ಬೆಳಗಾವಿ.
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯು ಪ್ರಸಕ್ತ 2025-26 ನೇ ಸಾಲಿನಲ್ಲಿ 10 ಲಕ್ಷ 35 ಸಾವಿರ ಉಳಿತಾಯ ಬಜೆಟ್ ಮಂಡಿಸಿದೆ.
ಮಹಾನಗರ ಪಾಲಿಕೆಯಲ್ಲಿಂದು ನಡೆದ ಸಭೆಯಲ್ಲಿ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ನೇತ್ರಾವತಿ ಭಾಗವತ್ ಅವರು ಈ ಬಜೆಟ್ ಮಂಡಿಸಿದರು,
ಬಜೆಟ್ ಮಂಡಿಸಿದ ನಂತರ ಅದರ ಬಗ್ಗೆ ಚಚರ್ೆ ಹೆಚ್ಚು ಗಂಭೀರವಾಗಿ ನಡೆಯಲಿಲ್ಲ. ಆದರೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ನಾಮಕಾವಾಸ್ತೆ ಎನ್ನುವಂತೆ ಮಾತನಾಡಿ ಕೆಲವೇ ತಾಸಿನಲ್ಲಿ ಸಭೆಯಲ್ಲಿ ಮುಗಿಸಿದರು,

ಮಹಾನಗರ ಪಾಲಿಕೆಯ 2025-26 ಸಾಲಿನಲ್ಲಿ ಒಟ್ಟು 441 ಕೋಟಿ 99 ಲಕ್ಷ 43 ಸಾವಿರ ಆದಾಯ ನಿರೀಕ್ಷೆ ಇದ್ದರೆ, 441 ಕೋಟಿ 89 ಲಕ್ಷ 08 ಸಾವಿರ ರೂ ಅಂದಾಜು ವೆಚ್ಚ ನಿರೀಕ್ಷೆ ಮಾಡಲಾಗಿದೆ.
ಹೀಗಾಗಿ ಪ್ರಸಕ್ತ ಸಾಲಿನಲ್ಲಿ ರೂ. 10 ಲಕ್ಷ 35 ಸಾವಿರ ರೂ. ಉಳಿತಾಯ ನಿರೀಕ್ಷೆ ಮಾಡಲಾಗಿದೆ.
ಹಿರಿಯ ನಾಗರೀಕರು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರು, ಶಾಲಾ ಮಕ್ಕಳ ಹಾಗೂ ದಿವ್ಯಾಂಗರ ಅನುಕೂಲಕ್ಕಾಗಿ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಮಾರ್ಟ ಸಿಟಿ ಯೋಜನೆಯೊಂದಿಗೆ ನಗರದ ವೃತ್ತಗಳನ್ನು ಮತ್ತು ರಸ್ತೆಗಳನ್ನು ಮತ್ತು ಬಸ್ ತಂಗುದಾಣಗಳನ್ನು ಸುಂದರೀಕರಣಗೊಳಿಸುವದು ಪ್ರಮುಖ ಯೋಜನೆಗಳು ಇದರಲ್ಲಿವೆ.
ನಗರದಲ್ಲಿ ದಿನನಿತ್ಯದ ವಾಹನ ಸಂಚಾರ ದಟ್ಟಣೆಯನ್ನು ಸರಿದೂಗಿಸಲು ಖಾಲಿ ಸ್ಥಳಗಳನ್ನು ತಂಗುದಾಣಗಳಿಗಾಗಿ ಮತ್ತು ಮಾರುಕಟ್ಟೆಗಳಿಗಾಗಿ ಮಾರ್ಪಡಿಸಿ ಪಾಲಿಕೆಯ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಭಾಗವತ್ ಹೇಳಿದರು.

ಬಜೆಟ್ ಪುಸ್ತಕಕ್ಕೆ ಕನ್ನಡ ಧ್ವಜ ಬಣ್ಣ
ಬೆಳಗಾವಿಯಲ್ಲಿ ಕನ್ನಡ, ಮರಾಠಿ ವಿವಾದ ಭುಗಿಲೆದ್ದಿರುವ ಸಂದರ್ಭದಲ್ಲಿ ಬಜೆಟ್ ಪ್ರತಿ ಕೂಡ ಎಲ್ಲರ ಗಮನ ಸೆಳೆಯಿತು.
ಪಾಲಿಕೆ ಆಯುಕ್ತೆ ಶುಭ ಬಿ ಅವರ ವಿಶೇಷ ಪ್ರಯತ್ನದ ಫಲವಾಗಿ ಬಜೆಟ್ ಪುಸ್ತಕದ ಮುಖ್ಯ ಪುಟವನ್ನು ಕನ್ನಡ ಧ್ವಜದ ಹಳದಿ ಕೆಂಪು ಬಣ್ಣದಿಂದ ಸಿದ್ಧಪಡಿಸಿದ್ದು ಎಲ್ಲರ ಗಮನ ಸೆಳೆಯಿತು.