ಮೃತರ ಕುಟುಂಬಕ್ಕೆ ತಲಾ 2 ಲಕ್ಷ
ಸಚಿವ ಸತೀಶ್ ಜಾರಕಿಹೊಳಿ ಘೋಷಣೆ
ಬೆಳಗಾವಿ:
ಉತ್ತರ ಪ್ರದೇಶದ ಪ್ರಯಾಗರಾಜ್ನ ಮಹಾ ಕುಂಭಮೇಳದಲ್ಲಿ ಮೃತಪಟ್ಟ ಬೆಳಗಾವಿಯವರಿಗೆ ತಲಾ 2 ಲಕ್ಷ ರೂ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಘೋಷಿಸಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಲು ಆಗಮಿಸಿದ್ದ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಈ ವಿಷಯ ತಿಳಿಸಿದರು,

ನಮ್ಮ ತಂದೆ ಸತೀಶ್ ಜಾರಕಿಹೊಳಿಯವರು ವೈಯಕ್ತಿಕವಾಗಿ ಈ ಪರಿಹಾರ ಧನ ಕೊಡುವುದಾಗಿ ಹೇಳಿದ್ದಾರೆ, ಅಷ್ಟೇ ಅಲ್ಲ ಸಕರ್ಾರದಿಂದಲೂ ಹೆಚ್ಚಿನ ಪರಿಹಾರ ಕೊಡಿಸುವುದಾಗಿತಿಳಿಸಿದ್ದಾರೆಂದು ಪ್ರಿಯಾವಂಕಾ ಹೇಳಿದರು.

144 ವರ್ಷಗಳ ಬಳಿಕ ಮಹಾಕುಂಭ ಮೇಳ ನಡೆಯುತ್ತಿದೆ. ಕೋಟ್ಯಾಂತರ ಭಕ್ತರು ಮಹಾಕುಂಭದ ಪುಣ್ಯ ಸ್ನಾನಕ್ಕೆ ಆಗಮಿಸಿದ್ದರಿಂದ್ದೀ ರೀತಿಯ ಘಟನೆಗಳು ನಡೆದಿವೆ, ಅಲ್ಲಿನ ಸಕರ್ಾರ ಕೂಡ ಜನದಟ್ಟಣೆ ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಆದರೂ ಇಂತಹ ದುರಂತ ನಡೆದಿದೆ ಎಂದರು.
ನೋವಾಗಿದೆ…
ಘಟನೆ ವಿಷಯ ತಿಳಿದು ತೀವ್ರ ನೋವಾಗಿದೆ. ಮೃತರ ಕುಟುಂಬಸ್ಥರಿಗೆ ಆ ಭಗವಂತ ನೋವು ಭರಿಸುವ ಶಕ್ತಿ ನೀಡಲಿ ಎಂದು ನಾನು ಕೇಳಿಕೊಳ್ಳುತ್ತೇವೆ ಎಂದು ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ನಾವು ಮೃತರ ಕುಟುಂಬಸ್ಥರ ಜೊತೆಗೆ ಇದ್ದೇವೆ ಎಂದರು.