Headlines

ಪಾಲಿಕೆ ಚೆಂಡು ಡಿಸಿ ಅಂಗಳಕ್ಕೆ..!

ತಾರಕಕ್ಕೇರಿದ ಅಧಿಕಾರಿಗಳ ಸಂಘರ್ಷ
ಸಂಧಾನಕಾರರಾಗಿ ಡಿಸಿ ಎಂಟ್ರಿ

ಆ ಒಬ್ಬರ ವರ್ಗಾವಣೆ ಒಂದೇ ದಿನದಲ್ಲಿ ರದ್ದಾಗಿದ್ದು ವಿವಾದದ ಮೂಲವೇ?

ಎಸ್ಸಿ,ಎಸ್ಟಿ ಸಿಬ್ಬಂದಿಗಳೇ ಇಲ್ಲಿ ಟಾರ್ಗೆಟ್ ಆಗ್ತಿದ್ದಾರಾ?

ಆರೋಗ್ಯ ಅಧಿಕಾರಿಗಳ ವಾಗ್ವಾದಕ್ಕೆ ಅಸಲಿ ಕಾರಣ ಏನು? ಅದರ ಬಗ್ಗೆ ತನುಖೆ ಏಕಿಲ್ಲ?

ಅಧಿಕಾರ ವಿಕೇಂದ್ರೀಕರಣ ಬದಲು ಏಕೀಕರಣ ಯಾಕೆ?

ಯಾರು ಹೇಳಿದರೂ ಈ ವಿವಾದ ಸಧ್ಯಕ್ಕೆ ನಿಲ್ಲುವ ಸೂಚನೆಗಳಿಲ್ಲ.

ಆರ್ ಐಗಳು ಹೈರಾಣಾಗಿ ಕೆಲವ ಮುಂದೆ ಹೇಳಿದ ಮಾತೇನು ಗೊತ್ತೆ? ಆ ಸತ್ಯ ಹೊರಬಂದರೆ ಯಾರಿಗೆ ಆಪತ್ತು?

ಬೆಳಗಾವಿ.
ಗಡಿನಾಡ ಬೆಳಗಾವಿ ಮಾನ ಹರಾಜು ಹಾಕುವಷ್ಟರ ಮಟ್ಟಿಗೆ ಹೋಗಿದ್ದ ಬೆಳಗಾವಿ ಮಹಾನಗರ ಪಾಲಿಕೆ ವಿವಾದಕ್ಕೆ ಪೂರ್ಣ ವಿರಾಮ ಹಾಕಬೇಕಾಗಿದೆ.
ಈ ನಿಟ್ಟಿನಲ್ಲಿ ಈಗ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಎಂಟ್ರಿ ಹೊಡೆದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಜಿಲ್ಲಾಧಿಕಾರಿಗಳು ಆಯುಕ್ತರನ್ನು ಕರೆದು ಸಮಗ್ರವಾಗಿ ವಿಚಾರಣೆ ಮಾಡಲಿದ್ದಾರೆ.

ಕಳೆದ ದಿನವಷ್ಟೆ ಪಾಲಿಕೆಯ ಎಸ್ಸಿ, ಎಸ್ಟಿ ನೌಕರ ಸಂಘದವರು ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನು ಭೆಟ್ಟಿ ಮಾಡಿ ಆಯುಕ್ತರ ವಿರುದ್ಧವೇ ಗಂಭೀರ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾರತಮ್ಯ ಏಕೆ?
ಆಯುಕ್ತರಾಗಿ ಶುಭ ಅಧಿಕಾರವಹಿಸಿಕೊಂಸ ಕೆಲವೇ ದಿನಗಳಲ್ಲಿ ಸುಮಾರು 15 ಕ್ಕೂ ಹೆಚ್ಚು ಜನರನ್ನು ವರ್ಗಾವಣೆ ಮಾಡಿದರು.
ಕೆಲವರ ಅಧಿಕಾರಕ್ಕೂ ಕತ್ತರಿ ಪ್ರಯೋಗ ಮಾಡಿದರು. ಕೆಲವರನ್ನು ನಾಮಕಾವಾಸ್ತೆ ಎನ್ನುವಂತಿಟ್ಟರು.
ಆಗ ಕೆಲವರು ಆಡಳಿತಾತ್ಮಕ ದೃಷ್ಟಿಯಿಂದ ಇದೆಲ್ಲ ಆಗಿರಬಹುದು ಅಂತ ಸುಮ್ಮನಾದರು.
ಅಚ್ಚರಿ ಸಂಗತಿ ಎಂದರೆ, ಅದರಲ್ಲಿ ಕೆಲವರ ವರ್ಗಾವಣೆ ಎರಡೇ ದಿನಗಳಲ್ಲಿ ರದ್ದಾದವು.
ಇನ್ನೂ ಕೆಲವರದ್ದು ಮೇಲಿಂದ ಮೇಲೆ ಟೇಬಲ್ ಚೇಂಜ್ ಆದವು.


ಇದು ಬಹುತೇಕರ ಅಸಮಾಧಾನಕ್ಕೆ ಕಾರಣವಾಯಿತು.
ಮತ್ತೊಂದು ಸಂಗತಿ ಎಂದರೆ, ಇಲ್ಲಿ ಎಸ್ಸಿ, ಎಸ್ಟಿ ನೌಕರರೇ ಹೆಚ್ಚು ಇಂತಹ ವರ್ಗಾವಣೆಯಿಂದ ಜರ್ಜರಿತರಾದರು ಎನ್ನುವ ಮಾತು ಕೇಳಿ ಬಂದವು.
ಯಾರದೊ ಒಬ್ಬರ ಮಾತು ಕೇಳಿ ಅಯುಕ್ತರು ಕೆಲವರನ್ನು ಸಿಬ್ಬಂದಿಯನ್ನು ಮೇಲಿಂದ ಮೇಲೆ ವರ್ಗಾವಣೆ ಮಾಡಿದರು ಎನ್ನುವುದು ಸಿಬ್ಬಂದಿಗಳ ಒಟ್ಟಾರೆ ಆರೋಪ..
ಇಲ್ಲಿ ಒಬ್ಬರನ್ಬು ತುರಮರಿ ಕಚರಾ ಡಿಪೋಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಅವರದ್ದು ಅದು ಅದೇ ದಿನ ಹೇಗೆ ರದ್ದಾಯಿತು ಎನ್ನುವುದು ಸಿಬ್ಬಂದಿಗಳ ಪ್ರಶ್ನೆ. ಅಂದರೆ ಇಲ್ಲಿ ಆಯುಕ್ತರು ಭಿನ್ನ ನ್ಯಾಯ ಮಾಡಿದರು ಎನ್ನುವುದು ಮಂತ್ರಿಗಳ ಮುಂದೆ ಹೇಳಿದ ಒಟ್ಟಾರೆ ಸಾರಾಂಶ.

ಈ ಹಿಂದೆ 15 ಜನರನ್ನು ವರ್ಗಾವಣೆ ಮಾಡಿದಾಗಲೂ ಕೂಡ ಜಿಲ್ಲಾ ಮಂತ್ರಿಗಳ ಗಮನಕ್ಕೆ ಬಂದಿರಲಿಲ್ಲ. ಆದರೆ ಯಾವಾಗ ಈ ವರ್ಗಾವಣೆಯಲ್ಲಿ ಕೆಲವರು ದುರುದ್ದೇಶಪೂರ್ವಕವಾಗಿ ಕೈ ಆಡಿಸಿದ್ದಾರೆ ಎನ್ನುವುದು ತಿಳಿಯಿತೋ ಆಗ ಖುದ್ದು ಸಚಿವರೂ ಸಹ ಅಸಮಾಧಾನ ಗೊಂಡಿದ್ದರು.

ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ಹಿಂದೆ ಅಂತರ್ ವರ್ಗಾವಣೆ ನಡೆದ ಸಂದರ್ಭದಲ್ಲಿಯೇ ಬಹುತೇಕ ನಗರಸೇವಕರು ಆಕ್ಷೇಪಣೆ ವ್ಯಕ್ತಪಡಿಸಿ ಆಯುಕ್ತರಿಗೆ ಪತ್ರ ಸಹ ನೀಡಿದ್ದರು. ಆಗ ಅದನ್ನೂ ಆಯುಕ್ತರು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ.
ಇಲ್ಲಿ ಆಯುಕ್ತರು ಆರೋಗ್ಯ ಶಾಖೆಯಲ್ಲಿ ಏನೆಲ್ಲ ನಡೆದರೂ ಅವರನ್ನು ಮಾತ್ರ ಏಕೆ ಕೇಳುತ್ತಿಲ್ಲ ಎನ್ನುವ ಬಹುದೊಡ್ಡ ಪ್ರಶ್ನೆ ಕಾಡುತ್ತಿದೆ.

ಬೆಳಗಾವಿ ಪಾಲಿಕೆ ಆಯುಕ್ತರ ವಿರುದ್ಧವೇ ಮೊಟ್ಟ ಮೊದಲ ಬಾರಿಗೆ ಬಹಿರಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಲಿಖಿತ ದೂರು ಹೋಗಿದೆ .
ಪಾಲಿಕೆಯಲ್ಲಿ ಎಸ್ಸಿ, ಎಸ್ಟಿ ನೌಕರರನ್ನೇ ಗುರಿಯಾಗಿಟ್ಟುಕೊಂಡು ಅನಗತ್ಯ ವರ್ಗಾವಣೆ ಮಾಡಲಾಗುತ್ತಿದೆ ಎನ್ನುವ ಮಾತಿದೆ. ಇದರಿಂದ ನೌಕರರು ಮಾನಸಿಕವಾಗಿ ಬಳಲುವ ಪರಿಸ್ಥಿತಿ ಬಂದೊದಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಕಳೆದ ದಿನ ಮಹಾನಗರ ಪಾಲಿಕೆ ಆಯುಕ್ತರ ಕೊಠಡಿಯಲ್ಲಿಯೇ ಆರೋಗ್ಯ ಶಾಖೆಯ ಇಬ್ಬರು ಅಧಿಕಾರಿಗಳು ಬೈದಾಡಿಕೊಂಡ ಘಟನೆ ಇನ್ನೂ ಮಾಸುವ ಮುನ್ನವೇ ಎಸ್ಸಿ ಎಸ್ಟಿ ನೌಕರರು ಪಾಲಿಕೆಯಲ್ಲಿ ತಮಗಾಗುತ್ತಿರುವ ದೌರ್ಜನ್ಯವನ್ನು ವಿರುದ್ಧ ಸಮರ ಸಾರಿದ್ದು ವಿಶೇಷವಾಗಿದೆ.
ಆದರೆ ಅಧಿಕಾರಿಗಳು ಯಾವ ಕಾರಣಕ್ಕೆ ಬೈದಾಡಿಕೊಂಡರು ಎನ್ನುವುದರ ಬಗ್ಗೆ ಆಳವಾದ ತನಿಖೆ ನಡೆಸಬೇಕಾದ ಅವಶ್ಯಕತೆ ಇದೆ.

ಮನವಿ ಪತ್ರದಲ್ಲಿ ಏನಿದೆ?
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಶ್ರೀಮತಿ. ಶುಭಾ ಬಿ. (ಕೆ.ಎಂ.ಎ.ಎಸ್ ಗ್ರೆಡ್) ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಸುಮಾರು 30 ರಿಂದ 40 ಸಿಬ್ಬಂದಿಗಳನ್ನು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿದ್ದಾರೆ. ಈ ಬಗ್ಗೆ ತಾವೇ ಖುದ್ದಾಗಿ ಕಡತಗಳನ್ನು ತರೆಸಿಕೊಂಡು ಪರಿಶೀಲಿಸಬಹುದು ಎಂದು ಸಚಿವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳಲ್ಲಿ ಗೊಂದಲ ಉಂಟಾಗಿ ದಿನ ನಿತ್ಯ ಕೆಲಸ ಕಾರ್ಯಗಳಲ್ಲಿ ಅಡೆತಡೆ ಆಗುತ್ತಿದೆ. ಅಷ್ಟೇ ಅಲ್ಲ ಸುಗಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ. ಇಲ್ಲಿ ವರ್ಗಾವಣೆಯಾದ ಕೆಲ ಸಿಬ್ಬಂದಿಗಳು ಬೇರೆ ಮೂಲಗಳಿಂದ ಸಂರ್ಪಕಿಸಿದಾಗ ಅಂತಹವರ ವರ್ಗಾವಣೆ ಕೈಬಿಟ್ಟು ಮತ್ತು ಅವರಿಗೆ ಬೇಕಾಗುವ ಹೆಚ್ಚುವರಿ ಕಾರ್ಯವನ್ನು ನಿಯೋಜಿಸಿದ್ದಾರೆಂದು ತಿಳಿಸಲಾಗಿದೆ .
ಆದರೆ ಇನ್ನುಳಿದ ವರ್ಗಾವಣೆಯಾದ ಸಿಬ್ಬಂದಿಗಳು ಮನವಿ ಮಾಡಿಕೊಂಡರೆ ಅಂತ ನೌಕರರಿಗೆ ಬದಲಾಣೆ ಆದ ಜಾಗಕ್ಕೆ ಹಾಜರಾಗದೆ ಇದ್ದಲ್ಲಿ ಅವರ ಅಮಾನತ್ಗೆ ಶಿಪಾರಸ್ಸು ಮಾಡಲಾಗುದೆಂದು ಬೆದರಿಕೆ ಹಾಕುವ ಕೆಲಸವನ್ನು ಆಯುಕ್ತರು ಮಾಡುತ್ತಿದ್ದಾರೆಂದು ಸಚಿವ ಜಾರಕಿಹೊಳಿಯವರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಶೇ ನೂರರಷ್ಟು ಅಧಿಕಾರಿ, ಸಿಬ್ಬಂದಿಗಳ ಅವಶ್ಯಕತೆ ಇದೆ. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಶೇ 30% ಮಾತ್ರ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ,
ಪ್ರತಿ ಒಬ್ಬ ಸಿಬ್ಬಂದಿಯು ಮೂರ್ನಾಲ್ಕು ಜನ ಸಿಬ್ಬಂದಿಗಳು ನಿರ್ವಹಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇಂತಹ ಸಮಯದಲ್ಲಿ ಆಯುಕ್ತರು ಪದೇ ಪದೇ ಸಿಬ್ಬಂದಿಗಳ ವರ್ಗಾವಣೆ ಮಾಡುವುದಲ್ಲದೇ ಅತಿ ಹೆಚ್ಚು ಕೆಲಸದ ಒತ್ತಡ ಹಾಕಿ ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಸದರಿ ವರ್ಗಾವಣೆ ಯಾದ ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗಿ ಕೆಲಸ ತಿಳಿದುಕೊಳ್ಳುವರಷ್ಟರಲ್ಲಿ ಮತ್ತೆ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡುತ್ತಿದ್ದಾರೆ.
ಹೀಗಾಗಿ ನೌಕರರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ.
ಇದೆಲ್ಲದರ ಜೊತೆಗೆ ಆಯುಕ್ತರು ಯಾವುದೇ ಒಂದು ಶಾಖೆಯ ಕೆಲಸ ಕಾರ್ಯಕ್ಕೆ ಸಂಬಂಧಿಸಿದಂತೆ ಶಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಾರದೆ ತಾವೇ ಸ್ವಇಚ್ಛೆಯಿಂದ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ದಿನ ನಿತ್ಯ ದಿನ ಪತ್ರಿಕೆಗಳಲ್ಲಿ ವರದಿಗಳೂ ಬರುತ್ತಿವೆ. ಇದರಿಂದ ಸಹಜವಾಗಿ ಆಡಳಿತಕ್ಕೆ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ನೌಕರರು ಆತಂಕ ವ್ಯಕ್ತಪಡಿಸಿದ್ದಾರೆ.
ಮಹಾನಗರ ಪಾಲಿಕೆಗಳ ಇತಿಹಾಸದಲ್ಲಿ ಕೆ.ಎಂ.ಎ.ಎಸ್ ಗ್ರೇಡ್ ಅಧಿಕಾರಿಯನ್ನು ಮೊಟ್ಟಮೊದಲು ಆಯುಕ್ತರರಾಗಿ ಬೆಳಗಾವಿ ಮಹಾನಗರ ಪಾಲಿಕೆಗೆ ನಿಯೋಜಿಸಲಾಗಿದೆ.
ರಾಜ್ಯದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಅತೀ ದೊಡ್ಡದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 5-6 ಲಕ್ಷಕ್ಕೂ ಅಧಿಕ ಜನ ಸಂಖ್ಯೆ ಇದೆ. ಹೀಗಾಗಿ ಸುಗಮ ಆಡಳಿತ ನಡೆಸಲು ಕೆ.ಎ.ಎಸ್ ಹಿರಿಯ ಶ್ರೇಣಿ ಅಥವಾ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಲು ಅವಶ್ಯಕತೆವಿರುತ್ತದೆ ಎನ್ನುವುದನ್ನು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ..

ಈ ಹಿನ್ನೆಲೆಯಲ್ಲಿ ಸರ್ಕಾರವು ಕೆಎಎಸ್ ಹಿರಿಯ ಶ್ರೇಣಿ ಅಥವಾ ಐಎಎಸ್ ಅಧಿಕಾರಿಗಳನ್ನು ಬೆಳಗಾವಿ ಮಹಾನಗರ ಪಾಲಿಕೆಗೆ ನಿಯೋಜಿಸಬೇಕೆಂದು ಎಸ್ಸಿ ಎಸ್ಟಿ ನೌಕರರ ಸಂಘವು ಸಚಿವರಲ್ಲಿ ಮನವಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!