ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಹುಕ್ಕೇರಿ ಬೆಳಗಾವಿ, ಶ್ರೀ ಡಾ. ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ನಂದೀಪುರ, ಶ್ರೀ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ತಾವರಕೆರೆ, ಶ್ರೀ ಡಾ. ಅಜಾತ ಶoಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕರ್ನೂಲ ಪೂಜ್ಯರುಗಳು ಇಷ್ಟಲಿಂಗ ದೀಕ್ಷೆಯನ್ನು ನೀಡಲಿದ್ದಾರೆ.
ಬೆಳಗಾವಿ
ನಗರದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ತಮಿಳುನಾಡಿನ ವೀರಶೈವ ಸಮಾಜ ಆಹ್ವಾನಿಸಿದೆ.
ಜು. 13 ರ ರಂದು ಶ್ರೀಗಳು ತಮಿಳುನಾಡಿನ ವೀರಶೈವ ಸಮಾಜದ ಸುಮಾರು ನೂರಾರು ಜನರಿಗೆ ಇಷ್ಟಲಿಂಗ ದೀಕ್ಷೆಯನ್ನು ನೀಡಿ ಅನುಗ್ರಹಿಸಲಿದ್ದಾರೆ. ವೀರಶೈವ ಲಿಂಗಾಯತರು ಇಡೀ ದೇಶದ ತುಂಬಾ ಇದ್ದು, ಅವರಿಗೆ ಯೋಗ್ಯ ಸoಸ್ಕಾರವನ್ನು ಕೊಡುವ ಅವಶ್ಯಕತೆ ಇದೆ. ಈ ದೃಷ್ಟಿಕೋನದಿಂದ ಶ್ರೀಗಳನ್ನು ತಮಿಳುನಾಡಿನ ವೀರಶೈವ ಸಮಾಜ ಆಹ್ವಾನಿಸಿದೆ. ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ವೀರಶೈವ ಲಿಂಗಾಯತ ಸಮಾಜದ ಸಾವಿರಾರು ಜನರಿಗೆ ದೀಕ್ಷೆಯನ್ನು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. ಶ್ರೀಗಳು ಆಸ್ಟ್ರೇಲಿಯ ದೇಶದ ಸಿಡ್ನಿ, ಮಲ್ಬರ್ನ್, ಅಷ್ಟೇ ಅಲ್ಲದೆ ಭಾರತದ ರಾಜ್ಯಗಳಾದ ರಾಜಸ್ತಾನ, ಕೇರಳ, ಆಂಧ್ರಪ್ರದೇಶ, ಗೋವಾ ರಾಜ್ಯ ಮತ್ತು ಮಹಾರಾಷ್ಟ್ರ ಗಳಲ್ಲಿ ಶ್ರೀಗಳು ಸಾವಿರಾರು ಜನರಿಗೆ ಇಷ್ಟಲಿಂಗ ದೀಕ್ಷೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ ಶ್ರೀಗಳು ವೀರಶೈವ ಲಿಂಗಾಯತ ತತ್ವ ಇಡೀ ವಿಶ್ವಕ್ಕೆ ಪೂರಕವಾಗಿ ನಿಂತಿದೆ. ನಾವಿಂದು ಭಕ್ತರಿಗೆ ಇಷ್ಟಲಿಂಗ ನೀಡುವ ಅವಶ್ಯಕತೆ ಇದ್ದು ಆ ದೃಷ್ಟಿಕೋನದಿಂದ ಹುಕ್ಕೇರಿ ಹಿರೇಮಠ ಆ ಕಾರ್ಯವನ್ನು ನಿರ್ವಹಿಸುತ್ತಿದೆ. ಇದೇ 13 ರ ರಂದು ಇಷ್ಟಲಿಂಗ ದೀಕ್ಷೆಯನ್ನು ನೀಡಲು ನಾವು ತೆರಳುತ್ತಿರುವುದು ಅತೀವ ಸಂತಸ ತಂದಿದೆ ಎಂದಿದ್ದಾರೆ. ನಾಮಗಿರಿ ಪೇಟೆಯ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಜರುಗುವ ಈ ಕಾರ್ಯಕ್ರಮದಲ್ಲಿ ಡಾ. ಎ ಕೆ ನಾಗರಾಜನ್, ಶ್ರೀ ಸಿಂತಿಲ್ ಕುಮಾರ, ರಾಷ್ಟ್ರೀಯ ವೀರಶೈವ ಮಹಾಸಭೆಯ ಉಪಾಧ್ಯಕ್ಷೆ ಶ್ರೀಮತಿ ವಿನುತಾ ರವಿ, ಲಂಡನ್ ಪಂಚಸೂತ್ರ ಅಕಾಡೆಮಿಯ ಸಿಇಒ ಚಂದ್ರಶೇಖರ ಹೆಚ್ ಎನ್. ಶ್ರೀ ವೀರೇಶ ಪೇಡಿ ಸೇರಿದಂತೆ ದಕ್ಷಿಣ ಭಾರತ ವೀರಶೈವ ಜಂಗಮ ಮಹಾಜನ ಸಂಘದ ಎಲ್ಲಾ ಸದಸ್ಯರು ಈ ಕಾರ್ಯಕ್ರಮಕ್ಕೆ ಸಹಕರಿಸಲಿರುವುದು ವಿಶೇಷ ವಾಗಿರಲಿದೆ.