ಲಂಡನ್ ಭೂಮಿಯಲ್ಲಿ ಕನ್ನಡದ ಗಂಧ!
ತ್ರಿವರ್ಣ ಧ್ವಜ ಮತ್ತು ಪುನೀತ್ ಫೋಟೋ ಪ್ರದರ್ಶನದಿಂದ ಮೆರೆದ ಕನ್ನಡಿಗರು,
ವಿದೇಶದಲ್ಲಿ ಕನ್ನಡ ಪ್ರೇಮ ಮೆರೆದ ಬೆಳಗಾವಿ ಹುಡುಗ ಅನಿಕೇತ್..ಮತ್ತು ಬೆಂಗಳೂರಿನ ಯಶಸ್ವಿನಿ
ಲಂಡನ್
ಯೂರೋಪಿನ ಹೃದಯಭೂಮಿ ಲಂಡನ್ ಬಳಿಯ ಪೋರ್ಟ್ಸ ಮೌಥ್ ಯುನಿವರ್ಸಿಟಿ ಯಲ್ಲಿ ಕನ್ನಡಿಗ ವಿದ್ಯಾರ್ಥಿಗಳು ತಾಯ್ನಾಡಿನ ಸುವಾಸನೆ ಪಸರಿಸಿದ ಅದ್ಭುತ ದಿನ.
ಭಾರತ ತ್ರಿವರ್ಣ ಧ್ವಜವು ಸೇರಿದಂತೆ ಕನ್ನಡಿಗರ ಹೃದಯವೂಸಹ ಸಂತಸದಿಂದ ತೇಲಿದ ಕ್ಷಣ ಅದಾಗಿತ್ತು.

ಬೆಳಗಾವಿ ಮಹಾನಗರ ಪಾಲಿಕೆಯ ಉಪಮಹಾಪೌರರಾದ ವಾಣಿ ವಿಲಾಸ ಜೋಶಿ ಅವರ ಪುತ್ರ ಅನಿಕೇತ್ ಜೋಶಿ ಮತ್ತು ಬೆಂಗಳೂರಿನ ಯಶಸ್ವಿನಿ ಅವರು ವಿದೇಶದಲ್ಲಿ ದೇಶಭಕ್ತಿಯ ಜೊತೆಗೆ ಕನ್ನಡ ಪ್ರೇಮ ಮೆರೆದರು.

ಅಭಿಮಾನಿಗರ ಹೃದಯದ ರಾಜ ಪುನೀತ್ ರಾಜಕುಮಾರ ಅವರ ಭಾವಚಿತ್ರ ಪ್ರದರ್ಶನ ಕೂಡ ಮಾಡಿದರು. ಅಷ್ಟೇ ಅಲ್ಲ ಕನ್ನಡ ಧ್ವಜದಲ್ಲಿದ್ದ ಪುನಿತ್ ಭಾವಚಿತ್ರವನ್ನು ಪ್ರದರ್ಶಿಸುವ ಕೆಲಸವನ್ನು ಮಾಡಿದರು.
ತಾಯ್ನಾಡಿನಿಂದ ಸಾವಿರ ಮೈಲು ದೂರ ಇದ್ದರೂ, ಕನ್ನಡಿಗರ ಪರ್ವದುಂಡು ಜಗದೊಳಗೆ ಹರಡಿದಂತೆ ಭಾಸವಾಯಿತು.