Headlines

ಹಾಲಿನಲ್ಲಿ ರಾಜಕೀಯ ಹಗ್ಗಜಗ್ಗಾಟ”

KMF ಅಧ್ಯಕ್ಷ ಸ್ಥಾನದ ಕುಸ್ತಿಯಲ್ಲಿ JARKIHOLI V/s DKSU

ಹಾಲು ರಾಜಕೀಯ” ಎಂದರೆ ಕೇವಲ ಉತ್ಪಾದನೆ, ಬೆಲೆ ನಿಗಧಿ ಅಲ್ಲ. ಅದು ಈಗ ‘ರಾಜಕೀಯ ಶಕ್ತಿಯ ಹಾಲಿನ ಹರಿವಾಗಿದೆ’. ಈ ಹರಿವಿನಲ್ಲಿ ಯಾರಿಗೆ ಗೆಲುವು ಲಭ್ಯವಾಗುತ್ತೆ ಎಂಬುದನ್ನು ಮುಂದಿನ ದಿನಗಳು ನಿರ್ಧರಿಸಲಿವೆ. ಆದರೆ ಈ ಬಾರಿ ಕೆಎಂಎಫ್ ಚುನಾವಣೆ ಸಹಕಾರ ಕ್ಷೇತ್ರದ ಮಾತಿಗಿಂತ ಹೆಚ್ಚಾಗಿ ರಾಜಕೀಯ ದಿಕ್ಕು ತೋರುವ ಆಯುಧವಾಗಿದೆ.

ಜಾರಕಿಹೊಳಿ ವರ್ಸಿಸ್ ಡಿಕೆಸು

ಜಾರಕಿಹೊಳಿ ಬಣಕ್ಕೆ ಪರೋಕ್ಷ ಥತಾಸ್ತು ಎಂದ ಸಿಎಂ ಸಿದ್ದು. ಡಿಕೆಗೆ ಮತ್ತೊಂದು ರಾಜಕೀಯ ಹೊಡೆತ ಕೊಡಲು ಸಜ್ಜಾದ ಜಾರಕಿಹೊಳಿ ಬಣ

ಬೆಂಗಳೂರು

ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಚುನಾವಣೆಯಲ್ಲಿ ಈ ಬಾರಿ ಸಾಮಾನ್ಯ ಸಂಘದ ಚುನಾವಣೆ ಎನ್ನುವ ಭಾವನೆ ಇಲ್ಲ. ಇದು ಈಗ ರಾಜ್ಯ ರಾಜಕೀಯದ ಅತ್ಯಂತ ಸೆಂಟರ್‌ಸ್ಟೇಜ್ ಆಗಿದ್ದು, ಡಿ.ಕೆ. ಸುರೇಶ್ ಹಾಗೂ ಬೆಳಗಾವಿಯ ಪ್ರಬಲ ಜಾರಕಿಹೋಳಿ ಕುಟುಂಬ ನಡುವೆ ನೇರ ರಾಜಕೀಯ ಕದನ ಆರಂಭವಾಗಿದೆ.

ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಲೋಕಸಭಾ ಚುನಾವಣೆ ಸೋಲಿನ ಬಳಿಕ ರಾಜಕೀಯ ಪುನರ್‌ಸ್ಥಾಪನೆಯ ವೇದಿಕೆಯಾಗುವ ನಿರೀಕ್ಷೆಯೊಂದಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಕೈಹಾಕಿದ್ದಾರೆ.

ಬೆಂಗಳೂರಿನ ಬಾಮುಲ್‌ ನಿರ್ದೇಶಕರಾಗಿ ಅವರು ಈಗಾಗಲೇ ಆಯ್ಕೆಯಾದಾಗಲೇ ಅವರ ಈ ನಿರ್ಧಾರ ಸ್ಪಷ್ಟವಾಗಿತ್ತು.

ಹಾಲು ಉತ್ಪಾದಕರ ಸಂಘಗಳು ರಾಜ್ಯದ ಗ್ರಾಮೀಣ ರಾಜಕೀಯದ ಹೃದಯಸ್ಥಳ ಎಂಬ ಅರ್ಥದಲ್ಲಿ ಈ ಚುನಾವಣೆಗೆ ರಾಜಕೀಯವಾಗಿ ಭಾರೀ ಮಹತ್ವ ಬಂದಿದೆ.

ಜಾರಕಿಹೊಳಿ ಕುಟುಂಬದ ತಂತ್ರ: ಉತ್ತರ ಕರ್ನಾಟಕದ ಹಾಲು ಒಕ್ಕೂಟಗಳನ್ನೆಲ್ಲಾ ನಿಯಂತ್ರಣಕ್ಕೆ ತೆಗೆದುಕೊಳ್ಳಲು ‘ಸ್ಟ್ರಾಟಜಿ’
ಬೆಳಗಾವಿಯ ಜಾರಕಿಹೊಳಿ ಕುಟುಂಬ ವಿಶೇಷವಾಗಿ ಬಾಲಚಂದ್ರ ಜಾರಕಿಹೋಳಿ – ಈಗಾಗಲೇ ಹಾಲು ಒಕ್ಕೂಟಗಳ ಕ್ಷೇತ್ರದಲ್ಲಿ ಶಕ್ತಿಶಾಲಿಯಾಗಿ ಬೆಳೆದಿದ್ದಾರೆ.

ಕೆಎಂಎಫ್‌ನ ಹಾಲಿ ಅಧ್ಯಕ್ಷ ಭೀಮನಾಯಕ್ ಸ್ಥಾನಕ್ಕೆ ಮತ್ತೆ ಅಧಿಕಾರದಲ್ಲಿ ಉಳಿಯುವಂತೆ ಸಂಪೂರ್ಣ ಬೆಂಬಲ ನೀಡುತ್ತಿರುವ ಜಾರಕಿಹೋಳಿ ಕುಟುಂಬ ಈಗ ಡಿಕೆ ಸುರೇಶ್‌ ಗೆಲುವಿಗೆ ದೊಡ್ಡ ಮಟ್ಟದ ಅಡ್ಡಿಯಾಗಿದೆ ಎನ್ನಲಾಗುತ್ತಿದೆ.

ಸಿಎಂ ಸಿದ್ದರಾಮಯ್ಯನವರ ಮೌನ ಏನು ಸೂಚಿಸುತ್ತಿದೆ?
ಈ ಪೈಪೋಟಿಯಲ್ಲಿ ಮತ್ತೊಂದು ಕುತೂಹಲಕಾರಿ ಅಂಶ ಎಂದರೆ ಸಿಎಂ ಸಿದ್ದರಾಮಯ್ಯನವರ ಮೌನ. ಬಹಿರಂಗವಾಗಿ ಯಾರು ಯಾವ ಬದಿಗೆಯನ್ನೂ ತೆಗೆದುಕೊಳ್ಳದೆ ಉಳಿದಿರುವ ಸಿಎಂ, ಪರೋಕ್ಷವಾಗಿ ಜಾರಕಿಹೋಳಿಗಳಿಗೆ ಬೆಂಬಲ ನೀಡುತ್ತಿರುವ ಅನುಮಾನಗಳು ಹೊರಗೆ ಬರುತ್ತಿವೆ.

ಡಿಕೆ ಕುಟುಂಬದ ಪ್ರಭಾವವನ್ನು ನಿಯಂತ್ರಿಸಲು ಉತ್ತರ ಕರ್ನಾಟಕದ ಶಕ್ತಿ ಕೇಂದ್ರವನ್ನೇ ಪ್ರೋತ್ಸಾಹಿಸಬಹುದೆಂಬ ಮಾತುಗಳು ಕಾಂಗ್ರೆಸ್ ಒಳವಲಯದಲ್ಲಿ ಕೇಳಿಬರುತ್ತಿವೆ.

ರಾಜಕೀಯ ಸಮೀಕರಣ ಹೀಗಿದೆ:

ಕೆಎಂಎಫ್ ಅಧ್ಯಕ್ಷ ಸ್ಥಾನ – ಮುಂದಿನ ವಿಧಾನಸಭಾ ರಾಜಕೀಯದ ಇತಿಹಾಸ ನಿರ್ಮಾಣಕರ ಸ್ಥಾನ?
ಈ ಚುನಾವಣೆಯ ಫಲಿತಾಂಶ ಕೇವಲ ಸಹಕಾರ ಕ್ಷೇತ್ರದ ಬದಲಾವಣೆ ಅಲ್ಲ, ಇದೊಂದು ಶಕ್ತಿ ತೂಕದ ತಿರುವು. ಡಿ.ಕೆ. ಸುರೇಶ್ ಗೆ ಅಧಿಕಾರ ದೊರೆತರೆ, ಅವರು ಮತ್ತೆ ರಾಜ್ಯದ ದಕ್ಷಿಣ ಭಾಗದಲ್ಲಿ ಶಕ್ತಿಕೇಂದ್ರವಾಗಿ ಬೆಳೆಸಬಹುದು. ಆದರೆ ಜಾರಕಿಹೋಳಿ ಸೋದರರು ಜಯಗಳಿಸಿದರೆ, ಉತ್ತರ ಕರ್ನಾಟಕದ ಶಕ್ತಿ ಸಮೀಕರಣ ಪಕ್ಷದ ನಿರ್ಧಾರಗಳಲ್ಲಿಯೂ ಪ್ರಭಾವ ಬೀರುತ್ತದೆ.

.

Leave a Reply

Your email address will not be published. Required fields are marked *

error: Content is protected !!