Headlines

ಸಿದ್ದು ನಿರೀಕ್ಷೆಯಲ್ಲಿ ಬೆಂಗಳೂರು..!


ಮಳೆಯ ಹಾನಿಗೆ ಸಿಎಂ, ಡಿಸಿಎಂ ಮೆಗಾ ನಗರ ಪರಿಶೀಲನೆ
ಮೇ 21ರಂದು ಇಡೀ ದಿನ ನಗರ ಪ್ರವಾಸ: ಸಿಎಂ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು, ಮೇ 19:
ನಗರದ ಮಳೆಯ ಹಾನಿಗೆ ತ್ವರಿತ ಕ್ರಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕೆಲವು ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. “ಸಂಜೆ ಟ್ರಾಫಿಕ್‌ ಸಮಸ್ಯೆ ಇರುವ ಕಾರಣ ಇಂದು ಕೆಲವು ಕಡೆ ಮಾತ್ರ ಭೇಟಿ ನೀಡಿದೇನೆ. ಮೇ 21ರಂದು ಉಪಮುಖ್ಯಮಂತ್ರಿ ಮತ್ತು ಶಾಸಕರೊಂದಿಗೆ ಇಡೀ ದಿನ ನಗರ ದೌಡಾಯಿಸಲಿದ್ದಾರೆ” ಎಂದು ತಿಳಿಸಿದರು.

CM KARNATAKA

ರಾಜಕಾಲುವೆ ಕಾರ್ಯಗಳು:
859.90 ಕಿ.ಮೀ ರಾಜಕಾಲುವೆಗಳಲ್ಲಿ 491 ಕಿ.ಮೀ ತಡೆಗೋಡೆ ಪೂರ್ಣ, 195 ಕಿ.ಮೀ ಕೆಲಸ ಪ್ರಗತಿಯಲ್ಲಿದೆ. 173 ಕಿ.ಮೀ ವರ್ಡ್ ಬ್ಯಾಂಕ್ ನೆರವು, 210 ತಗ್ಗು ಪ್ರದೇಶಗಳಲ್ಲಿ 166 ಕಾಮಗಾರಿ ಮುಗಿದಿದ್ದು, ಉಳಿದವು ಪ್ರಗತಿಯಲ್ಲಿವೆ.

ವೈಟ್‌ಫೀಲ್ಡ್‌ ಘಟನೆ:
ಮಳೆಯಿಂದ ಸಾವಿಗೀಡಾದ ಮಹಿಳೆಗೆ 5 ಲಕ್ಷ ರೂ. ಪರಿಹಾರ ಘೋಷಣೆ.

ಸಂಚಾರ ಸಮಸ್ಯೆಗೆ ತ್ವರಿತ ಕ್ರಮ:
132 ಸಂಚಾರಿ ತಡೆ ಪ್ರದೇಶಗಳಲ್ಲಿ 82 ಪೂರ್ಣ, 41 ಕಾಮಗಾರಿ ಬಾಕಿ. ರೈಲ್ವೆ ಸಹಕಾರದೊಂದಿಗೆ ಪ್ರಮುಖ ಜಂಕ್ಷನ್‌ಗಳಲ್ಲಿ ನೀರಿನ ಹರಿವು ಸುಗಮಗೊಳಿಸಲಾಗುತ್ತಿದೆ.

ಒತ್ತುವರಿ CLEARANCE:
4292 ಒತ್ತುವರಿಗಳ ಪೈಕಿ 2326 ತೆರವುಗೊಳಿಸಲಾಗಿದೆ. ಉಳಿದವು ಮೇಲೆ ಕ್ರಮ ಜಾರಿಯಲ್ಲಿದೆ.

ಸರ್ಕಾರ ಎಲ್ಲರಿಗೂ ಸಮಾನ. ಬಡ-ಶ್ರೀಮಂತ ಎಂದು ಭೇದವಿಲ್ಲ. ಜನರ ತೊಂದರೆ ತಗ್ಗಿಸಲು ಬದ್ಧತೆ,” ಎಂದು ಸಿಎಂ ಹೇಳಿದರು.

Leave a Reply

Your email address will not be published. Required fields are marked *

error: Content is protected !!