
ಸಾಲಕ್ಕೆ ಕಿರಿಕಿರಿ ಕೊಟ್ಟರೆ 9483931100 call ಮಾಡಿ
ಬೆಳಗಾವಿ.ಇನ್ನು ಮುಂದೆ ಮೈಕ್ರೋ ಫೈನಾನ್ಸದವರು ನಿಮ್ಮ ಮನೆ ಬಳಿ ಬಂದು ಸಾಲ ವಸೂಲಾತಿಗೆ ಕಾಟ ಕೊಟ್ಟರೆ ಹೆದರಬೇಡಿ. ಆಗ ನೀವು ತಕ್ಷಣ 9483931100 ನಂಬರಗೆ ಫೋನ್ ಮಾಡಿ…!ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿಯಿಂದ ಇಂತಹ ಪ್ರಕಟನೆಯೊಂದು ಹೊರಬಿದ್ದಿದೆ, ಸಾಲ ವಸೂಲಾತಿಗೆ ಕರೆ ಮಾಡಿ ಅಥವಾ ಮನೆಹತ್ತಿರ ಬಂದುತೊಂದರೆ ಕೊಟ್ಟರೆ ಈ ಮೇಲ್ಕಂಡ ನಂಬರಗೆ ಕರೆ ಮಾಡಬಹುದು,ದಿನದ 24 ತಾಸು ಇಂತಹ ಸಹಾಯವಾಣಿಯನ್ನು ಆರಂಭಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ