Headlines

ಮತದಾರರ ಪಟ್ಟಿ ಬಂದ ನಂತರ ಮೇಯರ್ ಚುನಾವಣೆ ನಿಗದಿ

ಮತದಾರರ ಪಟ್ಟಿ ಬಂದ ನಂತರ
ಮೇಯರ್ ಚುನಾವಣೆ ನಿಗದಿ

ಶಾಸಕ ಅಭಯ ಪಾಟೀಲ ನೇತೃತ್ವದ ನಿಯೋಗಕ್ಕೆ ಭರವಸೆ.

ಪ್ರಾದೇಶಿಕ ಆಯುಕ್ತರನ್ನು ಭೆಟ್ಟಿ ಮಾಡಿದ ಅಭಯ ನೇತೃತ್ವದ ನಿಯೋಗ

ಮತದಾರರ ಪಟ್ಟಿ ಕೈಸೇರಿದ ತಕ್ಷಣ ಚುನಾವಣೆ ನಿಗದಿ.

,

ಬೆಳಗಾವಿ.
ಮಹಾನಗರ ಪಾಲಿಕೆ ಮೇಯರ್, ಉಪ ಕಮೇಯರ್ ಚುನಾವಣೆ ನಡೆಸಲು ತಮ್ಮದೇನು ಆಕ್ಷೇಪಣೆ ಇಲ್ಲ ಎಂದು ಪ್ರಾದೇಶಿಕ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ಬೇಗ ನಡೆಸಬೇಕು ಎಂದು ಆಗ್ರಹಿಸಿ ನಗರದಲ್ಲಿಂದು ಬೆಳಗಾವಿ ದಕ್ಷಿಣ ಕ್ಷೇತ್ರದ
ಶಾಸಕ ಅಭಯ ಪಾಟೀಲರ ನೇತೃತ್ವದ ನಿಯೋಗಕ್ಕೆ ಈ ಭರವಸೆ ನೀಡಿದ್ದಾರೆ.
ಮಹಾನಗರ ಪಾಲಿಕೆಯಿಂದ ಮತದಾನದ ಹಕ್ಕು ಪಡೆದಿರುವ ಪಟ್ಟಿ ಬಂದರೆ ತಕ್ಷಣವೇ ದಿನಾಂಕ
ನಿಗದಿ ಮಾಡಲಾಗುವುದು ಎಂದು ಅವರು ಹೇಳಿದರು ಎಂದು ಗೊತ್ತಾಗಿದೆ.


ಇದೇ ದಿ 1 ರಂದು ಬೆಳಗಾವಿ ಮಹಾನಗರ ಪಾಲಿಕೆ ವಿಶೇಷ ಸಾಮಾನ್ಯ ಸಭೆ ನಡೆಯಲಿದೆ, ಅಂದಿನ ಸಭೆಯಲ್ಲಿ ಇಬ್ಬರು ನಗರ ಸೇವಕರ ಸದಸ್ಯತ್ವ ರದ್ದತಿ ಬಗ್ಗೆ ಪ್ರಸ್ತಾಪ ಮಾಡಿ ಅದನ್ನು ಪ್ರಾದೇಶಿಕ ಆಯುಕ್ತರಿಗೆ ಕಳಿಸುತ್ತಾರೆ, ಅದರ ನಂತರ ದಿನಾಂಕ ನಿಗದಿಯಾಗಬಹುದು

ದಿವಾಳಿತನದ ದ್ಯೋತಕ.!
ರಾಜ್ಯದಲ್ಲಿ ಬಿಜೆಪಿ ಸಂಖ್ಯಾಬಲ ಹೆಚ್ಚಾಗಿರುವ ಮಹಾನಗರ ಪಾಲಿಕೆಗಳಲ್ಲಿ ಕಾನೂನು
ಬಾಹಿರವಾಗಿ ಸದಸ್ಯರ ಸದಸ್ಯತ್ವ ರದ್ದುಗೊಳಿಸುವ ಹುನ್ನಾರವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಶಾಸಕ ಅಭಯ ಪಾಟೀಲ ಆರೋಪಿಸಿದ್ದಾರೆ.
ಬೆಳಗಾವಿ ಪಾಲಿಕೆ ಮೇಯರ್ ಅವಧಿ ಮುಗಿದಿದ್ದರೂ ಕೂಡ ಪ್ರಾದೇಶಿಕ ಆಯುಕ್ತರ ಮೇಲೆ ಒತ್ತಡ ಹೇರಿ ಚುನಾವಣೆಯನ್ನು ಮುಂದಕ್ಕೆ ಹಾಕುವ ಹುನ್ನಾರ ನಡೆದಿದೆ, ಆದ್ದರಿಂದ ಶೀಘ್ರವೇ ಚುನಾವಣೆ ನಡೆಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ ಎಂದರು.
ಈಗ ಇಬ್ಬರು ನಗರಸೇವಕರ ಸದಸ್ಯತ್ವ ರದ್ದತಿ ಪ್ರಕರಣ ಹೈಕೋರ್ಟನಲ್ಲಿದೆ, ಅದರಲ್ಲಿ
ಗೆಲವುದು ನಮ್ಮದೇ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರಸೇವಕರ ಸದಸ್ಯತ್ವ ರದ್ದತಿ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಅವರು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆಂದರು
,

Leave a Reply

Your email address will not be published. Required fields are marked *

error: Content is protected !!