
ಪಾಲಿಕೆ ಜಂಗೀ ಕುಸ್ತಿಗೆ ಅಭಯ- ಸತೀಶ್ ರೆಡಿ?
ಮತ್ತೇ ಸಚಿವ- ಶಾಸಕರ ಜಂಗಿಕುಸ್ತಿ ಶುರು ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಈಗ ಮತ್ತೊಂದು ರೀತಿಯ ಜಂಗೀ ಕುಸ್ತಿಗೆ ಅಖಾಡಾ ಸಜ್ಜಾಗುತ್ತಿದೆ. ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಕಿಂಗ್ ಮೇಕರ ಎನಿಸಿಕೊಂಡ ಶಾಸಕ ಅಭಯ ಪಾಟೀಲರು ಬರೀ ಜಂಗೀ ಕುಸ್ತಿ ಹಿಡಿಯುವುದರಲ್ಲಿಯೇ ಕಾಲ ಕಳೆಯಬೇಕಾದ ಪರಿಸ್ಥಿತಿ ಬಂದೊದಗಿದೆ. ಪಾಲಿಕೆಯಲ್ಲಿ ಅಧಿಕಾರಿಗಳ ನಡುವೆ ಕುಸ್ತಿ ನಡುವೆ ರಾಜಕಾರಣಿಗಳ ಈ ಕುಸ್ತಿ ಅಖಾಡಾವನ್ನು ಮತ್ತಷ್ಟು ಕಾವೇರುವಂತೆ ಮಾಡಿದೆ. 138 ಪಿಕೆಗಳ ವಿಷಯ, ಆಸ್ತಿ ತೆರಿಗೆ…