
ಕಂಡಕ್ಟರ್ ಮೇಲಿನ ಹಲ್ಲೆ..ತಪ್ಪಿತಸ್ಥರಿಗೆ ಪಾಠ ಆಗಲಿ
ಬೆಳಗಾವಿ.ಕಂಡಕ್ಟರ್ ಮೇಲಿನ ಹಲ್ಲೆ ಮತ್ತು ನಂತರ ನಡೆದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎನ್ನುವ ಅನುಮಾನ ಬಾರದೇ ಇರದು. ಸರ್ಕಾರ ಅದರಲ್ಲೂ ಗೃಹ ಇಲಾಖೆ ಎನ್ನುವುದು ಜೀವಂತ ಇದ್ದಿದ್ದರೆ ಹಲ್ಲೆಗೊಳಗಾಗಿ ಚಿಕಿತ್ಸೆಗೆ ದಾಖಲಾಗಿದ್ದ ಕಂಡಕ್ಟರ್ ಮೇಲೆ ಪೋಸ್ಕೋ ದಾಖಲಿಸಿದ ಸಿಪಿಐ ಅವರನ್ನು ಮುಲಾಜಿಲ್ಲದೇ ಮನೆಗಟ್ಡುವ ಕೆಲಸ ಮಾಡುತ್ತಿತ್ತು. ಅಷ್ಟೇ ಅಲ್ಲ ಕಂಡಕ್ಟರ್ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಕೂಡ ಪೊಲೀಸರು ಇದನ್ನು ಲಘುವಾಗಿ ಪರಿಗಣಿಸಿದ್ದರು. ಅಂತದ್ದೇನಿಲ್ಲರಿ, ಸಣ್ಣ ಟಿಕೆಟ್ ಜಗಳ, ವಿನಾಕಾರಣ…