ಬೆಳಗಾವಿ ಪಾಲಿಕೆ ರಾಜಕಾರಣದಲ್ಲಿ ಗೋಕಾಕ ಸಾಹುಕಾರ ರಮೇಶ್ ಜಾತಕಿಹೊಳಿ ಎಂಟ್ರಿ. ಪಾಲಿಕೆ ಬೆಳವಣಿಗೆಗಳ ಬಗ್ಗೆ ಚರ್ಚೆ. ಮೇಯರ್ ಮಾಡಿ ಎಂದು ರಮೇಶ್ ಮೇಲೆ ಒತ್ತಡ ಹಾಕಿದವರು ಯಾರು? ಈಗಿನಿಂದಲೇ ಮೇಯರ್ ಹುದ್ದೆ ಮೇಲೆ ಕಣ್ಣು. ಈಗ ಮೇಯರ್. ನೆಕ್ಸ್ಟ MLA ಅಂತ ಅಂದ ನಗರಸೇವಕ ಯಾರು?
ಬೆಳಗಾವಿ.
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ರಾಜಕಾರಣಕ್ಕೆ ಈಗ ಗೋಕಾಕ ಸಾಹುಕಾರ್ ಎಂದೇ ಕರೆಯಿಸಿಕೊಳ್ಳುವ ರಮೇಶ್ ಜಾರಕಿಹೊಳಿ ಎಂಟ್ರಿ ಹೊಡೆದಿದ್ದಾರೆ.
ಕಳೆದ ದಿನ ಬೆಳಗಾವಿ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಅವರು ಪಾಲಿಕೆಯಲ್ಲಿ ಸಧ್ಯ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕೆಲ ಸಿಬ್ಬಂದಿಗಳನ್ನು ಕರೆದು ಚರ್ಚೆ ನಡೆಸಿದರು.

ಅಚ್ಚರಿ ಸಂಗತಿ ಎಂದರೆ, ಇದೇ ಸಂದರ್ಭದಲ್ಲಿ ಕೆಲ ಬಿಜೆಪಿ ನಗರಸೇವಕರೂ ಸಹ ರಮೇಶ್ ಜಾರಕಿಹೊಳಿ ಅವರನ್ನು ಭೆಟ್ಟಿ ಮಾಡಿದರು.ಅಷ್ಟೇ ಅಲ್ಲ ಮೇಯರ ಹುದ್ದೆಗೆ ನನ್ನನ್ನೇ ಪರಿಗಣಿಸುವಂತೆ ಒತ್ತಡ ಹೇರುವ ಕೆಲಸ ಮಾಡಿದರು ಎಂದು ಗೊತ್ತಾಗಿದೆ.
ಇನ್ನೂ mayor,dy mayor ಚುನಾವಣೆಗೆ ದಿನಾಂಕ ಸಹ ನಿಗದಿಯಾಗಿಲ್ಲ.ಆಗಲೇ ಕೆಲವರು ಈ ರೀತಿಯ ಒತ್ತಡ ತಂತ್ರ ನಡೆಸಿದ್ದು ವಿಶೇಷವಾಗಿದೆ.
ಮೂಲಗಳ ಪ್ರಕಾರ ಒಂದೆರಡು ದಿನಗಳಲ್ಲಿ ಆರ್ ಸಿ ಕಚೇರಿಯಿಂದ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆಗಳಿವೆ