ಬೆಳಗಾವಿ ಮೇಯರ್ ಚುನಾವಣೆಗೆ ನಾಳೆ ಬಾ..!

ಪಾಲಿಕೆ ಇಬ್ಬರ ಸದಸ್ಯತ್ವ ರದ್ದತಿ ಆಯಿತು.

ಇನ್ಮೂ ನಾಲ್ಕು‌ ಜನ‌ ನಗರಸೇವಕರ ವಿರುದ್ಧವೂ ಪ್ರಾದೇಶಿಕ ಆಯುಕ್ತರಿಗೆ ದೂರು

ಅದರಲ್ಲಿ ಬಿಜೆಪಿಯ ಮೂವರು ಮತ್ತು ಕಾಂಗ್ರೆಸ್ ನ‌ ಒಬ್ಬರ ಹೆಸರು ಪ್ರಸ್ತಾಪ.

ದಾಖಲೆ ಸಂಗ್ರಹವಾಗಿದೆ ಎಂದ ದೂರುದಾರರು.

ಬೆಳಗಾವಿ.

ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಮೇಯರ, ಉಪಮೇಯರ್ ಚುನಾವಣೆ ಸಧ್ಯಕ್ಕೆ ನಡೆಯುವ ಲಕ್ಷಣಗಳು ಕಾಣಸಿಗುತ್ತಿಲ್ಲ.

ಈಗಿನ ಮೇಯರ್ ಅವಧಿ ಕಳೆದ ದಿ.‌14 ರಂದು ಮುಗಿದಿದೆ. ಆದರೆ ಈಗಾಗಲೇ ಪ್ರಾದೇಶಿಕ ಆಯುಕ್ತರು ಈ ಚುನಾವಣೆ ಸಂಬಂಧ ಅಧಿಸೂಚನೆ ಹೊರಡಿಸಬೇಕಿತ್ತು.‌ಆದೃ ತಾಂತ್ರಿಕ ಕಾರಣ ಮುಂದಿಟ್ಡುಕೊಂಡು ಚುನಾವಣೆಗೆ ನಾಳೆ ಬಾ ಎನ್ನುವ ಸ್ಥಿತಿ ಒದಗಿ ಬಂದರೂ ಅಚ್ಚರಿಪಡಬೇಕಿಲ್ಲ.

ಬೆಳಗಾವಿ ತಿನಿಸುಕಟ್ಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರು‌ ತಮ್ಮ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ನಗರಸೇವಕರಾದ ಜಯಂತ ಜಾಧವ ಮತ್ತು ಮಂಗೇಶ್ ಪವಾರ ಅವರ ಸದಸ್ಯತ್ವ ರದ್ದು ಮಾಡಿ ಆದೇಶ ಹೊರಡಿಸಿದ್ದರು.

ಈ‌ ಆದೇಶ ಪ್ರಶ್ನಿಸಿ ಇಬ್ಬರೂ ನಗರಸೇವಕರು ಹೈಕೋರ್ಟ ಮೆಟ್ಟಿಲು ಹತ್ತಿದ್ದರು. ಆದರೆ ಕೋರ್ಟ ಪ್ರಾದೇಶಿಕ ಆಯುಕ್ತರ ಆದೇಶವನ್ನು ಎತ್ತಿ ಹಿಡಿದಿತ್ತು. ಬದಲಾಗಿ ಪರಿಹಾರಕ್ಕಾಗಿ ಸರ್ಕಾರವನ್ನು ಸಂಪರ್ಕಿಸಲು ಸೂಚನೆ ಕೊಟ್ಟಿತ್ತು.

ಈಗ ಬೆಳಗಾವಿ ಮಹಾನಗರ ಪಾಲಿಕೆಯವರು ಈ ಇಬ್ಬರ ಸದಸ್ಯತ್ವ ರದ್ದತಿ ಜೊತೆಗೆ ಮೇಯರ್ ಚುನಾವಣೆಗೆ ಮತದಾರರ ಪಟ್ಟಿಯಲ್ಲಿ ಇವರ ಹೆಸರನ್ನು ಕಡಿತ ಮಾಡಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದರು.

ಆದರೆ ಇಲ್ಲಿ ಇವರಿಬ್ಬರ ಹೆಸರು ಕಡಿತ ಮಾಡಲು ಪಾಲಿಕೆಯ ಸಾಮಾನ್ಯ ಸಭೆ ನಡೆಯಬೇಕಂತೆ.ಆದರೆ ಈಗ ಮೇಯರ್ ಅಧಿಕಾರ‌ ಮುಗಿದಿದ್ದರಿಂದ ಸಾಮಾನ್ಯ ಸಭೆ ಕರೆಯಲು ಆಗಲ್ಲ. ಹೀಗಾಗಿ ಪ್ರಾದೇಶಿಕ ಆಯುಕ್ತರು ಇದೇ ತಾಂತ್ರಿಕ ಕಾರಣಕೊಟ್ಟು ಚುನಾವಣೆ ಮುಂದಕ್ಕೆ ಹಾಕುವ ಸಾಧ್ಯತೆಗಳು ಹೆಚ್ಚಾಗಿವೆ.

ಅಚ್ಚರಿ ಸಂಗತಿ ಎಂದರೆ ಇದೇ ದಾರಿಯಲ್ಲಿ ಪಾಲಿಕೆ ಆಡಳಿತ ಪಕ್ಷದ ಮೂವರು ಮತ್ತು ವಿರೋಧ ಪಕ್ಚದ ಒಬ್ಬರ ಹೆಸರು ಸಹ ಚಾಲ್ತಿಯಲ್ಲಿವೆ. ಅದರ ಬಗ್ಗೆ ಕೂಡ ದೂರು ಈಗ ಪ್ರಾದೇಶಿಕ ಆಯುಕ್ತರ ಕಚೇರಿ ಮೆಟ್ಟಿಲು ಹತ್ತುವ ಸಾಧ್ಯತೆಗಳು ಹೆಚ್ಚಾಗಿವೆ.

Leave a Reply

Your email address will not be published. Required fields are marked *

error: Content is protected !!