Headlines

ನೇತಾಜಿಯ ಜನ್ಮಸ್ಥಳಕ್ಕೆ ಶಾಸಕ ಅಭಯ ಪಾಟೀಲ ಭೇಟಿ – ಪವಿತ್ರ ಮಣ್ಣು ಸಂಗ್ರಹ

ನೇತಾಜಿಯ ಜನ್ಮಸ್ಥಳಕ್ಕೆ ಶಾಸಕ ಅಭಯ ಪಾಟೀಲ ಭೇಟಿ – ಪವಿತ್ರ ಮಣ್ಣು ಸಂಗ್ರಹ.

ಈ ಮಣ್ಣನ್ನು ಬೆಳಗಾವಿಯ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನದಲ್ಲಿ ಒಂದು ಗಿಡವನ್ನು ನೆಡುವ ಸಂಕಲ್ಪ

ಬೆಳಗಾವಿ, ಮಾರ್ಚ್ 24: ಭಾರತ ಸ್ವಾತಂತ್ರ್ಯ ಹೋರಾಟದ ಶ್ರೇಷ್ಠ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮಸ್ಥಳಕ್ಕೆ ಭೇಟಿ ನೀಡಿದ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲರು ಇದೊಂದು ಅಪೂರ್ವ ಅವಕಾಶ ನನ್ನ ಜೀವನದ ಸುವರ್ಣ ಕ್ಷಣವಾಗಿ ಉಳಿಯಲಿದೆ ಎಂದು ಹೇಳಿದ್ದಾರೆ.

ನೇತಾಜಿಯವರು ಜನಿಸಿ ತಮ್ಮ ಬಾಲ್ಯವನ್ನು ಕಳೆದ ಕಟ್ಟಕ್‌ನ ಐತಿಹಾಸಿಕ ಮನೆಗೆ ಶಾಸಕ ಅಭಯ ಪಾಟೀಲ ಭೇಟಿ ನೀಡಿದ್ದರು. ಇದು ಅವಿಸ್ಮರಣೀಯ ಅನುಭವವಾಗಿತ್ತು. ಈ ಮನೆಯಲ್ಲಿ ಅವರು ತಮ್ಮ ಜೀವನದ ಮೊದಲ 16 ವರ್ಷಗಳನ್ನು ಕಳೆದಿದ್ದರು.

ಈ ಪವಿತ್ರ ಭೂಮಿಯ ದರ್ಶನ ಪಡೆದ ಬಳಿಕ, ನೇತಾಜಿ ಪ್ರಾರ್ಥನೆ ಮತ್ತು ಧ್ಯಾನ ಮಾಡಿದ ಪುಣ್ಯಸ್ಥಳವನ್ನೂಅವರು ವೀಕ್ಷಿಸಿದರು. . ಈ ಮಹಾನ್ ಕ್ರಾಂತಿಕಾರಿಯ ಸ್ಮರಣೆಯನ್ನು ಶಾಶ್ವತಗೊಳಿಸಲು, ಅಲ್ಲಿನ ಪವಿತ್ರ ಮಣ್ಣನ್ನು ಸಂಗ್ರಹಿಸುವ ಅದೃಷ್ಟ ನನಗೆ ದೊರಕಿತು ಎಂದು ಅವರು ವಿವರಿಸಿದ್ದಾರೆ.

ಈ ಮಣ್ಣನ್ನು ಬೆಳಗಾವಿಯ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನದಲ್ಲಿ ಒಂದು ಗಿಡವನ್ನು ನೆಡುವ ಸಂಕಲ್ಪ ಮಾಡಿದ್ದೇನೆ. ಇದು ನೇತಾಜಿ ಮತ್ತು ಛತ್ರಪತಿ ಶಿವಾಜಿ ಮಹಾರಾಜರಂತಹ ಮಹಾನ್ ನಾಯಕರಿಗೆ ಅರ್ಪಿಸುವ ಗೌರವಾಂಜಲಿ ಎಂದು ಹೇಳಿದ್ದಾರೆ. ದೇಶದ ಇತಿಹಾಸ ರೂಪಿಸಿದ ಈ ಶೂರರ ಸ್ಮರಣಾರ್ಥ, ಈ ಪುಟ್ಟ ಕ್ರಮ ನನ್ನ ಕಡೆಯಿಂದ ಒಂದು ನಿಸ್ವಾರ್ಥ ನಮನ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!