Headlines

AKBMS ಗೆ ಸ್ಪರ್ಧೆಗೆ ಹಾರನಹಳ್ಳಿ ಒಪ್ಪಿಗೆ

ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ‌ಮಾಡಲು ಕೊನೆಗೂ ಒಪ್ಪಿದ ಅಶೋಕ ಹಾರನಹಳ್ಳಿ.

ಸ್ಪರ್ಧೆಗೆ ಒಪ್ಪುವಂತೆ ಅವರ ಸಮ್ನುಖದಲ್ಲಿಯೇ ಧರಣಿ ಕುಳಿತ ರಾಜ್ದದ ಸಮಾಜದ ಜನ.

ಸ್ನೇಹ ಸಂಭ್ರಮ ದಲ್ಲಿ ಸ್ಪರ್ಧೆಗೆ ಸಮ್ಮತಿ ಸೂಚಿಸಿದ ಅಶೋಕ ಹಾರನಹಳ್ಳಿ.

ಮನಸ್ಸು ಬದಲಿಸುವಂತೆ ಮಾಡಿದ ಮಹಾಸಭಾ ಪದಾಧಿಕಾರಿಗಳು, ಹಿತೈಷಿಗಳು.

Akbms ಗೆ ಹಾರನಹಳ್ಳಿ ಹೆಸರೇ ಒಂದು ಶಕ್ತಿ. ಶನೆ ಬಲ.

ಬೆಂಗಳೂರು.
ಇದೇ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಸರ್ವರ ಆಗ್ರಹದ ಮೇರೆಗೆ ಹಾಲಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಮತ್ತೊಮ್ನೆ ಸ್ಪರ್ಧಿಸಲು ಒಪ್ಪಿಕೊಂಡರು.
ಎಕೆಬಿಎಂಎಸ್ ಹಮ್ಮಿಕೊಂಡಿದ್ದ ಮಹಾ ಸಮ್ಮೇಳನ ಯಶಸ್ವಿ ಹಿನ್ನೆಲೆಯಲ್ಲಿ ಬಸವನಗುಡಿಯಲ್ಲಿ ಆಯೋಜನೆ‌ ಮಾಡಲಾದ ಸ್ನೇಹ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಈ ಒಪ್ಪಿಗೆ ನೀಡಿದರು.

ಕಳೆದ ಹಲವು ದಿನಗಳಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಲ್ಲ ಎನ್ನುವ ಮಾತುಗಳನ್ನು ಅಶೋಕ ಹಾರನಹಳ್ಳಿಯವರು ಆಡಿದ್ದರು ಎನ್ನುವ ಮಾತುಗಳಿದ್ದವು.

ಈ ಹಿನ್ನೆಲೆಯಲ್ಲಿ ಈ ಸ್ನೇಹ ಸಂಭ್ರಮ ದಲ್ಲಿ ಅಲ್ಲಿ ಸೇರಿದ್ದ ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿದ್ದ ಮಹಾಸಭಾ ಪದಾಧಿಕಾರಿಗಳು, ಹಿತೈಷಿಗಳು ಮತ್ತೊಮ್ಮೆ ಹಾರನಹಳ್ಳಿ ಎನ್ನುವ ಘೋಷಣೆಯೊಂದಿಗೆ ವೇದಿಕೆಗೆ ನುಗ್ಗಿ ಅವರ ಮತ್ತು ಅವರ ಧರ್ಮಪತ್ನಿಯ ಸಮ್ನುಖದಲ್ಲಿ ಧರಣಿ‌ ಕುಳಿತಂತೆ ಮಾಡಿದರು. ಅಷ್ಟೇ ಅಲ್ಲ ಸ್ಪರ್ಧೆಗೆ ಒಪ್ಪುವ ತನಕ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಕೊನೆಗೆ ಎಲ್ಲರ ಆಗ್ರಹ, ಪ್ರೀತಿಯನ್ನು ಕಂಡ ಅಶೋಕ ಹಾರನಹಳ್ಳಿ ಯವರು ಸ್ಪರ್ಧೆಗೆ ಸಹಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅವರ ಹೆದರಿನಲ್ಲಿ ಜೈಕಾರ ಘೋಷಣೆಗಳು ಮೊಳಗಿದವು.
ಈ ಸಂದರ್ಭದಲ್ಲಿ ಮಾತನಾಡಿದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಬಹುತೇಕರು, ಅಧ್ಯಕ್ಷರ ಆಯ್ಕೆ ಅವಿರೋಧ ಆಗುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನ ಮಾಡೋಣ ಎಂದರು.

ಅಷ್ಟೆ ಅಲ್ಲ ಹಾರನಹಳ್ಳಿ ಹೆಸರು ಎಕೆಬಿಎಂಎಸ್ ಗೆ ಒಂದು ಪ್ರಭಲ ಶಕ್ತಿ. ಆ ಶಕ್ತಿ ಮಹಾಸಭಾ ಜೊತೆಗಿದ್ದರೆ ಎಂತಹುದೇ ಕ್ಲಿಷ್ಟಕರ ಪರಿಸ್ಥಿತಿ ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಮಹಾಸಭಾಗೆ ಬರುತ್ತದೆ.‌ ಇದೆಲ್ಲದರ ಜೊತೆಗೆ ಮಹಾಸಭಾವನ್ನು ಇಡೀ ರಾಜ್ಯವ್ಯಾಪಿ ಪರಿಚಯಿಸಿದ ಮತ್ತು ಪರಿಚಯಿಸಿದ ಕೀರ್ತಿ ಅಶೋಕ‌ ಹಾರನಹಳ್ಳಿಯವರಿಗೆ ಸಲ್ಲುತ್ತದೆ ಎಂದು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಸಮಾವೇಶದ ಯಶಸ್ದಿಗಾಗಿ ಶ್ರಮಿಸಿದ ಮತ್ತು ಸಹಕಾರ ನೀಡಿದ ಪ್ರತಿಯೊಬ್ಬರನ್ನು ವೇದಿಕೆಗೆ ಕರೆದು ಗೌರವಿಸುವ ಕೆಲಸ ಮಾಡಲಾಯಿತು.
ಮತ್ತೊಂದು ಕಡೆಗೆ ರಾಜ್ಯದ ಸಮಾಜದ ಜನರ ಪರವಾಗಿ ಅಶೋಕ ಹಾರನಹಳ್ಳಿ ದಂಪತಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ತಿಕ್ ಬಾಪಟ್, ಸುಧಾಕರ ಬಾಬು ಕೆ ದಿವಾಕರ, ಸೇರಿದಂತೆ ಮಹಾಸಭಾ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!