Headlines

ಕಾಂಗ್ರೆಸ್ ಕಚೇರಿಗಳಾದ ಪೊಲೀಸ್ ಠಾಣೆಗಳು..!

ಸಂಸದ ಈರಣ್ಣ ಕಡಾಡಿ ಆರೋಪ
ಕಾಂಗ್ರೆಸ್ ಕಚೇರಿಗಳಾದ ಪೊಲೀಸ್ ಠಾಣೆಗಳು..!

ಬೆಳಗಾವಿ:
ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಅಪರಾಧ ಪ್ರಕರಣಗಳು ಶೇ,56 ರಷ್ಟು ಹೆಚ್ಚಾಗಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದರು

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವುದರಿಂದ ಕಾನೂನು- ಸುವ್ಯವಸ್ಥೆ ಕುಸಿತವಾಗಿದೆ ಎಂದು ದೂರಿದರು.
ರಾಜ್ಯದ ಎಲ್ಲಾ ಪೋಲಿಸ್ ಸ್ಟೇಷನ್ ಗಳು ಕಾಂಗ್ರೆಸ್ ಕಚೇರಿಗಳಾಗಿ ಪರಿವರ್ತನೆಯಾಗಿವೆ ಎಂದು ದೂರಿದರು.
ಗೃಹ ಮಂತ್ರಿಗಳು ಕಾಣೆಯಾಗಿದ್ದಾರೆ. ಬೀದರ್, ಮಂಗಳೂರು, ಹುಬ್ಬಳ್ಳಿ ಮತ್ತು ರಾಜ್ಯದ ನಾನಾ ಭಾಗದಲ್ಲಿ ಹಾಡು ಹಗಲೇ ದರೋಡೆಗಳು ನಡೆದರೂ, ಯಾವುದೇ ಕ್ರಮ ಕೈಗೊಳ್ಳದ ಅಸಮರ್ಥ ಗೃಹ ಮಂತ್ರಿಗಳು ರಾಜ್ಯದಲ್ಲಿ ಇದ್ದಾರೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

Leave a Reply

Your email address will not be published. Required fields are marked *

error: Content is protected !!