Headlines

ಕೇಜ್ರಿವಾಲ್ ಶಕುನಿ ಪ್ರತಿರೂಪ- ಅಭಯ

ಬೆಳಗಾವಿ
ದಿಲ್ಲಿ ಚುನಾವಣೆಯಲ್ಲಿಶಕುನಿಯ ಪ್ರತಿರೂಪವಾಗಿದ್ದ ಕೇಜ್ರಿವಾಲ್ರ ರಾಜಕೀಯ ಅಂತ್ಯವಾಗಿದೆ ಎಂದು ಬಿಜೆಪಿ ಶಾಸಕ ಅಭಯ ಪಾಟೀಲ ಹೇಳಿದರು.
ದೆಹಲಿಯಲ್ಲಿ ಬಿಜೆಪಿ ಗೆಲುವಿನ ನಂತರಬೆಳಗಾವಿಯಲ್ಲಿ ನಡೆದ ವಿಜಯೋತ್ಸವ ಸಂದರ್ಭದಲ್ಲಿ ಅವರು ಮಾತನಾಡಿದರು.
ಭ್ರಷ್ಟಾಚಾರ ವಿರೋಧಿ ಆಂದೋಲನ ಮಾಡಿ ರಾಜಕೀಯಕ್ಕೆ ಬಳಿಸಿಕೊಂಡ ಕೇಜ್ರಿವಾಲರು ಹತ್ತು ವರ್ಷ ದೆಹಲಿಯಲ್ಲಿ ಜನರನ್ನು ಮುರ್ಖ ಮಾಡುವ ಕೆಲಸ ಮಾಡಿದ್ದರು.

ಈಗ ಜನರು ಜಾಣರಾಗಿ ಕೇಜ್ರಿವಾಲರನ್ನು ಮನೆಗೆ ಕಳಿಸಿ ಬಿಜೆಪಿ ಗೆಲ್ಲಿಸಿದ್ದಾರೆಂದು ಅಭಯ ಪಾಟೀಲ ಹೇಳಿದರು,
ಮುಂದಿನ ದಿನಗಳಲ್ಲಿ ಪಂಜಾಬ್ನಲ್ಲಿನ ಆಪ್ ಸಕರ್ಾರದ ಪರಿಸ್ಥಿತಿ ಕೂಡ ಇದೇ ರೀತಿ ಆಗುತ್ತದೆ.
ಇನ್ನು ಕೆಲವೇ ದಿನಗಳಲ್ಲಿ ದೇಶದಲ್ಲಿ ಆಪ್ ಅನ್ನುವ ಪಕ್ಷ ನಿನರ್ಾಮ ಆಗುತ್ತದೆ ಎಂದು ಅಭಯ ಭವಿಷ್ಯ ನುಡಿದರು.
ದೆಹಲಿ, ಪಂಜಾಬ್ ಬಳಿಕ ಕನರ್ಾಟಕದಲ್ಲಿ ಇನ್ನೊಂದು ವಾರದಲ್ಲಿ ಎಲ್ಲಾ ಸರಿಯಾಗುತ್ತದೆ ಎಂದರು.

ಕರ್ನಾಟಕ ಬಿಜೆಪಿಯಲ್ಲಿನ ಆಂತರಿಕ ಕಲಹ ಹೈಕಮಾಂಡ್ ಸರಿ ಪಡಿಸುತ್ತದೆ. ನನ್ನದು ಪಕ್ಷದ ಬಣ, ಹೈಕಮಾಂಡ್ ಎನೂ ಹೇಳುತ್ತದೆಯೋ ಅದನ್ನು ಕೇಳುತ್ತೇನೆ ಎಂದರು,
ಬೊಮ್ಮಾಯಿ ಅವರನ್ನು ರಾಜ್ಯಾಧ್ಯಕ್ಷ ಮಾಡುತ್ತಾರೆ ಎಂಬ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಅವರು, ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆ ಗೊತ್ತಿಲ್ಲ ಎಂದರು.
ಕರ್ನಾಟಕದಲ್ಲಿ ಸಮರ್ಥ ನಾಯಕರು ಬಹಳಷ್ಟು ಜನರಿದ್ದಾರೆ. ನಮ್ಮ ಪಕ್ಷದಲ್ಲಿ ಮೊದಲ ಬಾರಿ ಶಾಸಕರಾದವರಿಗೆ ಸಿಎಂ ಮಾಡಿದ್ದಾರೆ. ಬಿಜೆಪಿಯಲ್ಲಿ ಲೀಡರ್ ಕೊರತೆ ಇಲ್ಲ. ಈಗ ಗುರುತಿಸುವ ಸಮಯ ಬಂದಿದೆ ಗುರುತಿಸುತ್ತಾರೆಂದರು

Leave a Reply

Your email address will not be published. Required fields are marked *

error: Content is protected !!