ಬೆಳಗಾವಿ ಮಹಾನಗರ ಪಾಲಿಕೆ:
ಮರಾಠಿಗ ಮಂಗೇಶ ಮೇಯರ್, ಕನ್ನಡತಿ ವಾಣಿ ಉಪಮೇಯರ್
ಬೆಳಗಾವಿ:
ಬೆಳಗಾವಿಯ 23ನೇ ಅವಧಿಯ ಮೇಯರ್ ಆಗಿ ಮಂಗೇಶ ಪವಾರ ಹಾಗೂ ಉಪಮೇಯರ್ ಆಗಿ ವಾಣಿ ವಿಲಾಸ ಜೋಶಿ ಶನುವಾರ ಪ್ರಚಂಡ ಬಹುಮತದಿಂದ ಆಯ್ಕೆಯಾದರು.

ಮೇಯರ್ ಸ್ಥಾನ ಸಾಮಾನ್ಯ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. 40 ಸದಸ್ಯರನ್ನು ಹೊಂದಿರುವ ಬಿಜೆಪಿ ಗುಂಪು ಮತ್ತೊಮ್ಮೆ ಪಾಲಿಕೆ ಚುಕ್ಕಾಣಿ ಹಿಡಿಯಿತು.
ಮಂಗೇಶ 41ನೇ ವಾರ್ಡಿನ ಸದಸ್ಯ, ವಾಣಿ 43ನೇ ವಾರ್ಡಿನ ಸದಸ್ಯೆಯಾಗಿದ್ದಾರೆ.
ಈ ಎರಡೂ ವಾರ್ಡುಗಳು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತವೆ. ಪಾಲಿಕೆ ಮೇಲೆ ಬಿಗಿ ಹಿಡಿತ ಸಾಧಿಸಿರುವ ಶಾಸಕ ಅಭಯ ಈ ಅಯ್ಕೆಗೆ ಮುಂಚೂಣಿ ನಾಯಕತ್ವ ವಹಿಸಿದರು.