Headlines

ಬ್ರಾಹ್ಮಣರ ವಿರಾಟ ಶಕ್ತಿ ಪ್ರದರ್ಶನ..!

ಇಡಬ್ಲುಎಸ್ಗಾಗಿ ಕೇಂದ್ರದ ಮೇಲೆ ಒತ್ತಡ. ಕೇಂದ್ರ ಮಟ್ಟದಲ್ಲಿ ಹೋರಾಟಕ್ಕೆ ಸಿದ್ಧತೆ.

ಎಲ್ಲ ರಾಜ್ಯಗಳ ಬ್ರಾಹ್ಮಣ ಸಂಘಟನೆಗಳು ಭಾಗಿ. ಅಶೋಕ ಹಾರನಹಳ್ಳಿ ಸಾರಥ್ಯಕ್ಕೆ ಹೆಚ್ಚುತ್ತಿರುವ ಆಗ್ರಹ.

ಬ್ರಾಹ್ಮಣರ ಜಮೀನು ಉಳಿವಿಗಾಗಿ ವಕ್ಫ ವಿರುದ್ಧ ಹೋರಾಟಕ್ಕೆ ಸಿದ್ಧತೆ.

ಎಲ್ಲರ ಚಿತ್ತ ಈಗ ಬ್ರಾಹ್ಮಣರತ್ತ, ಪಕ್ಷ ಬೇಧ ಮರೆತು ಎಲ್ಲ‌ ನಾಯಕರು ಭಾಗಿ

ನಿಂದಕರಿಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ ಒಗ್ಗಟ್ಟಿನ ಸಮಾವೇಶ.

ತ್ರಿಮತಸ್ಥರನ್ನು ಒಗ್ಗೂಡಿಸಿದ ಎಕೆಬಿಎಂಎಸ್.

E belagavi ವಿಶೇಷ
ಬೆಂಗಳೂರು.
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ದಿ. 18 ಮತ್ತು 19 ರಂದು ಎರಡು ದಿನಗಳ ಕಾಲ ಅರಮನೆ ಆವರಣದಲ್ಲಿ ನಡೆದ ಬ್ರಾಹ್ಮಣ ಮಹಾ ಸಮ್ಮೇಳನವು `ವಿರಾಟ ಶಕ್ತಿ’ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಸಾರಥ್ಯದಲ್ಲಿ ನಡೆದ ಈ ಸಮ್ಮೇಳನವು ನ ಭುತೋ ನ ಭವಿಷ್ಯತಿ ಎನ್ನುವಂತೆ ಯಶಸ್ವಿಯಾಯಿತು.
ರಾಜ್ಯ ಅಷ್ಟೆ ಅಲ್ಲ ದೇಶ ವಿದೇಶಗಳಿಂದ ಬ್ರಾಹ್ಮಣ ಸಮಾಜ ಬಾಂಧವರು ಈ ಸಮ್ಮೇಳನಕ್ಕೆ ಆಗಮಿಸಿ ಮೆರಗು ತಂದರು.

ಸಮಾವೇಶದ ಮುನ್ನಾ ದಿನವೇ ರಾಜ್ಯದ ಮೂಲೆ ಮೂಲೆಗಳಿಂದ ಬ್ರಾಹ್ಮಣ ಸಮಾಜದವರು ಅರಮನೆಯತ್ತ ಧಾವಿಸಿದ್ದರು.
ಎರಡೂ ದಿನಗಳಲ್ಲಿ ಒಟ್ಟಾರೆಯಾಗಿ ಸುಮಾರು ಒಂದುವರೆ ಲಕ್ಷ ಜನ ಭಾಗವಹಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು,
ಈ ಸಮ್ಮೇಳನದಲ್ಲಿ ವಧು-ವರರ ಕೇಂದ್ರ, ಉದ್ಯೋಗ ಮೇಳ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಎಲ್ಲವೂ ಜನರ ಗಮನ ಸೆಳೆದವು

ಅಚ್ಚರಿ ಸಂಗತಿ ಎಂದರೆ, ಸುಮಾರು 135 ಕ್ಕೂ ಹೆಚ್ಚು ಬಾಣಸಿಗರು ಅಡುಗೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು, ನಂತರ ಹತ್ತಾರು ತಂಡಗಳು ಬಂದವರಿಗೆಲ್ಲರಿಗೂ ರುಚಿ ರುಚಿಯಾದ ಅಡುಗೆಯನ್ನು ಉಣಬಡಿಸಿದವು

ಒಂದೇ ವೇದಿಕೆಗೆ ತ್ರಿಮತಸ್ಥರು..!
ಇಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿಯವರು ರಾಜ್ಯವ್ಯಾಪಿ ತಂಡವನ್ನು ಕಟ್ಟಿಕೊಂಡು ಸಂಚರಿಸಿ ತ್ರಿಮತಸ್ಥರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾದರು,

ಬ್ರಾಹ್ಮಣರು ತಮ್ಮ ಒಳಪಂಗಡ ಮರೆತು ಸಮಾವೇಶದಲ್ಲಿ ಭಾಗವಹಿಸಿದ್ದರು, ಇದೆಲ್ಲಕ್ಕಿಂತ ಮುಖ್ಯವಾಗಿ ರಾಜ್ಯದ ಸಮಾಜದ ಎಲ್ಲ ಮಠಾಧೀಶರುಗಳ ಘನ ಉಪಸ್ಥಿತಿಯಲ್ಲಿ ಸಮಾವೇಶ ಯಶಸ್ಸು ಕಂಡಿತು.

ಇಡಬ್ಲುಎಸ್ದ್ದೇ ಚರ್ಚೆ.!
ಈ ಎರಡು ದಿನಗಳ ಸಮಾವೇಶದಲ್ಲಿ ಪ್ರಮುಖವಾಗಿ ಎರಡು ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರಸರ್ಕಾರ ಜಾರಿಗೆ ತಂದಿದ್ದ ಶೇ, 10 ರಷ್ಟು ಮೀಸಲಾತಿಯನ್ನು ರಾಜ್ಯದಲ್ಲಿ ಜಾರಿಗೆ ತರಬೇಕು ಎನ್ನುವುದು ಸೇರಿದಂತೆ ಬ್ರಾಹ್ಮಣರ ಮಠ, ಮಂದಿರ, ಮತ್ತು ಸಮಾಜದ ಜನರ ಆಸ್ತಿ ಪಾಸ್ತಿ ರಕ್ಷಣೆ ಸಂಬಂಧ ಕಾನೂನು ಹೋರಾಟ ಯಾವ ರೀತಿ ಇರಬೇಕು ಎನ್ನುವುದರ ಬಗ್ಗೆ ಬಹುತೇಕರು ಚರ್ಚೆ ನಡೆಸಿದರು.

ಇಲ್ಲಿ ಇದೆಲ್ಲಕ್ಕಿಂತ ಮುಖ್ಯವಾಗಿ ಕೇಂದ್ರ ಜಾರಿಗೆ ತಂದ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10 ರಷ್ಟು ಮೀಸಲಾತಿಯನ್ನು ರಾಜ್ಯ ಕೊಡದಿದ್ದರೆ ದೆಹಲಿ ಮಟ್ಟದಲ್ಲಿ ಹೋರಾಟ ನಡೆಸಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.
ಈ ಸಮಾವೇಶಕ್ಕೆ ಆಗಮಿಸಿದ್ದ ಬಿಹಾರ, ರಾಜಸ್ಥಾನ, ಮಹಾರಾಷ್ಟ್ರ ಸೇರಿದಂತೆ ಎಲ್ಲ ರಾಜ್ಯಗಳರವನ್ನು ಒಳಗೊಂಡು ಸಮಿತಿ ರಚನೆ ಮಾಡಬೇಕು. ಅದರ ನೇತೃತ್ವ ಕೂಡ ಅಶೋಕ ಹಾರನಹಳ್ಳಿ ವಹಿಸಿದರೆ ಸೂಕ್ತ ಎನ್ನುವ ಮಾತುಗಳುಇ ಸಭೆಯಲ್ಲಿ ಬಹುತೇಕರಿಂದ ಕೇಳಿ ಬಂದವು.

ಇದರ ಜೊತೆಗೆ ಬ್ರಾಹ್ಮಣ ಸಮುದಾಯದವರು ಜಮೀನು ವಕ್ಫ ಪಾಲಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೈಕೊಳ್ಳಬೇಕಾದ ಕಾನೂನು ಹೋರಾಟದ ರೂಪುರೇಷೆ ಸಿದ್ಧಪಡಿಸುವ ನಿಟ್ಟಿನಲ್ಲಿ ಮತ್ತೊಂದು ಸಭೆ ನಡೆಸುವ ತೀಮರ್ಾನವನ್ನು ಮಾಡಲಾಗಿದೆ ಎಂದು ಗೊತ್ತಾಗಿದೆ.

ಎಲ್ಲರ ಚಿತ್ತ ಬ್ರಾಹ್ಮಣರತ್ತ..!
ಎರಡು ದಿನಗಳ ಕಾಲ ರಾಜಕೀಯ ನಾಯಕರು ಆಡಿದ ಮಾತುಗಳನ್ನು ಗಮನಿಸಿದರೆ ಈಗ ಎಲ್ಲರ ಚಿತ್ತ ಬ್ರಾಹ್ಮಣರತ್ತ ನೆಟ್ಟಿದೆ ಎಂದು ಹೇಳಬಹುದು,

ಕಾಂಗ್ರೆಸ್ ನಾಯಕರು ಬ್ರಾಹ್ಮಣರು ಬ್ರ್ಯಾಂಡ್ ಆಗಬಾರದು ಎಂದು ಹೇಳಿದರೆ, ಬಿಜೆಪಿಯವರು ಸನಾತನ ಧರ್ಮ ಉಳಿವಿನ ನಿಟ್ಟಿನಲ್ಲಿ ಇನ್ನಷ್ಟು ಕಠಿಣ ನಿಲುವು ತಗೆದುಕೊಳ್ಳಬೇಕು ಎಂದು ಮಾತನಾಡಿದರು.
ಅದರಲ್ಲೂ ಮಾಜಿ ಸಚಿವ ಆರ್.ವಿ., ದೇಶಪಾಂಡೆ ಅವರು, ಬ್ರಾಹ್ಮಣರು ಬ್ರ್ಯಾಂಡ್ ಆಗಬಾರದು ಎನ್ನುತ್ತಲೇ ಎಲ್ಲವನ್ನೂತೆರೆದಿಟ್ಟರು. ನೀವು ಒಂದೇ ಕಡೆಗೆ ಬ್ರ್ಯಾಂಡ್ ಆದರೆ ಯಾವುದೇ ಪ್ರಯೋಜನವಿಲ್ಲ. ನನ್ನ ಕ್ಷೇತ್ರದಲ್ಲಿ ಬ್ರಾಹ್ಮಣ ಸಮಾಜದ ಸಂಖ್ಯೆ ಕಡಿಮೆ ಇದೆ, ಆದರೂ ಕೂಡ ನಾನು ಒಂಭತ್ತು ಬಾರಿ ಗೆದ್ದಿರುವೆ. ಹೀಗಾಗಿ ಎಲ್ಲರನ್ನು ನಂಬುವ ಕೆಲಸ ಮಾಡಿ ಎಂದು ಸೂಚ್ಯವಾಗಿ ಹೇಳಿದರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಯು.ಬಿ.ವೆಂಕಟೇಶ್ ಅವರು ಹಾರನಹಳ್ಳಿಯವರ ಮಾತನ್ನು ಉಲ್ಲೇಖಿಸಿ ಸಕರ್ಾರದ ಹತ್ತಿರ ಬೇಡಿಕೆ ಇಟ್ಟರೆ ತಪ್ಪಲ್ಲ ಎಂದು ಹೇಳಿದರು, ನಮ್ಮ ಬೇಡಿಕೆ ಈಡೇರಿಸುವುದು ಸಕರ್ಾರದ ಧರ್ಮ ಎಂದರು.

ಹಾರನಹಳ್ಳಿಯವರಿಗೆ ಬಂತು ಮತ್ತಷ್ಟು ಬಲ..!
ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಬ್ರಾಹ್ಮಣ ಸಮುದಾಯವನ್ನು ಒಂದೆಡೆ ಸೇರಿಸುವುದು ಕಷ್ಟ ಸಾಧ್ಯ.

ಆದರೆ ಅಶೋಕ ಹಾರನಹಳ್ಳಿ ಅವರ ಸಾರಥ್ಯದಲ್ಲಿ ಎರಡು ದಿನಗಳ ಕಾಲ ನಡೆದ ಸಮಾವೇಶವನ್ನು ಗಮನಿಸಿದರೆ ಹಿಂದೆ ಈ ರೀತಿ ಆಗಿಲ್ಲ. ಮುಂದೆ ಆಗುತ್ತೋ ಇಲ್ಲವೋ ಗೊತ್ತಿಲ್ಲ ಎನ್ನುವ ಮಾತುಗಳು ಸಭಾಂಗಣದಲ್ಲಿ ಕೇಳಿ ಬಂದವು.

ಅಶೋಕ ಹಾರನಹಳ್ಳಿಯವರ ಮಾತಿಗೆ ಓಗೊಟ್ಟು ಪಕ್ಷ ಬೇಧ,ಜಾತಿ ಎಲ್ಲವನ್ನು ಮರೆತು ಸಮಾವೇಶದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು,
ಹೀಗಾಗಿ ಸಮ್ಮೇಳನದಲ್ಲಿ ಸೇರಿದ್ದ ಶ್ರೀಗಳೂ ಸೇರಿದಂತೆ ಬಹುತೇಕರು ಸಮಾಜಕ್ಕೆ ಅಶೋಕ ಹಾರನಹಳ್ಳಿಯವರಂತಹ ಅಧ್ಯಕ್ಷರು ಸಿಕ್ಕಿದ್ದು ಭಾಗ್ಯವೇ ಸರಿ ಎಂದು ಉದ್ಘಾರ ತೆಗೆದರು.

.

Leave a Reply

Your email address will not be published. Required fields are marked *

error: Content is protected !!