಉಳಿದ ವಿಚಾರ ತಮಗೆ ಬಿಟ್ಟಿದ್ದು..! ಸಧ್ಯ ಹೇಗಾಗಿದೆ ಎಂದರೆ ಪಾಲಿಕೆ ಆಡಳಿತ ವ್ಯವಸ್ಥೆಯಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವಲ್ಲಿಯೂ ಕೂಡ ಎರಡು ಬಗೆಯ ನ್ಯಾಯ ಮಾಡಿದಂತಿದೆ. ಸಣ್ಣವರು ತಪ್ಪು ಮಾಡಿದರೆ ಕಠಿಣ ಕ್ರಮ. ಅದೇ ದೊಡ್ಡವರು ದೊಡ್ಡ ದೊಡ್ಡ ತಪ್ಪು ಮಾಡಿದರೂ ಬರೀ ಒಂದು ನೋಟೀಸ್.! ಮುಖ್ಯವಾದ ಸಂಗತಿ ಎಂದರೆ, ಸಿಬ್ಬಂದಿಯವರೇ ಪಾಲಿಕೆಗೆ ದ್ರೋಹ ಬಗೆಯುವದು ಎಂದರೆ ಅದು ಉಂಡ ಮನೆಗೆ ದ್ರೋಹ…