..ಬೆಳಗಾವಿ.
ನೂತನವಾಗಿ ಮಹಾನಗರ ಪಾಲಿಕೆಗೆ ಆಯ್ಕೆಗೊಂಡ ಮೇಯರ್ ಮಂಗೇಶ ಪವಾರ ಮತ್ತು ಉಪಮೇಯರ ವಾಣಿ ವಿಲಾಸ ಜೋಶಿ ಇಂದು ಅಧಿಕಾರ ಸ್ವೀಕರಿಸಿದರು. ಆಯ್ಕೆಯಾದ ದಿನದಿಂದಲೇ ಇವರಿಬ್ವರೂ ತಮ್ಮ ಆಯ್ಕೆಗೆ ಸಹಕರಿಸಿದವರನ್ನು ಖುದ್ದು ಭೆಟ್ಟಿ ಮಾಡಿ ಕೃತಜ್ಞತೆ ಹೇಳುವ ಕೆಲಸ ಮಾಡಿದರು.

ಇಂದೂ ಬೆಳಿಗ್ಗೆ ಸಹ ಪಕ್ಷದ ಹಲವು ಗಣ್ಯರನ್ನು ಭೆಟ್ಟಿ ಯಾದ ಮೇಯರ್ ಮತ್ತು ಉಪಮೇಯರ ಅವರು ಮಹಾನಗರ ಪಾಲಿಕೆ ಪ್ರವೇಶ ಮಾಡಿದರು.

ಗಮನಿಸಬೇಕಾದ ಸಂಗತಿ ಎಂದರೆ, ಇವರಿಬ್ಬರೂ ಸಹ ಪಾಲಿಕೆ ಪ್ರವೇಶಕ್ಕೆ ಮುನ್ನವೇ ಪ್ರವೇಶ ದ್ವಾರದ ಮೆಟ್ಟಿಲುಗಳಿಗೆ ನಮಸ್ಕರಿಸಿ ಒಳನಡೆದರು.

ನಂತರ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಹೇಳಿ ತಮ್ನ ಕೊಠಡಿಯೊಳಗೆ ಪ್ರವೇಶ ಮಾಡಿದರು. ಈ ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ನಗರಸೇವಕರು ಹಾಜರಿದ್ದರು.
