
ಶವಪೆಟ್ಟಿಗೆಯಲ್ಲಿ ಸಮಾಧಿಯಾದ ಕನಸುಗಳು..!
ಪೈಪಲೈನ್ ಕಾಮಗಾರಿಗೆ ಬಲಿಯಾದ ಜೀವಗಳು –
ಬಡ ಕುಟುಂಬಗಳ ಕನಸುಗಳ ಉರಿಯಲ್ಪಟ್ಟ ಕಥನ*
ಬೆಳಗಾವಿ
ಬೆಳಗಾವಿಗೆ ಕೆಲಸಕ್ಕೆಂದು ಬಂದು ಮಣ್ಣಲ್ಲಿ ಮುಳುಗಿ ಹೋದ ಇಬ್ಬರು ಕಾರ್ಮಿಕರ ಸಾವಿಗೆ ಈಗ ಶೋಕ ಮತ್ತು ನ್ಯಾಯದ ಕೂಗು ಕೇಳಿಬರುತ್ತಿದೆ. ಈ ದುರ್ಘಟನೆ ಅಭಿವೃದ್ಧಿಯ ಹೆಸರಿನಲ್ಲಿ ಜೀವವನ್ನು ತೊರೆಸುವ ಬಗೆಯ ಕರಾಳ ತಾಜಾ ಉದಾಹರಣೆ.
“ ಇವರಿಗೆ ಕನಸುಗಳೇ ಬದುಕು!”
– *ಪಟಗುಂದಿಯ ಯುವಕ ಶಿವಲಿಂಗ ಮಾರುತಿ ಸರವೆ – ಮಣ್ಣಿನೊಳಗೆ ಮಸುಕಾದ ಮುಗಿಲುಗಳ ಕಥೆ

- ತಾಯಿ ಇಲ್ಲದ ಮನೆ, ವೃದ್ಧ ತಂದೆಗೆ ಆಧಾರವಾಗಿದ್ದ 28ರ ಹತ್ತಿರದ ಶಿವಲಿಂಗ. . ದಿನವೂ ಪಟಗುಂದಿಯಿಂದ ಬೆಳಗಾವಿಗೆ ಬಂದು ತಡರಾತ್ರಿ ಮನೆ ತಲುಪುತ್ತಿದ್ ಕಾರ್ಮಿಕರು.
ಭೂಮಿಯೊಳಗೆ ಸಮಾಧಿಯಾದ ಕನಸುಗಳು
– ದುಡಿಮೆ ಮಾತ್ರದ ಆಸರೆಯಾಗಿದ್ದ ಬಸವರಾಜ ಸರವೆ, ಪತ್ನಿ ಮತ್ತು ಮೂವರು ಮಕ್ಕಳಿಗೆ ಬೆನ್ನೆಲುಬು!

45 ವರ್ಷದ ಬಸವರಾಜ, ಪತ್ನಿ ತಂಗೆವ್ವ ಮತ್ತು ಮೂರು ಮಕ್ಕಳಿಗೆ ಆಶ್ರಯ. ಹೆಣ್ಣುಮಕ್ಕಳ ಮದುವೆ ಕನಸು, ಮಗನ ವಿದ್ಯಾಭ್ಯಾಸದ ಕನಸು – ಎಲ್ಲವನ್ನೂ ಬೆನ್ನತ್ತಿಕೊಂಡಿದ್ದ ಈ ತಂದೆ, ತನ್ನ ಕುಟುಂಬದ ಭವಿಷ್ಯಕ್ಕೆ ಶಿಲಾಸ್ಥಂಭವಾಗಿದ್ದ. ಆದರೆ ಈಗ ಆ ಮಕ್ಕಳಿಗೆ ‘ತಂದೆ’ ಎನ್ನುವ ಹೆಸರಿಗೆ ನೆನಪಾಗುವುದು ಕೇವಲ ಅಂತ್ಯಕ್ರಿಯೆಯ ದೃಶ್ಯ!

ಕೇವಲ ದುರಘಟನೆವೋ? – ಇದೊಂದು ವ್ಯವಸ್ಥಾತ್ಮಕ ಅಪರಾಧ!
ಈ ದುರ್ಘಟನೆ ಕೇವಲ “ಅಪಘಾತ”ವಲ್ಲ. ಇದು ಕಾರ್ಮಿಕರ ಪ್ರಾಣಕ್ಕೂ ಹೆಚ್ಚು ಕಾಮಗಾರಿ ಪೂರ್ಣಗೊಳಿಸುವ ದುಡಿಯುವ ಬಲವನ್ನೆ ಬಯಸುವ ವ್ಯವಸ್ಥೆಯ ಕ್ರೂರ ಮುಖ. ತಾತ್ಕಾಲಿಕ ತಡೆಗೋಡೆ ಇಲ್ಲ, ಎಚ್ಚರಿಕೆ ಫಲಕವಿಲ್ಲ, ಭೂ ಅಧ್ಯಯನ ಇಲ್ಲ, ತಾಂತ್ರಿಕ ಪರಿಶೀಲನೆ ಇಲ್ಲ – ಹೀಗೆ ಎಲ್ಲ ಸುರಕ್ಷತಾ ಕ್ರಮಗಳು ನಿರ್ಲಕ್ಷಿಸಲಾಗಿತ್ತು ಎಂಬುದು ಸ್ಥಳೀಯರ ದಿಟ್ಟ ಸಾಕ್ಷ್ಯ.

“ ಪರಿಹಾರ” ಎಂಬ ಶಬ್ದವೇಕೆ ಕೇವಲ ಅಪಮಾನವೋ?
ಮೃತ ಕಾರ್ಮಿಕರ ಕುಟುಂಬಗಳಿಗೆ ಘೋಷಿಸಲಾದ ಹಣಪೂರೈಕೆ – ಎಷ್ಟು? ಯಾರಿಗೆ? ಯಾವ ಆಧಾರದ ಮೇಲೆ? ಹಣದಿಂದಾಗಿ ಹೆಣ್ಣಿನ ಮದುವೆಯ ಕನಸು, ಪುಟ್ಟ ಮಕ್ಕಳ ಶಾಲೆಯ ಪಾಠ ಮರಳುತ್ತದೆಯೆ? ಜೀವದ ಬೆಲೆ ಕೊಟ್ಟವರ ಕುಟುಂಬಕ್ಕೆ ನ್ಯಾಯ ಸಿಗಬೇಕೆಂಬ ಹಕ್ಕು ಇದೆ. ಇದು ಕೇವಲ “ಪರಿಹಾರ”ದ ಮಾತಲ್ಲ, ಇದು ವ್ಯವಸ್ಥೆಯ ವಿರುದ್ಧದ ಪ್ರಶ್ನೆ!
– ಜವಾಬ್ದಾರಿ ಯಾರದು?
ಕಾಮಗಾರಿ ಅನುಮೋದಿಸಿದ ಅಧಿಕಾರಿಗಳು ಯಾರು?
ಎಂಜಿನಿಯರ್ಗಳು ಸ್ಥಳ ಪರಿಶೀಲನೆ ಮಾಡಿದ್ದರೆ ಏನು ಕಂಡುಹಿಡಿದಿದ್ದರು?
ಕಾಮಗಾರಿ ಪ್ರಾರಂಭಕ್ಕೂ ಮುನ್ನ ತಾಂತ್ರಿಕ ಹಾಗೂ ಭೌಗೋಳಿಕ ತಪಾಸಣೆ ನಡೆಸಲಾಗಿತ್ತೇ?
ಗುತ್ತಿಗೆದಾರರ ನಡವಳಿಕೆ ಎಷ್ಟು ತಾಳ್ಮೆಯೂ, ಕಾನೂನು ಪಾಲನೆಯೂ ಹೊಂದಿತ್ತು?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ. ಇದು ಜವಾಬ್ದಾರಿ ಹೆಸರಿನಲ್ಲಿ ತಲೆಯ ಕೆಳಗಿಡೋ ಸಮಯವಲ್ಲ, ಪ್ರಶ್ನೆ ಎತ್ತುವ ಸಮಯ!
ಸಚಿವರ ಭರವಸೆ – ..!

ಸಚಿವೆ ಸತೀಶ್ ಜಾರಕಿಹೊಳಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ. ಸಮಗ್ರ ತನಿಖೆ, ಸೂಕ್ತ ಕ್ರಮ, ಪರಿಹಾರದ ಭರವಸೆ ನೀಡಿದ್ದಾರೆ. ಆದರೆ ಈ ಭರವಸೆಗಳು ಮಣ್ಣಿನಲ್ಲಿ ಹೂತುಹೋದ ಜೀವಗಳಿಗೇ ಅಲ್ಲ – ಬದುಕು ನಂಬಿಕೊಂಡಿರುವ ಕುಟುಂಬಗಳಿಗೆ.
ಇತ್ತೀಚಿನ ಘಟನೆಗಳು ರಾಜ್ಯದ ಅಭಿವೃದ್ಧಿ ಹೆಸರಿನಲ್ಲಿ ನಡೆಯುವ ದುಡಿಯುವ ವರ್ಗದ ಮೇಲಿನ ದಬ್ಬಾಳಿಕೆಯ ಸ್ಥಿತಿಗೆ ದೃಷ್ಟಿ ಹರಿಸುವಂತೆ ಮಾಡುತ್ತಿವೆ. “ಪ್ರಗತಿ” ಎಂದರೆ ಜನರ ಪ್ರಾಣದ ಬೆಲೆಯಲ್ಲಿ ಅಲ್ಲ. ಯೋಜನೆಗಳ ಶಿರೋಮಣಿಯಾಗಬೇಕಾದ ಸರ್ಕಾರ, ಕಾರ್ಮಿಕರ ಜೀವದ ಮೇಲ್ವಿಚಾರಕನಾಗಬೇಕು. ಈ ಮಣ್ಣಿನಲ್ಲಿ ಹೊತ್ತಿದ ಅಸಮಾನತೆಯ ಕಥೆ, ನ್ಯಾಯಕ್ಕೆ ಕಾರಣವಾಗಲಿ!