ಬೆಳಗಾವಿ.
ಅಂತರಾಷ್ಟ್ರೀಯ ಮಾತೃಭಾಷೆಯ ದಿನವೇ ಕನ್ನಡದಲ್ಲಿ ಮಾತಾಡಿ ಎಂದಿದ್ದ ಸಾರಿಗೆ ಸಂಸ್ಥೆಯ ನಿರ್ವಾಹಕ ನನ್ನು 20 ಜನರಿದ್ದ ಮರಾಠಿ ಭಾಷಿಕರ ಪುಂಡರ ಗುಂಪು ಥಳಿಸಿದ ಘಟನೆ ಇಂದು ನಡೆದಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ ಪಂತಬಾಳೇಕುಂದ್ರಿ ಗ್ರಾಮದ ಮಧ್ಯೆ ಪುಂಡರು ಬಸ್ ಅಡ್ಡಗಟ್ಡಿ ಈ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ.

ಆದರೆ ಸಧ್ಯದ ಬೆಳವಣಿಗೆಯನ್ನು ಗಮನಿಸಿದರೆ ಪೊಲೀಸರು ಪುಂಡರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವ ಲಕ್ಷಣಗಳು ಕಾಣಸಿಗುತ್ತಿಲ್ಲ.
ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ಟಿಕೆಟ್ ವಿಷಯದಲ್ಲಿ ಮರಾಠಿಯಲ್ಲಿ ಮಾತನಾಡುತ್ತಿದ್ದಳು.ಈ ಸಂದರ್ಭದಲ್ಲಿ ನಿರ್ವಾಹಕ ಮಹಾದೇವ ಹುಕ್ಕೇರಿ ನಮ್ರತೆಯಿಂದಲೇ ನನಗೆ ಮರಾಠಿ ಬರಲ್ಲ.ಕನ್ನಡದಲ್ಲಿ ಹೇಳಿ ಎಂದನು.
ಆಗ ಯುವತಿಯ ಜೊತೆಗಿದ್ದ ವರು ಕನ್ನಡ ಮಾತನಾಡಿದ ನಿರ್ವಾಹಕ ನನ್ನು ಅತ್ಯಂತ ಕೆಟ್ಟದಾಗಿ ನಿಂದಿಸಿದರು. ಆದರೆ ಇಲ್ಲಿ ಆದದ್ದು ಆಯುತು ಎಂದ ನಿರ್ವಾಹಕ ತನ್ನ ಟಿಕೇಟ್ ಕೊಡುವ ಕೆಲಸದಲ್ಲಿ ಮಗ್ನನಾದನು.

ಆದರೆ ಬಸ್ ಪಂತಬಾಳೇಕುಂದ್ರಿ ಬಳಿ ಬರುತ್ತಿದ್ದಂತೆಯೇ ಅದನ್ನು ಸುಮಾರು 20 ಜನರಿದ್ದ ಪುಂಡರ ಗುಂಪು ಅಡ್ಡಗಟ್ಟಿ ನಿರ್ವಾಹಕನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದೆ.
ಈ ಬಗ್ಗೆ ಹಲ್ಲೆಗೊಳಗಾದ ನಿರ್ವಾಹಕ ಮಾರಿಹಾಳ ಠಾಣೆಗೆ ದೂರು ನೀಡಿದ್ದಾನೆ.