ಬೆಳಗಾವಿ.
ಉತ್ತರಪ್ರದೇಶದ ಪ್ರಯಾಗರಾಜ ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟ ನಾಲ್ವರ ಮೃತದೇಹಗಳು ದೆಹಲಿಗೆ ತಲುಪಿವೆ.

ಅರುಣ ಕೋಪರ್ಡೆ ಮಹಾದೇವಿ ಭಾವನೂರ
ಎರಡು ಅಂಬ್ಯುಲೆನ್ಸ್ ಮೂಲಕ ಪ್ರಯಾಗರಾಜದಿಂದ ಮೃತದೇಹಗಳನ್ನು ತರಲಾಗುತ್ತಿತ್ತು.ಆದರೆ ಅದರಲ್ಲಿ ಒಂದು ಅಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ದೆಹಲಿ ವಿಮಾನ ನಿಲ್ದಾಣ ತಲುಪಿತು

ಮತ್ತೊಂದು ವಾಹನ ಹದಿನೈದು ನಿಮಿಷ ತಡವಾಯಿತು. ಹೀಗಾಗಿ ದೆಹಲಿಯಿಂದ ಮಧ್ಯಾಹ್ನ ಬಿಡುವ ವಿಮಾನದಲ್ಲಿ ಅರುಣ ಕೋಪರ್ಡೆ ಮತ್ತು ಮಹಾದೇವಿ ಬಾವನೂರ ಅವರ ಮೃತದೇಹವನ್ನು ತರಲಾಗುತ್ತಿದೆ ಅದು ಸಂಜೆ ೫.೩೦ ರ ಸುಮಾರಿಗೆ ಬೆಳಗಾವಿ ವಿಮಾನ ನಿಲ್ದಾಣ ತಲುಪಲಿದೆ.

ಜ್ಯೋತಿ ಹತ್ತರವಾಟ. ಮೇಘಾ ಹತ್ತರವಾಟ
ಇನ್ನು ಹದಿನೈದು ನಿಮಿಷ ತಡವಾಗಿ ಬಂದ ವಿಮಾನದಲ್ಲಿ ಹತ್ತರವಾಟ ಕುಟುಂಬದ ತಾಯಿ ಮಗಳ ಮೃತದೇಹಗಳಿದ್ದವು. ಹೀಗಾಗಿ ಸಂಜೆ 5.40 ಕ್ಕೆ ದೆಹಲಿ ಬಿಡುವ ವಿಮಾನವು ರಾತ್ರಿ8.30 ಕ್ಕೆ ಗೋವಾ ತಲುಪಲಿದೆ. ಬೆಳಗಾವಿಯಿಂದ ಮತ್ತೊಂದು ಅಂಬ್ಯುಲೆನ್ಸ್ ಮೂಲಕ ಹತ್ತರವಾಟ ಮೃತದೇಹಗಳನ್ನು ಬೆಳಗಾವಿಗೆ ತರಲಾಗುತ್ತಿದೆ. ಬಹುಶ: ಬೆಳಗಾವಿ ತಲುಪುವುದು ಮಧ್ಯರಾತ್ರಿ ಆಗಬಹುದು ಎಂದು ಕುಟುಂಬದವರು ತಿಳಿಸಿದ್ದಾರೆ.