
ಕುರಾನ್ ಸುಟ್ಟ ಪ್ರಕರಣ- ಸಿಐಡಿಗೆ ವರ್ಗಾವಣೆ
ಬೆಳಗಾವಿ.ತಾಲೂಕಿನ ಸಂತಿಬಸ್ತವಾಡ ಗ್ರಾಮದ ನಿರ್ಮಾಣ ಹಂತದಲ್ಲಿರುವ ಮಸೀದಿಯಲ್ಲಿನ ಕುರಾನ್ ಸುಟ್ಟ ಪ್ರಕರಣ ಈಗ ಸಿಐಡಿಗೆ ವರ್ಗಾವಣೆಗೊಂಡಿದೆ. ಮಸೀದಿಯಲ್ಲಿನ ಸಿಸಿಟಿವಿ ದುರಸ್ತಿಗೆ ಹೋಗಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳು ಅಲ್ಲಿನ ಪವಿತ್ರ ಗ್ರಂಥ ಕುರಾನನ್ನು ಜಮೀನಿನಲ್ಲಿ ಸುಟ್ಟಿದ್ದರು. ಈ ಬಗ್ಗೆ ಮುಸ್ಲೀಂ ಬಾಂಧವರು ಪ್ರತಿಭಟನೆ ನಡೆಸಿದಾಗ ಪೊಲೀಸ್ ಆಯುಕ್ತರು ಮೂರು ದಿನದ ಗಡುವು ಕೇಳಿದ್ದರು. ಆದರೆ ನೀಡಿದ ಗಡುವಿನಲ್ಲಿ ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಮುಸ್ಲಿಂರು ಚನ್ನಮ್ಮ ವೃತ್ತದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ಆಗಲೂ ಕೂಡ ಪೊಲೀಸ್ ಆಯುಕ್ತರು ಮತ್ತೇ ಏಳು…