ಕುರಾನ್ ಸುಟ್ಟ ಪ್ರಕರಣ
`ಬೆಳಗಾವಿಗೆ ಇಂದು ಸಿಓಡಿ ಡಿಐಜಿ’
ಬೆಳಗಾವಿ.
ಸಂತಿಬಸ್ತವಾಡದಲ್ಲಿ ನಡೆದ ಕುರಾನ್ ಸುಟ್ಟ ಪ್ರಕರಣ ಈಗ ಸಿಓಡಿಗೆ ವರ್ಗವಾದ ನಂತರ ತನಿಖೆ ಚುರುಕುಗೊಂಡಿದೆ.
ಈಗಾಗಲೇ ಸಿಓಡಿ ಡಿಎಸ್ಪಿ ಸುಲೇಮಾನ್ ತಹಶೀಲ್ದಾರದ ಅವರು ತನಿಖೆ ನಡೆಸಿದ್ದಾರೆ, ಆದರೆ ಸಿಓಡಿ ಡಿಐಜಿ ಶಾಂತಲು ಸಿನ್ಹಾ ಮತ್ತು ಎಸ್ಪಿ ಶುಭನ್ವಿತಾ ಅವರು ನಾಳ ದಿ.3 ರಂದು ಹೆಚ್ಚಿನ ತನಿಖೆಗೆ ಬೆಳಗಾವಿಗೆ ಭೆಟ್ಟಿ ನೀಡಲಿದ್ದಾರೆ,

ಅವರು ಸಂತಿಬಸ್ತವಾಡದ ಘಟನಾ ಸ್ಥಳಕ್ಕೆ ಭೆಟ್ಟಿ ಸಹ ನೀಡಲಿದ್ದಾರೆ.
ಆದರೆ ಸ್ಥಳೀಯ ಪೊಲೀಸರು ಪತ್ತೆ ಮಾಡಬೇಕಾದ ಈ ಪ್ರಕರಣವನ್ನು ಸಿಓಡಿಗೆ ವಹಿಸಿದ್ದು ಏಕೆ ಎನ್ನುವ ದೊಡ್ಡ ಚಚರ್ೆಎಲ್ಲರಲ್ಲಿದೆ.
ಪ್ರತಿಭಟನೆ
ಸಂತಿಬಸ್ತವಾಡದಲ್ಲಿ ಕುರಾನ್ ಗ್ರಂಥ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಒತ್ತಾಯಿಸಿ ಸೋಮವಾರ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದರು.