ಬೆಳಗಾವಿ.
ಬೈಲಹೊಂಗಲ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಯೊಬ್ಬರ ಲಂಚಬಾಕತನದ ಭಯಂಕರ ಕಥಾನಕ ಇದು
ಈ ಲಂಚಬಾಕರನದ ನಾಲ್ಕೈದು ಆಡಿಯೋ ಎರಡು ವಿಡಿಯೋಗಳನ್ನು ನೋಡಿದರೆ, ಕೇಳಿದರೆ ಇಲ್ಲಿ ದುಡ್ಡಿಲ್ಲದಿದ್ದರೆ ಯಾವ ಕೆಲಸವೂ ಆಗಲ್ಲ ಎನ್ನುವುದು ಸ್ಪಷ್ಟ.

ಇನ್ನೂ ಸ್ಪಷ್ಟವಾಗಿ ಹೇಳುವುದೆಂದರೆ, ಶಾಸಕರು, ಅಧಿಕಾರಿಗಳಿಗೂ ಹೋಗುತ್ತೆ. ಇದರಲ್ಲಿ ನನ್ನದೇನೂ ಇಲ್ಲ ಎನ್ನುವ ಸಾಚಾತನದ ಮಾತನ್ನು ಆಲಿಸಿದರೆ ಭ್ರಷ್ಟ ವ್ಯವಸ್ಥೆ ಯಾವ ಮಟ್ಟಕ್ಕೆ ಬಂತು ನಿಂತಿದೆ ಎನ್ನುವುದನ್ನು ಊಹಿಸಬಹುದು.

ಅಧಿಕಾರಿಗಳು ನಾಲ್ಕು ಗೋಡೆಯ ಮಧ್ಯದಲ್ಲಿ ಕುಳಿತು ಪಾರದರ್ಶಕತೆ ಬಗ್ಗೆ ಮಾತಾಡಿದರೆ ಅಧೀನ ಸಿಬ್ಬಂದಿಗಳು ಅದರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಅಂದುಕೊಂಡರೆ ಅದು ಮೂರ್ಖತನ ಎನ್ನಬಹುದು.
ಆದರೆ ಅಂತಹವರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಬೇಕಿರುವುದು ಅಧಿಕಾರಿಗಳ ಜವಾಬ್ದಾರಿ. ಈ ಪ್ರಕರಣದಲ್ಲಿ ಸ್ಮಾರ್ಟ ಅಧಿಕಾರಿ ಎಂದೇ ಹೆಸರಾಗಿರುವ ಜಿ.ಪಂ ಸಿಇಓ ಏನು ಮಾಡುತ್ತಾರೆ ಕಾದು ನೋಡೋಣ.