ಬೆಳಗಾವಿ ಶಾಸಕ ಅಭಯ ಪಾಟೀಲರ ಹೋಳಿ ಮಿಲನ್
ವ್ಯಾಕ್ಸಿನ್ ಡಿಪೋದಲ್ಲಿ ಹೋಳಿ ಮಿಲನ್. 20 ಸಾವಿರಕ್ಕೂ ಹೆಚ್ಚು ಜನರ ಸಮಾಗಮ.
ಹೋಳಿಮಿಲನ್ ದಲ್ಲಿ ಬಣ್ಣಗಳ ಚಿತ್ತಾರ.
ಬೆಳಗಾವಿ.
ಬಣ್ಣಗಳ ಹಬ್ಬ ಹೋಳಿ ಎಂದರೆ ಕೇವಲ ನೀರು, ಗುಲಾಲ್, ಸಂಭ್ರಮ, ಹಾಡು, ಹಂಚಿಕೊಳ್ಳುವ ಹಾಸ್ಯವಲ್ಲ. ಅದು ಸಮಾಜದಲ್ಲಿ ಏಕತೆ, ಸ್ನೇಹ ಮತ್ತು ಸಮಾನತೆಯನ್ನು ಪ್ರತಿಬಿಂಬಿಸುವ ಮಹತ್ವದ ಹಬ್ಬ
.!
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ಕಳೆದ 16 ವರ್ಷದಿಂದ ಆಚರಿಸುವಹೋಳಿ ಮಿಲನ್’ ಜಾತಿ, ಭಾಷೆ ಎಲ್ಲವನ್ನು ಮೀರಿಸುವ ಸಂಭ್ರಮದ ಮಿಲನ್ ಆಗಿದೆ.
ಅಷ್ಟೇ ಅಲ್ಲ ಕನ್ನಡ, ಮರಾಠಿ ಸಂಸ್ಕೃತಿಗಳ ಸಮನ್ವಯದ ಪ್ರತೀಕ ಈ ಹೋಳಿ ಮಿಲನ್. ಈ ಹಿನ್ನೆಲೆಯಲ್ಲಿ ಸುಮಾರು 20 ಸಾವಿರಕ್ಕು ಅಧಿಕ ಜನರು ಈ ಹೋಳಿ ಮಿಲನ್ ದಲ್ಲಿ ಭಾಗವಹಿಸುತ್ತಾರೆ ಎನ್ನುವುದು ವಿಶೇಷ.
ಈ ಹೋಳಿ ಮಿಲನ್ದಲ್ಲಿ ವಯಸ್ಸಿಗೆ ಮಿತಿ ಇಲ್ಲ. ಜಾತಿ, ಭಾಷೆ ಕೇಳಲ್ಲ. ಹೀಗಾಗಿ ಇದೊಂದು ಎರಡೂ ಸಂಸ್ಕೃತಿಗಳ ಸಂಗಮ ಎಂದು ಹೇಳಬಹುದು,

ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ತಮ್ಮದೇ ಆದ ವಿನೂತನ ಕಾರ್ಯವೈಖರಿಯಿಂದ ಹೆಸರು ಮಾಡಿರುವ ಅಭಯ ಪಾಟೀಲರು ಟಿಳಕವಾಡಿಯ ವ್ಯಾಕ್ಸಿನ್ ಡಿಪೋದಲ್ಲಿ ಆಯೋಜಿಸುವ ಈ ಕಾರ್ಯಕ್ರಮದಲ್ಲಿ ಬಣ್ಣಗಳ ಚಿತ್ತಾರವೇ ಕಾಣಸಿಗುತ್ತದೆ.
ಮೊದಲು ಹೇಗಿತ್ತು?
ಗಡಿನಾಡ ಬೆಳಗಾವಿಯಲ್ಲಿ ಮುಂಚೆ ಇಂತಹ ಅದ್ದೂರಿ ಹೋಳಿ ಕಾರ್ಯಕ್ರಮಗಳು ಆಗುತ್ತಿರಲಿಲ್ಲ. ಹಾಗೆ ನೋಡಿದರೆ ಹೋಳಿ ಬಂದರೆ ಪೊಲೀಸರಿಗೆ ಒಂದು ರೀತಿಯ ಟೆನ್ಸನ್ ಆಗುತ್ತಿತ್ತು, ಅಂದರೆ ಆ ಮಟ್ಟಿಗೆ ಕಿಡಿಗೇಡಿಗಳು ಅರ್ಭಟಿಸುತ್ತಿದ್ದರು.
ಆದರ ಈಹ ಹೋಳಿ ಹಬ್ಬಕ್ಕೆ ನೋ ಟೆನ್ಶನ್ ಎನ್ನುವಂತಾಗಿದೆ. 2009 ರಿಂದ ಶಾಸಕ ಅಭಯ ಪಾಟೀಲರು ಆಯೋಜಿಸುತ್ತಿರುವ ಹೋಳಿ ಮಿಲನ್ದಲ್ಲಿ ಸಾವಿರಗಟ್ಟಲೆ ಜನ ಸೇರಿದರೂ ಕೂಡ ಯಾರಿಗೂ ಟೆನ್ಶನ್ ಮಾತೇ ಇಲ್ಲ.
ಎಲ್ಲರೂ ಅಲ್ಲಿ ಸುರಿಯತ್ತಿರುವ ಬಣ್ಣದ ಮಳೆಯಲ್ಲಿ ಮಿಂದೆದ್ದು ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ.
ಈ ಹಿನ್ನೆಲೆಯಲ್ಲಿ ಶಾಸಕರ ಈ ಹೋಳಿ ಮಿಲನ ಕಾರ್ಯಕ್ರಮ ಜನಸಾಮಾನ್ಯರಲ್ಲಿ ಸಾಂಸ್ಕೃತಿಕ ಸೌಹಾರ್ದತೆಗೆ ಮತ್ತಷ್ಟು ಉತ್ತೇಜನ ನೀಡಲು ಪ್ರಯತ್ನಿಸುತ್ತದೆ.