ಸಿದ್ಧತೆ ಪರಿಶೀಲಿಸಿದ ಎಕೆಬಿಎಂಎಸ್ ಅಧ್ಯಕ್ಷ ಅಶೋಕ ಹಾರನಹಳ್ಳಿ.
ವೇದಿಕೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣ. ಅಚ್ಚುಕಟ್ಟು ವೇದಿಕೆ ನಿರ್ಮಾಣ.
ಗಣ್ಯಾತಿಗಣ್ಯರ ಸಂಗಮ. ಎಲ್ಲ ಮಠಾಧೀಶರ ಸಮಾಗಮ
ಎರಡು ದಿನ ಕಾರ್ಯಕ್ರಮಕ್ಕೆ ಲಕ್ಷ ಜನ ಸೇರುವ ನಿರೀಕ್ಷೆ.
ಬೆಂಗಳೂರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಸಭಾ ಆಯೋಜನೆ ಮಾಡಿದ ಬ್ರಾಹ್ಮಣ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ ದಿ.18 ಮತ್ತು 19 ರಂದು ಎರಡು ದಿನಗಳ ಕಾಲ ಈ ಸಮಾವೇಶ ನಡೆಯಲಿದೆ.

ಈ ಸಮಾವೇಶಕ್ಕಾಗಿ ಅದ್ಭುತ ವೇದಿಕೆ ನಿರ್ಮಾಣ ಕಾರ್ಯ ಕೊನೆ ಹಂತಕ್ಕೆ ಬಂದು ನಿಂತಿದೆ. ಈ ವೇದಿಕೆಯನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಈಗಲೇ ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ.

ಸಮಾವೇಶಯಶಸ್ಸುಗೊಳಿಸುವ ನಿಟ್ಟಿನಲ್ಲಿ ರಾಜ್ಯವ್ಯಾಪಿ ತಂಡವನ್ನು ಕಟ್ಟಿಕೊಂಡು ಎಲ್ಲ ಜಿಲ್ಲೆಗಳಲ್ಲಿ ಮಹಾಸಭಾ ಅಧ್ಯಕ್ಷರು ಪ್ರವಾಸ ಮಾಡಿದ್ದಾರೆ.

ಅಷ್ಟೆ ಅಲ್ಲ ಸಮಾವೇಶದ ಮೂಲಕ ಬ್ರಾಹ್ಮಣರ ಶಕ್ತಿ ಪ್ರದರ್ಶನಕ್ಕೆ ಇದು ವೇದಿಕೆಯಾಗಲಿದೆ.

ಈಗಾಗಲೇ ಈ ಸಮಾವೇಶಕ್ಕೆ ಆಗಮಿಸಲು ಕೇಂದ್ರ ಸಚಿವರೂ ಸೇರಿದಂತೆ ಬೇರೆ ಬೇರೆ ರಾಜ್ಯದ ಮುಖ್ಯಮಂತ್ರಿಗಳು ಬರಲು ಸಮ್ಮತಿ ನೀಡಿದ್ದಾರೆ.

ನಿತಿನ್ ಗಡ್ಕರಿ, ರಾಜನಾಥ ಸಿಂಗ್, ಬಿ.ಎಲ್. ಸಂತೋಷ, ಜೈಪೂರ ಸಿಎಂ ಭಜನಲಾಲ್ ಶರ್ಮಾ, ದೇವೇಂದ್ರ ಫಡ್ನವೀಸ್ , ಪ್ರಲ್ಹಾದ ಜೋಶಿ, ದಿನೇಶ ಗುಂಡುರಾವ್ ಸೇರಿದಂತೆ ರಾಜ್ಯದ ಎಲ್ಲ ಗಣ್ಮರು ಮಠಾಧೀಶರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
