ಬೆಳಗಾವಿ ಪಾಂಗುಳ ಗಲ್ಲಿಯಲ್ಲಿ ಶ್ರೀ ಅಶ್ವತ್ಥಾಮ ದೇವಸ್ಥಾನದ ಮೇಲೆ ಕಲ್ಲು ತೂರಿದ ಭೂಪ
ಅಶ್ವತ್ಥಾಮ ದೇವಸ್ಥಾನದ ಮೇಲೆ ಕಲ್ಲು ತೂರಿದ ಘಟನೆ ಬೆಳಗಾವಿ ನಗರದ ಪಾಂಗುಳ ಗಲ್ಲಿಯಲ್ಲಿ ನಡೆದಿದೆ.
ಪಾಂಗುಳ ಗಲ್ಲಿಯಲ್ಲಿರುವ ಅಶ್ವತ್ಥಾಮ ದೇವಸ್ಥಾನದ ಮೇಲೆ ಕಲ್ಲು ತೂರಿದ್ದಾನೆ. ಕಲ್ಲು ತೂರಿದ ವ್ಯಕ್ತಿಯನ್ನು ಉಜ್ವಲ್ ನಗರದ ನಿವಾಸಿ ಯಾಶೀರ್ ಎಂದು ಗುರುತಿಸಲಾಗಿದೆ.

ಕಲ್ಲು ತೂರಿದವ…
ದೇವಸ್ಥಾನದ ಮೇಲೆ ಕಲ್ಲು ತೂರುತ್ತಿದ್ದಂತೆ ಯಾಶೀರ್ ನನ್ನು ಸ್ಥಳೀಯರು ಹಿಡಿದು ಕಂಬಕ್ಕೆ ಕಟ್ಟಿಹಾಕಿದ್ದಾರೆ.
ಈ ವೇಳೆ ಸ್ಥಳೀಯರು ಆತನನ್ನು ಕಂಬಕ್ಕೆ ಕಟ್ಟಿ ಹಾಕಿ ಪ್ರಶ್ನೆ ಮಾಡಿದಾಗ ನನ್ನದು ತಪ್ಪಾಗಿದೆ ಕ್ಷಮಿಸಿ ಬಿಡಿ ಎಂದು ಕೇಳಿಕೊಂಡಿದ್ದಾನೆ.

ಸ್ಥಳೀಯರು ಮತ್ತೆ ಪ್ರಶ್ನೆ ಮಾಡಿದಾಗ ಮೊನ್ನೆ ಬುರ್ಕಾ ಹಾಕಿಕೊಂಡು ಡಾನ್ಸ್ ಮಾಡಿದ್ದರು ಎಂದು ಹೇಳಿದ್ದಾನೆ.
ಯಾರೋ ಒಬ್ಬ ಕಿಡಿಗೇಡಿ ಬುರ್ಕಾಹಾಕಿಕೊಂಡು ಡಾನ್ಸ್ ಮಾಡಿದರೆ ಮತ್ತೊಬ್ಬ ಕಿಡಿಗೇಡಿ ದೇವಸ್ಥಾನದ ಮೇಲೆ ಕಲ್ಲು ತೂರಿ ಎರಡೂ ಸಮಾಜಗಳ ನಡುವೆ ಬೆಂಕಿ ಇಡುವ ಕೆಲಸ ಮಾಡುತ್ತಿದ್ದಾರೆಂದು ಹೇಳಲಾಗಿದೆ
ಕಲ್ಲು ತೂರುತ್ತಿದ್ದ ಆರೋಪಿ ಯಾಶೀರ್ ನನ್ನು ಪೊಲೀಸರು ಬಂಧಿಸಿದ್ದಾರೆ
ಇಂತಹ ಕಿಡಿಗೇಡಗಳನ್ನು ಕಟ್ಟುನಿಟ್ಟೀನಿ ಕಾನೂನ ಕ್ರಮ ಕೈಗೊಳ್ಳಬೇಕು ಎಂದು ಪಾಂಗುಳ ಗಲ್ಲಿ ರಹಿವಾಸಿಗಳ ಆಕ್ರೋಶ…….