ಅಕ್ರಮ ಶೆಡ್ ಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕೊಟ್ಟ ಹೆಸ್ಕಾಂ ಸಿಬ್ಬಂದಿ.
ಹಿರಿಯ ಅಧಿಕಾರಿಗಳಿಗೆ ಗೊತ್ತಿದ್ದರೂ ಮೌನ. ಸಂಶಯಕ್ಕೀಡು ಮಾಡಿದ ಹೆಸ್ಕಾಂ ನಡೆ.
ಅನಗೋಳ ಸ್ಮಶಾನದಿಂದ ಅಕ್ರಮ ಸಂಪರ್ಕ ಕಲ್ಪಿಸಿದ ಹೆಸ್ಕಾಂ ಲೈನಮನ್ ಗಳು.
ಪಾಲಿಕೆ ಆಯುಕ್ತರು ಕಳೆದೆರಡು ದಿನದ ಹಿಂದೆ ಈ ಸಂಪರ್ಕ ಕಡಿತ ಮಾಡಿಸಿದ್ದರು.
ಅಕ್ರಮ ಶೆಡ್ ತೆರವಿಗೆ ಆಯುಕ್ತರು ಸೂಚನೆ ಕೊಟ್ಟರೂ ಕ್ಯಾರೆ ಎನ್ನದ ಪಾಲಿಕೆಯ ಟಿಪಿಓ ಶಾಖೆ.
ಬೆಳಗಾವಿ.
ಅಕ್ರಮ ವಿದ್ಯುತ್ ಸಂಪರ್ಕವನ್ನು ಕಡಿಗೊಳಿಸಿ ದಂಡ ವಿಧಿಸಬೇಕಾದ ಹೆಸ್ಕಾಂ ಸಿಬ್ಬಂದಿಗಳೇ ಅಕ್ರಮ ವಿದ್ಯುತ್ ಸಂಪರ್ಕಕಲ್ಪಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಬೆಳಗಾವಿ ಚಿದಂಬರ ನಗರದಲ್ಲಿರು ಅನಗೋಳ ಸ್ಮಶಾನದಿಂದ ಪಕ್ಕದ ಭಂಗಿಬೋಳದಲ್ಲಿರವ ಕಾನೂನು ಬಾಹಿರ ನಿರ್ಮಿಸಿಕೊಂಡಿರುವ ಶೆಡ್ ಗೆ ವಿದ್ಯುತ ಸಂಪರ್ಕವನ್ನು ಒಬ್ಬರು ಪಡೆದುಕೊಂಡಿದ್ದರು.

ಕಳೆದ ಕೆಲ ದಿನಗಳ ಹಿಂದೆ ಪಾಲಿಕೆ ಆಯುಕ್ತೆ ಶುಭ ಬಿ ಅವರು ಅಲ್ಲಿಗೆ ಭೆಟ್ಟಿ ನೀಡಿದಾಗ ಈ ಅಕ್ರಮ ಶೆಡ್ ಮತ್ತು ಅದಕ್ಕೆ ವಿದ್ಯುತ್ ಸಂಪರ್ಕ ಹೊಂದಿದ್ದು ಬೆಳಕಿಗೆ ಬಂದಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು ಅವತ್ತೇ ಸಂಜೆಯೊಳಗೆ ಶೆಡ್ ತೆರವು ಮಾಡಬೇಕು ಮತ್ತು ವಿದ್ಯುತ್ ಸಂಪರ್ಕ ಕಡಿತ ಮಾಡಬೇಕು ಎಂದು ಪಾಲಿಕೆಯ ಸಂಬಂಧಿಸಿದ ಅಧಿಕಾರಿಯವರಿಗೆ ತಾಕೀತು ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಸ್ಮಶಾನದ ಬೋರವೆಲ್ ದಿಂದ ಪಡೆದುಕೊಂಡಿದ್ದ ವಿದ್ಯುತ್ ಸಂಪರ್ಕ ವನ್ನು ಕಡಿತ ಮಾಡಲಾಯಿತು..ಆದರೆ ಶೆಡ್ ತೆರವುಗೊಳಿಸಲು ಮಾತ್ರ ಪಾಲಿಕೆಯವರು ಬರಲೇ ಇಲ್ಲ. ಆಯುಕ್ತರ ಆದೇಶಕ್ಕೂ ಅವರದ್ದೇ ಅಧಿಕಾರಿಗಳು ಮಾನ್ಯಮಾಡಲಿಲ್ಲ.
ಆದರೆ ಇಂದು ಹೆಸ್ಕಾಂ ಸಿಬ್ಬಂದಿಗಳೇ ಬಂದು ಮತ್ತೇ ಸ್ಮಶಾನದಿಂದಲೇ ಅಕ್ರಮ ಶೆಡ್ಗೆ ಕಾನೂನು ಬಾಹಿರವಾಗಿ ಸಂಪರ್ಕ ಕೊಡುವ ಕೆಲಸ ಮಾಡಿದ್ದಾರೆ. ಇದು ಈಗ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಅಕ್ರಮ ಸಂಪರ್ಕ ಕೊಟ್ಟವರನ್ನು ತಕ್ಷಣ ಅಮಾನತ್ ಮಾಡಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.