
ಕುಟುಂಬ ರಾಜಕಾರಣಕ್ಕೆ ಡಿಸಿಸಿ ವೇದಿಕೆ..!
ಡಿಸಿಸಿ ಬ್ಯಾಂಕ್ ಕಟ್ಟೆಗೆ ಕಣ್ಣು ಹಾಕಿದ ಸಕರು: ಕುಟುಂಬ ರಾಜಕಾರಣಕ್ಕೆ ಮತ್ತೊಂದು ವೇದಿಕೆ ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರಿ (ಡಿಸಿಸಿ) ಬ್ಯಾಂಕ್ ಚುನಾವಣೆಗೆ ಇನ್ನೂ ಅಧಿಕೃತ ವೇಳಾಪಟ್ಟಿ ಪ್ರಕಟವಾಗದಿದ್ದರೂ, ಹಲವಾರು ಶಾಸಕರು ಈಗಾಗಲೇ ಲಾಬಿ ಆರಂಭಿಸಿದ್ದಾರೆ. ಶಾಸಕರು ಮಾತ್ರವಲ್ಲ, ಅವರ ಕುಟುಂಬಸ್ಥರೂ ಸಹ ಡಿಸಿಸಿ ನಿರ್ದೇಶಕ ಸ್ಥಾನಗಳಿಗಾಗಿ ಮೈದಾನಕ್ಕಿಳಿದಿದ್ದು, ಈ ಬಾರಿ ಸಹಕಾರ ಕ್ಷೇತ್ರವೇ ಕುಟುಂಬ ರಾಜಕಾರಣದ ಹಗ್ಗಜಗ್ಗಾಟಕ್ಕೆ ವೇದಿಕೆಯಾಗಬಹುದೆಂಬ ಆತಂಕ ವ್ಯಕ್ತವಾಗಿದೆ. ಸಾವಿರಾರು ಕೋಟಿ ರೂ. ವಹಿವಾಟು ನಡೆಸುವ ಡಿಸಿಸಿ ಬ್ಯಾಂಕ್ ರೈತರಿಗೂ ಸದಸ್ಯರಿಗೂ ನೇರವಾಗಿ…