ಕಾಂಗ್ರೆಸ್ ಕಸಕ್ಕೆ ಬೆಂಕಿ ಇಟ್ಟ ಪೊಲೀಸರು..!
ಬೆಳಗಾವಿ.
ಗಡಿನಾಡ ಬೆಳಗಾವಿಯಲ್ಲಿ ಸಂಚಾರಿ ಪೊಲೀಸರ ಪಾಡು ದೇವರೇ ಗತಿ ಎನ್ನುವ ಹಾಗಾಗಿದೆ.
ಇಲ್ಲಿನ ಪೊಲೀಸರಿಗೆ ಕೇವಲ ಸಂಚಾರ ನಿಯಂತ್ರಣ ಅಷ್ಟೇ ಅಲ್ಲ ಇನ್ನೂ ಬೇರೆ ಬೇರೆ ಕೆಲಸವನ್ನು ಮಾಡುವ ಪರಿಸ್ಥಿತಿ ಬಂದೊದಗಿದೆ.

ಅಂದರೆ ಪೌರ ಕಾಮರ್ಿಕರು ಮಾಡುವ ಕೆಲಸವನ್ನು ಸಹ ಪೊಲೀಸರೇ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಅವರದ್ದೇ ಇಲಾಖೆಯ ಅಧಿಕಾರಿಗಳು ತಂದಿಡುವ ಕೆಲಸ ಮಾಡುತ್ತಿದ್ದಾರೆ.
ಬೆಳಗಾವಿಯಲ್ಲಿ ಕಳೆದ ದಿನ ಕಾಂಗ್ರೆಸ್ ಸಮಾವೇಶ ನಡೆದಿತ್ತು, ಹೀಗಾಗಿ ಅಲ್ಲಿ ಎಸೆದುಹೋಗಿದ್ದ ಕಸವನ್ನು ಪಾಲಿಕೆಯ ಪೌರ ಕಾಮರ್ಿಕರಿಂದಲೋ ಸ್ವಚ್ಚಗೊಳಿಸಬೇಕಿತ್ತು,

ಆದರೆ ಆ ರೀತಿ ಮಾಡದೇ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೇ ಆ ಕಸವನ್ನು ಸಂಚಾರಿ ಪೊಲೀಸರಿಂದ ಸ್ವಚ್ಚಗೊಳಿಸಿದ್ದು ಈಗ ವ್ಯಾಪಕ ಚಚರ್ೆಗೆ ಕಾರಣವಾಗುತ್ತಿದೆ.
ಇಂದು ಸುಮಾರು 40 ಕ್ಕೂ ಹೆಚ್ಚು ಸಂಚಾರಿ ಪೊಲೀಸರು ಸಮವಸ್ತ್ರದಲ್ಲಿಯೇ ಕಸವನ್ನು ಆಯ್ದು ಬೆಂಕಿ ಹಚ್ಚಿತ್ತಿರುವ ದೃಶ್ಯ ಕಂಡು ಬಂದಿತು.