ಬೆಳಗಾವಿ.
ಮಹಾನಗರ ಪಾಲಿಕೆಗೆ ನಿಯಮಾನುಸಾರ ಬರಬೇಕಿದ್ದ ತೆರಿಗೆ ಬಾಕಿ ಉಳಿಸಿಕೊಂಡ ಹೆಸರಾಂತ ಕಂಪನಿಗೆ ಬೀಗ ಜಡಿಯುವ ತೀಮರ್ಾನಕ್ಕೆ ಪಾಲಿಕೆ ಬಂದಿದೆ.
ಮೂಲಗಳ ಪ್ರಕಾರ ಉದ್ಯಮಬಾಗ ಪರಿಸರದ ಹೊರವಲಯದಲ್ಲಿರುವ ಹೆಸರಾಂತ ಕಂಪನಿ ಪಾಲಿಕೆಗೆ ಸುಮಾರು 6 ಕೋಟಿ ರೂ. ತೆರಿಗೆ ಭರಣಾ ಮಾಡಬೇಕಿತ್ತು, ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಕೂಡ ನಡೆದಿತ್ತು.

ಈ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪಾಲಿಕೆ ಆಯುಕ್ತೆ ಶುಭ ಬಿ ಅವರು ಆ ಕಂಪನಿಗೆ ಸಂಬಂಧಿಸಿದಂತೆ ಕೆಲವೇ ದಿನಗಳಲ್ಲಿ ನಾಲ್ಕು ಸಲ ತಮ್ಮ ಕೋರ್ಟನಲ್ಲಿ ವಿಚಾರಣೆ ಮಾಡಿದ್ದರು,
‘ಆದರೂ ಸಂಬಂಧಿಸಿದ ಕಂಪನಿಯವರು ಅಗತ್ಯ ದಾಖಲೆಗಳನ್ನು ಕೊಡುವಲ್ಲಿ ವಿಫಲವಾದರು, ಈ ಹಿನ್ನೆಲೆಯಲ್ಲಿ ಬಹುಶ: ಈ ವಾರಾಂತ್ಯದಲ್ಲಿ ಬೀಗ ಜಡಿಯುವ ತೀರ್ಮಾನಕ್ಕೆ ಬರುವ ಎಲ್ಲ ಲಕ್ಷಣಗಳು ಕಾಣಸಿಗುತ್ತಿವೆ.
ಈ ತೆರಿಗೆ ವಸೂಲಾತಿಯಲ್ಲಿ ಪಾಲಿಕೆಯ ಕಂದಾಯ ಶಾಖೆಯವರು ಅನೇಕ ಲೋಪ ಮಾಡಿದ್ದರು, ಈ ಹಿನ್ನೆಲೆಯಲ್ಲಿ ಕಂದಾಯ ಉಪ ಆಯುಕ್ತೆ ಸೇರಿದಂತೆ ನಾಲ್ವರಿಗೆ ನೋಟೀಸ್ ಕೂಡ ಜಾರಿ ಮಾಡಿದ್ದರು.
ಅನುಮತಿ ಕೊಡಬೇಡಿ..!
ಬೆಳಗಾವಿ ಅನಗೋಳ ನಾಕಾ ಬಳಿ ಪಾಲಿಕೆಯ ಯಾವುದೇ ಅನುಮತಿ ಪಡೆಯದೇ ನಡೆಯುತ್ತಿರುವ ಹೊಟೇಲ್ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಯುಕ್ತರಿಗೆ ದೂರು ನೀಡಿದ್ದಾರೆ.
ಕಳೆದ ಹಲವು ತಿಂಗಳುಗಳಿಂದ ಈ ಹೊಟೇಲನವರು ಟ್ರೇಡ್ ಲೈಸನ್ಸ ಇಲ್ಲದೇ ವ್ಯವಹಾರ ಆರಂಭಿಸಿದ್ದಾರೆಂದು ಆಯುಕ್ತರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ. ಈ ಹೋಟೇಲ್ನಿಂದ ಸಂಚಾರಕ್ಕೂ ತೀವೃ ತೊಂದರೆ ಆಗುತ್ತಿದೆ, ಆದ್ದರಿಂದ ಇವರಿಗೆ ಯಾವುದೇ ಪರಿಸ್ಥಿತಿಯಲ್ಲಿ ಲೈಸನ್ಸ ಕೊಡಬಾರದು ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.