ಇ ಖಾತಾ, ಬಿ ಖಾತಾ- ಪಾಲಿಕೆಗೆ ಮರುಜೀವ ಕೊಟ್ಟ ಯೋಜನೆ.
20 ದಿನದಲ್ಲಿ ಬರೊಬ್ಬರಿ 3 ಕೋಟಿ ಸಂಗ್ರಹ.
ಈ ಯೋಜನೆಗೆ ಜನರಿಂದ ಉತ್ತಮ ಸ್ಪಂದನೆ.
ಕಂದಾಯ ಶಾಖೆಗೆ ತುರ್ತು ಚಿಕಿತ್ಸೆ ನೀಡಬೇಕಾಗಿದೆ.
ಅಲ್ಲಿದ್ದವರನ್ಬು ಎತ್ತಂಗಡಿ ಮಾಡಿ ತನಿಖೆ ನಡೆಸಬೇಕು.
ಬೆಳಗಾವಿ
ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೆ ಅವುಗಳು ವ್ಯವಸ್ಥಿತವಾಗಿ ಅನುಷ್ಠಾನಗೊಳ್ಳುವುದಿಲ್ಲ.
ಆದರೆ ಯೋಜನೆಗಳು ವ್ಯವಸ್ಥಿತವಾಗಿ ಅನುಷ್ಠಾನ ಗೊಳ್ಳಬೇಕಾದರೆ ಅಧಿಕಾರಿಗಳು ಮನಸ್ಸು ಮಾಡಬೇಕು. ಅವರು ಮನಸ್ಸುಗೊಟ್ಟು ಕೆಲಸ ಮಾಡಿದರೆ ಮಾತ್ರ ಯೋಜನೆಗಳ ಲಾಭ ಯಾವ ರೀತಿ ಆಗುತ್ತದೆ ಎನ್ಬುವುದಕ್ಕೆ ಬೆಳಗಾವಿ ಮಹಾನಗರ ಪಾಲಿಕೆ ಉತ್ತಮ ಉದಾಹರಣೆ.
ಸಿಂಪಲ್ ಆಗಿ ಹೇಳೊದಾಸರೆ, ರಾಜ್ಯ ಸರ್ಕಾರ ಇ ಖಾತಾ, ಬಿ ಖಾತಾ ಎನ್ನುವ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿತು. ಅದನ್ನು ಜಿಲ್ಲಾ ಮಂತ್ರಿ ಸತೀಶ್ ಜಾರಕಿಹೊಳಿ ಅವರು ಚಾಲನೆ ನೀಡಿದರು

ಆದರೆ ಇಲ್ಲಿ ಕೂಡ ಉದಾಸೀನತೆ ತೋರಿದ್ದರೆ ಈ ಯೋಜನೆ ಕೂಡ ಹತ್ತರಲ್ಲಿ ಹನ್ನೊಂದು ಆಗುತ್ತಿತ್ತು.
ಆದರೆ ಪಾಲಿಕೆ ಆಯುಕ್ತೆ ಶುಭ ಬಿ ಅವರು ಹಾಗೆ ಮಾಡಲಿಲ್ಲ. ಖುದ್ದು ತಾವೂ ಸಹ ಫೀಲ್ಡ್ ಗೆ ಇಳಿಯುವುದಲ್ಲದೇ ಕುಂಭಕರ್ಣ ನಿದ್ರೆಯಲ್ಲಿರುವ ಕಂದಾಯ ಶಾಖೆಯವರನ್ನು ಕೆಲಸಕ್ಕೆ ಹಚ್ಚಿದರು.
ಪರಿಣಾಮ ಕಳೆದ ದಿ. 18 ರಿಂದ ಇಲ್ಲಿಯವರೆಗೆ ಅಂದರೆ ಸುಮಾರು 20 ದಿನಗಳಲ್ಲಿ ಪಾಲಿಕೆ ಖಜಾನೆಗೆ ಎ ಖಾತಾ, ಬಿ ಖಾತಾದಿಂದ ಬರೊಬ್ಬರಿ 2 ಕೋಟಿ ರೂ ಹಣ ಬಂದಿತು.
ಅಂದರೆ ಆರ್ಥಿಕ ಸಂಕಷ್ಟದಲ್ಲಿದ್ದ ಬೆಳಗಾವಿ ಮಹಾನಗರ ಪಾಲಿಕೆಗೆ ಸರ್ಕಾರದ ಮಹತ್ವಾಕಾಂಕ್ಷಿ ಇ ಖಾತಾ ಮತ್ತು ಖಾತಾ' ಯೋಜನೆಯೊಂದು
ಮರುಜೀವ’ ನೀಡಿತು ಎಂದು ಹೇಳಬಹುದು.
ಈಗ ಈ ಯೋಜನೆಯಿಂದ ಬೆಳಗಾವಿ ಮಹಾನಗರ ಪಾಲಿಕೆಗೆ ನಿರೀಕ್ಷೆಗೂ ಮೀರಿ ಹಣದ ಪ್ರವಾಹ ಹರಿದು ಬರುತ್ತಿದೆ.

ಸರಕಾರದ ಡಿಜಿಟಲ್ ಆಸ್ತಿ ದಾಖಲೆ ಪದ್ದತಿ ಅನುಸಾರ, ಇ-ಖಾತಾ ಆಸ್ತಿ ತೆರಿಗೆ ಸಂಗ್ರಹದ ಪ್ರಮುಖ ಸಾಧನವಾಗಿದೆ.
ಇ ಖಾತಾದಿಂದ ಒಂದುವರೆ ಕೋಟಿ ರೂ ಹಣ ಪಾಲಿಕೆ ಖಜಾನೆ ಸೇರಿದರೆ. ಬಿ ಖಾತಾ ದಿಂದ ಸುಮಾರು 54 ಲಕ್ಷ ರೂ ಹಣ ಸಂಗ್ರಹವಾಗಿದೆ. ಹೀಗಾಗಿ ಈ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರೆಸಲು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಚಿಂತನೆ ಮಾಡುತ್ತಿರುವುದಾಗಿ ಆಯುಕ್ತೆ ಶುಭ ಅವರು ತಿಳಿಸಿದ್ದಾರೆ.

ಈಗ ಈ ಕೆಲಸಕ್ಕೆ ಕಂದಾಯ ಶಾಖೆಯ ಎಲ್ಲ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
`ಹೊಸ ಆಶಾಭಾವನೆ’
ಅಭಿವೃದ್ಧಿ ಕೆಲಸಕ್ಕೆ ಅನುದಾನದ ಕೊರತೆಯನ್ನು ಎದುರಿಸುತ್ತಿದ್ದ ಬೆಳಗಾವಿ ಮಹಾನಗರ ಪಾಲಿಕೆಗೆ ಈಗ ಒಂದಿಷ್ಟು ಆಶಾಭಾವನೆ ಮೂಡತೊಡಗಿದೆ.
ಏನಾದರೂ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಹುದು ಎನ್ನುವ ಆತ್ಮವಿಶ್ವಾಸ ಮೂಡತೊಡಗಿದೆ.
ಬೆಳಗಾವಿ ಶಹಾಪುರ ಡಬಲ್ ರೋಡ್ ವಿಷಯದಲ್ಲಿ ಕೂಡ ನೋಂದವರಿಗೆ 20 ಕೋಟಿ ರೂ ಪರಿಹಾರ ಕೊಡಲು ಪಾಲಿಕೆಯಲ್ಲಿ ಹಣವಿರಲಿಲ್ಲ. ಆದರೆ ಈಗ ಪಾಲಿಕೆ ಆದಾಯ ಸ್ವಲ್ಪ ಮಟ್ಟಿಗೆ ಸುಧಾರಿಸತೊಡಗಿದೆ.
ಪಾಲಿಕೆಯ ಕಂದಾಯ ಶಾಖೆಯವರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಆಯುಕ್ತರು ಮಾಡಿದ್ದರಿಂದ ತೆರಿಗೆ ವಸೂಲಾತಿಯಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ಹೇಳಬಹುದು
ಕಂದಾಯ ಶಾಖೆ ತನಿಖೆ ನಡೆಸಿ
ಇದೆಲ್ಲದರ ಜೊತೆಗೆ ಪಾಲಿಕೆಯ ಕಂದಾಯ ಶಾಖೆಯನ್ನು ಆಯುಕ್ತರು ಕ್ಲೀನ್ ಮಾಡಬೇಕಾಗಿದೆ. ಅಲ್ಕಿಯೇ ತೆರಿಗೆ ಸೋರಿಕೆ ಆಗುತ್ತಿದೆ. ಅವರಿಂದಲೇ ಪಾಲಿಕೆ ಆರ್ಥಿಕ ವಾಗಿ ದಿವಾಳಿ ಹಂತಕ್ಕೆ ಬಂದು ನಿಂತಿದೆ. ಈಗ ಆಯುಕ್ತರು ಆ ಶಾಖೆಯನ್ನು ಗುಡಿಸಿ ಗುಂಡಾಳಿಸಿದವರನ್ಬು ಮನೆಗೆ ಕಳಿಸುವ ಕೆಲಸ ಮಾಡಬೇಕಿದೆ..
ಕಳೆದ ಒಂದು ವರ್ಷದಿಂದ ಆ ಕಂದಾಯ ಶಾಖೆಯ ಕಾರ್ಯವೈಖರಿ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕಾದ ತುರ್ತುಅಗತ್ಯತೆ ಇದೆ. ಆಯುಕ್ತರು ಅದನ್ನು ಮಾಡಬೇಕಿದೆ.