ಬೆಮುಲ್ 13.26 ಕೋಟಿ ಲಾಭದ ಹಾಲಿನ ಹೆಜ್ಜೆ – ರೈತನ ಗೆಲುವಿಗೆ ಬಾಲಚಂದ್ರ ಬ್ರಾಂಡ್

ಬೆಮುಲ್ 13.26 ಕೋಟಿ ಲಾಭದ ಹಾಲಿನ ಹೆಜ್ಜೆ – ರೈತನ ಗೆಲುವಿಗೆ ಬಾಲಚಂದ್ರ ಬ್ರಾಂಡ್”

ಬೆಳಗಾವಿ:
ಸಹಕಾರ ಕ್ಷೇತ್ರದಲ್ಲಿ ಬಹುದಿನಗಳಿಂದ ಆಗದ ರೀತಿಯ ಉತ್ಸವಮಯ ವರದಿ ಇದೀಗ ಬೆಳಗಾವಿ ಹಾಲು ಒಕ್ಕೂಟ (ಬೆಮುಲ್) ನಿಂದ ಹೊರಬಿದ್ದಿದೆ. ನಂಬಿಕೆ, ಶ್ರದ್ಧೆ, ಮತ್ತು ಶಿಸ್ತಿನ ಮಿಶ್ರಣದಿಂದ ಬೆಮುಲ್ 2024-25 ಆರ್ಥಿಕ ವರ್ಷದಲ್ಲಿ whopping ₹13.26 ಕೋಟಿ ಲಾಭ ಗಳಿಸಿದ್ದು, ಇದು ಕೇವಲ ಲಾಭವಲ್ಲ – ರೈತರ ಶ್ರಮದ ಗೆಲುವಿಗೆ ಬಣ್ಣದ ಬಿಲ್ಲು!

ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಈ ದಾಖಲೆ ಲಾಭ ಸಾದ್ಯವಾಗಿದ್ದು, ಇಡೀ ಡೇರಿ ವ್ಯವಸ್ಥೆಗೆ ಹೊಸ ದಿಕ್ಕು ತೋರಿದೆ.
ಬೆಮುಲ್ ಎಂದರೆ ಈಗ ಬ್ರ್ಯಾಂಡ್ – ಅದು ರೈತನ ನಂಬಿಕೆಯ ನಾಮಪತ್ರ!” ಎಂತಲೇ ಅವರ ಮಾತು.


ಬೆಮುಲ್‌ನ ಬೆಳವಣಿಗೆಯ ಪಟ್ಟಿ!

ಒಟ್ಟು ವಹಿವಾಟು: ₹399.50 ಕೋಟಿ (ಶೇ.24 ಏರಿಕೆ)

ಹಾಲು ಶೇಖರಣೆ: ಪ್ರತಿ ದಿನ 2.10 ಲಕ್ಷ ಕೆಜಿ (ಶೇ.22 ಏರಿಕೆ)

ಪ್ಯಾಕೇಜ್ ಹಾಲು ಮಾರಾಟ: 80 ಲಕ್ಷ ಲೀಟರ್ (ಶೇ.196 ಏರಿಕೆ)

ಮಾರುಕಟ್ಟೆ ವಿಸ್ತರಣೆ: ಮುಂಬೈ, ಆಂಧ್ರಪ್ರದೇಶದವರೆಗೂ ಪಸರ

ತುತ್ತು ಮಾರುಕಟ್ಟೆ: ತುಪ್ಪ, ಮೊಸರು, ಪನೀರ್, ಕುಂದಾ ಮಾರಾಟ ಶೇ.10-49 ಹೆಚ್ಚಳ


– ಲಾಭ ನೇರವಾಗಿ ರೈತನ ಜೇಬಿಗೆ!”

ಬಾಲಚಂದ್ರ ಜಾರಕಿಹೊಳಿ ಅವರ ಸ್ಪಷ್ಟ ಮಾತು:
“ಇದು ಲಾಭವಲ್ಲ… ಇದು ರೈತನ ಶಕ್ತಿಯ ಹೂಡಿಕೆ!”

ಲಾಭದ ಪಾಲಿನಲ್ಲಿ:

50 ಹಾಲು ಕರೆಯುವ ಯಂತ್ರಗಳು

400 ಮೇವು ಕತ್ತರಿಸುವ ಯಂತ್ರಗಳು

10,000 ರೈತರಿಗೆ ರಬ್ಬರ್ ಮ್ಯಾಟ್

ಶೇ.60 ರಿಯಾಯಿತಿಯಲ್ಲಿ ಬಿಎಮ್‌ಸಿ ಘಟಕಗಳು, ಕಟ್ಟಡ ಅನುದಾನ, ಮಾರುಕಟ್ಟೆ ಸೌಲಭ್ಯಗಳು


ಬೆಮುಲ್ 2.0: ಹೈಟೆಕ್ ಡೇರಿಯ ಕನಸು ಹುಟ್ಟಿದೆ!

₹350 ಕೋಟಿ ವೆಚ್ಚದಲ್ಲಿ ಆಧುನಿಕ ಮೆಗಾ ಡೇರಿ ಯೋಜನೆ ಆರಂಭದ ಹಂತದಲ್ಲಿದೆ.
ಹೊಸ ವ್ಯವಸ್ಥೆಗಳ ಪಟ್ಟಿ:

ಬ್ಯಾಕ್ಟೋಪ್ಯೂಜ್ ಯಂತ್ರ

ಕೋಲ್ಡ್ ಸ್ಟೋರೇಜ್

ಪ್ಯಾಕಿಂಗ್ ಯಂತ್ರಗಳು

ಶೀತಲ ಕೇಂದ್ರ ವಿಸ್ತರಣೆ

ಜಮೀನಿನ ಹುಡುಕಾಟ ಪ್ರಗತಿಯಲ್ಲಿ, ರೈತರಿಗೆ ಹೊಸ ತಲೆಮಾರಿಗೆ ತಕ್ಕ ಡೇರಿ ವ್ಯವಸ್ಥೆ ನಿರ್ಮಾಣದ ಹಾದಿಯಲ್ಲಿ ಬೆಮುಲ್ ಇದೆ.


ರೈತನ ಹಾಲಿನಲ್ಲಿ ಲಾಭದ ರುಚಿ – ಸಹಕಾರದಲ್ಲಿ ಹೊಸ ಚಟುವಟಿಕೆ!”

ಸವದತ್ತಿ ಯಲ್ಲಮ್ಮ ಜಾತ್ರೆ, ಹಬ್ಬದ ಮಾರುಕಟ್ಟೆ… ಎಲ್ಲೆಡೆ ಬೆಮುಲ್‌ನ ಮಜ್ಜಿಗೆ, ಸಿಹಿ ಉತ್ಪನ್ನಗಳ ಭರ್ಜರಿ ಮಾರಾಟ!

Leave a Reply

Your email address will not be published. Required fields are marked *

error: Content is protected !!