ಬೆಳಗಾವಿ ಕನ್ನಡಿಗರ ಸ್ವಾಭಿಮಾನ ಕೆಣಕಿದ ಕೆಲ ಮರಾಢಿ ಭಾಷಿಕ ಪುಂಡರು.
ಸಚಿವೆ ಹೆಬ್ಬಾಳಕರ ತವರು ಗ್ರಾಮೀಣ ಕ್ಷೇತ್ರದಲ್ಲಿ ನಡೆದ ಘಟನೆ
ಬಸ್ ಅಡ್ಡಗಟ್ಟಿ ನಿರ್ವಾಹಕ, ಚಾಲಕನ ಮೇಲೆ ಹಲ್ಲೆ, ಕನ್ನಡ ಸಂಘಟನೆಗಳ ಆಕ್ರೋಶ.
ಚಿತ್ರದುರ್ಗ ಬಳಿ ಮಹಾ ಬಸ್ಸಿಗೆ ಮತ್ತು ಚಾಲಕನ ಮುಖಕ್ಕೆ ಮಸಿ. ಇಷ್ಟೆಲ್ಲ ಆದರೂ ತುಟಿಪಿಟಕ್ಕೆನ್ನದ ಸಚಿವರು.
ಬೆಳಗಾವಿ.
ಕನ್ನಡ ಮಾತನಾಡಿದ ಸಾರಿಗೆ ಸಂಸ್ಥೆಯ ನಿರ್ವಾಕನನ್ನ ಥಳಿಸಿದ ಘಟನೆ ಬೆನ್ನ ಹಿಂದೆಯೇ ಕನ್ನಡಿಗರ ಆಕ್ರೋಶ ಮುಗಿಲು ಮುಟ್ಟಿದೆ.
ಬೆಳಗಾವಿಯ ಕೆಲ ಮರಾಠಿ ಭಾಷಿಕ ಪುಂಡರು ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ್ದ ಮಹಾದೇವ ಹುಕ್ಕೇರಿಯನ್ನು 20 ಜನರ ಪುಂಡರು ಬಸ್ ಅಡ್ಡಗಟ್ಟಿ ಥಳಿಸಿದ್ದರು. ಚಾಲಕನ ಮೇಲೂ ಕೈ ಮಾಡಿದ್ದರು.

ಈ ಘಟನೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ತವರು ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ ನಡೆದಿದ್ದರೂ ಕೂಡ ಇದುವರೆಗೂ ಅದರ ಬಗ್ಗೆ ತುಟಿಪಿಟಕ್ಕೆಂದಿಲ್ಲ.
ಇದೆಲ್ಲದರ ನಡುವೆ ಬೆಳಗಾವಿ ಪೊಲೀಸರೂ ಕೂಡ ಇದನ್ನು ಹಗುರವಾಗಿ ಪರಿಗಣಿಸಿದ್ದರು. ಆದರೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ ಮೇಲೆ ಪೊಲೀಸರು ಎಚ್ಚೆತ್ತುಕೊಂಡರು.

ಈಗ ಈ ಕಿಚ್ಚು ರಾಜ್ಯವ್ಯಾಪಿ ಹಬ್ಬುವ ಲಕ್ಷಣಗಳು ಕಾಣಸಿಗುತ್ತವೆ. ಚಿತ್ರದುರ್ಗ ಜಿಲ್ಲೆಯ ಐಮಂಗಲ್ ಟೋಲ್ ಬಳಿ ಕನಾ೯ಟಕ ನವನಿಮಾ೯ಣ ಸೇನೆ ಚಿತ್ರದುಗ೯ ಜಿಲ್ಲಾ ಘಟಕದ ಪದಾಧಿಕಾರಿಗಳು ಮಹಾ ಬಸ್ಜಿಸಿಗೆ ಅಷ್ಟೇ ಅಲ್ಲ ಅದರ ಚಾಲಕನಿಗೂ ಮಸಿ ಬಳಿದು ತಮ್ಮಆಕ್ರೋಶ ಹೊರಹಾಕಿದರು. ಸಂಘಟನೆ ಜಿಲ್ಲಾಧ್ಯಕ್ಷ ತಿಪ್ಪೇಶ್ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.
ಗಮನಿಸಬೇಕಾದ ಸಂಗತಿ ಎಂದರೆ, ಈ ಘಟನೆಯಲ್ಲಿ ಆರೋಪಿಗಳನ್ನು ಬಂಧಿಸದಿದ್ದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಎಚ್ಚರಿಸಿದ್ದಾರೆ.