ನಿಷ್ಠಾವಂತ ಅಧಿಕಾರಿ ಮತ್ತೇ ಕರ್ತವ್ಯಕ್ಕೆ ಮರಳಿದ್ದಾರೆ!
ಡಿಸಿಪಿ ನಾರಾಯಣ್ ಬರಮನಿ ಮತ್ತೆ ಬೆಳಗಾವಿಯಲ್ಲಿ ಸೇವೆಗಾಗಿ ಸಜ್ಜು✦
ಮುಖ್ಯಮಂತ್ರಿಯ ಕೈಚಲನೆಯಿಂದ ರಾಜೀನಾಮೆ ಸಲ್ಲಿಸಿದ್ದ ಅಧಿಕಾರಿ ಈಗ ಮತ್ತೆ ಪೊಲೀಸ್ ವ್ಯವಸ್ಥೆಗೆ ಹಾಜರ್!

ಬೆಳಗಾವಿಯಲ್ಲಿ ಡಿಸಿಪಿ ಬರಮನಿ ಬಂದಿರುವುದರಿಂದ ಇಲಾಖೆಗೆ ಒಂದು ರೀತಿಯ ಹೊಸ ಬಲ ಬಂದಿದೆ ಎನ್ನುವುದು ಸುಳ್ಳಲ್ಲ.ಸುದೈವವೆಙದರೆ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ಅವರದ್ದು ಮಾತು ಕಡಿಮೆ.ಕೆಲಸ ಜಾಸ್ತಿ. ಇಲ್ಲಿ ಕೂಡಿ ಕೆಲಸ ಮಾಡಿದರೆ ಇಲಾಖೆಗೊಂದು ವಿಶೇಷ ಕಿರೀಟ.
E belagavi ವಿಶೇಷ
ಬೆಳಗಾವಿ,
ರಾಜಕೀಯ ಬೆಸೆಯ ಮಧ್ಯೆ ಪ್ರಾಮಾಣಿಕತೆ ಕಾಪಾಡಿಕೊಂಡವರು, ತನ್ನ ಆತ್ಮಸಮ್ಮಾನಕ್ಕಾಗಿ ರಾಜೀನಾಮೆ ನೀಡಿದವರು, ಮತ್ತೆ ರಾಜಕೀಯದ ಕಣ್ತುಂಬಿದ ನಗರಿಗೆ ಹಿಂತಿರುಗಿದ್ದಾರೆ.
ಅವರ ಹೆಸರು ಡಿಸಿಪಿ ನಾರಾಯಣ ಬರಮನಿ
ಅವರನ್ನು ರಾಜ್ಯ ಸರ್ಕಾರ ಇದೀಗ ಬೆಳಗಾವಿ ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿ (DCP, Law & Order) ನಿಯೋಜಿಸಿದೆ.

ರಾಜೀನಾಮೆಗೆ ಕಾರಣವಾದ ಆತ್ಮಾಭಿಮಾನ*
ಕೇವಲ ಕೆಲವೇ ತಿಂಗಳುಗಳ ಹಿಂದೆ, ಬೆಳಗಾವಿಯ ಕಾಂಗ್ರೆಸ್ ಸಭೆಯಲ್ಲಿ ಮುಖ್ಯಮಂತ್ರಿಯವರ ಸಭೆಯಲ್ಲಿ ನಡೆದ ಅವಮಾನಕಾರಿ ಘಟನೆ—ಜೊತೆಗೆ ಅವರತ್ತ ಕೈ ಮಾಡುವ ಇಂಗಿತದ ನಂತರ—ಬರಮನಿ ತೀವ್ರವಾಗಿ ನೋವಿಗೀಡಾಗಿದ್ದರು. ಅಧಿಕಾರಿಯಾಗಿ ತಮ್ಮ ಗೌರವವನ್ನು ಉಳಿಸಿಕೊಳ್ಳಲು ಅವರು ಯಾವುದೇ ತಡೆಕೋಡವಿಲ್ಲದಂತೆ ಸ್ಪಷ್ಟ ನಿರ್ಧಾರ ತೆಗೆದು, ಸ್ವಯಂ ಸೇವಾ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು.
ಅವರ ಈ ನಡೆ ಪೊಲೀಸರು ಕೇವಲ ಸಿಬ್ಬಂದಿಯಲ್ಲ, ವ್ಯಕ್ತಿತ್ವದ ಧುರೀಣರಾಗಬೇಕೆಂಬ ಪಾಠವನ್ನು ನೀಡಿತು. ಅಧಿಕಾರದ ಹುದ್ದೆಗೂ ಮೀರಿದ ಅವರ ಈ ಆತ್ಮಾಭಿಮಾನ ರಾಜ್ಯದಾದ್ಯಂತ ಅಭಿನಂದನೆಗೆ ಪಾತ್ರವಾಯಿತು.
ಸಮಾಧಾನಕ್ಕೆ ಸಚಿವರ ಮನವೊಲಿಕೆ

ಬರಮನಿಯ ಈ ನಿರ್ಧಾರ ರಾಜಕೀಯ ವಲಯಕ್ಕೂ ಶಾಕ್ ನೀಡಿತ್ತು. ನೋವಿನಲ್ಲಿದ್ದ ಅವರನ್ನು ಸೇವೆಗೆ ಹಿಂತಿರುಗಿಸಲು ಸರ್ಕಾರದ ಎಂಟು ಮಂದಿ ಹಿರಿಯ ಸಚಿವರೇ ನೇರವಾಗಿ ಮಧ್ಯ ಪ್ರವೇಶಿಸಿದ್ದರು. ಚರ್ಚೆಗಳು ನಡೆದರೂ, ಅವರು ತಕ್ಷಣ ಒಪ್ಪಿಕೊಂಡಿರಲಿಲ್ಲ. ಆತ್ಮಸಮರ್ಪಣೆ ಎಂಬುದರ ಅರ್ಥ ಏನೆಂದು ಹೊರಹಿಸಿಕೊಂಡಿದ್ದವರಿಗಂತೂ, ಅವರ ಮೌನವೇ ಉತ್ತರವಾಯಿತು.
ಹೊಸ ಆಯಾಮಕ್ಕೆ ನಿರೀಕ್ಷೆ

ಈಗ ಡಿಸಿಪಿಯಾಗಿ ನಾರಾಯಣ ಬರಮನಿ ಹೆಸರು ಮತ್ತೆ ಬೆಳಗಾವಿಗೆ ವರ್ಗವಾಗಿರುವುದು ಬೆಳವಣಿಗೆಯಾಗಿದೆ. ಹೈಪ್ರೊಫೈಲ್ ರಾಜೀನಾಮೆಯ ನಂತರ ಇದೇ ಅಧಿಕಾರಿಗೆ ಮತ್ತೆ ನಿಗೂಢ ರಾಜಕೀಯ ವಾತಾವರಣವಿರುವ ಬೆಳಗಾವಿ ನಗರದಲ್ಲಿ ಜವಾಬ್ದಾರಿ ನೀಡಿರುವುದು ವಿಶಿಷ್ಟವಾಗಿದೆ.
ಬೆಳಗಾವಿಯಲ್ಲಿ ಅವರ ನಡೆ ಹೇಗಿರಲಿದೆ?
ಬೆಳಗಾವಿಯ ಶಿಸ್ತು ಮತ್ತು ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಇದೀಗ ಮತ್ತೊಮ್ಮೆ ಬರಮನಿಯವರ ಭುಜಗಳ ಮೇಲೆ.
ಅವರು ಮೌನವಾಗಿ ಕೆಲಸ ಮಾಡುತ್ತಾರಾ?
ಅಥವಾ ಗಂಭೀರ, ದೃಢ ನಿರ್ಣಯದ ಮೂಲಕ ತಮ್ಮ ಹಿಂದಿನ ನೋವನ್ನೇ ಶಕ್ತಿಯಾಗಿ ಪರಿವರ್ತಿಸುತ್ತಾರಾ?
ಪೊಲೀಸ್ ವ್ಯವಸ್ಥೆಗೆ ಹೊಸ ಶ್ರದ್ಧೆಯು ಮೂಡಿಬರುವ ಉದ್ದೇಶವಿದೆಯೇ?
ಇದರ ಜೊತೆಗೆ ತಮ್ಮಸುತ್ತ ಮುತ್ತ ಇರುವವರ ಹಿನ್ನೆಲೆ ಬಗ್ಗೆ ವಿಚಾರ ಮಾಡಬೇಕಾದ ಅನಿವಾರ್ಯತೆ ಇದೆ.
ಇಡೀ ಸರ್ಕಾರದ ಕಣ್ಣು ಡಿಸಿಪಿ ನಾರಾಯಣ ಬರಮನಿ ಮೇಲಿರುತ್ತದೆ ಎನ್ನುವುದು ಸುಳ್ಳಲ್ಲ. ಹೀಗಾಗಿ ಅವರ ನಡೆ ಈಗ ತಙತಿಯ ಮೇಲಿನ ನಡಿಗೆ
ಇದು ಕೇವಲ ಡಿಸಿಪಿಯ ಹುದ್ದೆಗೆ ಯಾರಾದರೊಬ್ಬರ ನೇಮಕವಲ್ಲ. ಇದು ಅಧಿಕಾರ, ಆತ್ಮಸಮ್ಮಾನ ಮತ್ತು ಸಾರ್ವಜನಿಕ ವಿಶ್ವಾಸದ ನಡುವೆ ನಡಿಗೆ ಇಡುತ್ತಿರುವ ಅಧಿಕಾರಿ ನಾರಾಯಣ ಬರಮನಿಯ ಹೊಸ ಅಧ್ಯಾಯ* .
ಅದು ಬರೀ ಸ್ಮಾರ್ಟ್ ವೇಷವಲ್ಲ..!
“ಅಧಿಕಾರಿ ಎಂದರೆ ಸ್ಮಾರ್ಟ್ ವೇಷವಲ್ಲ, ಸ್ಪಷ್ಟ ಚಲನೆ. ಬರಮನಿ ಅವರು ಮತ್ತೆ ತೋರುತ್ತಿರುವ ನಾಯಕತ್ವ, ಅಧಿಕಾರದ ಮೌಲ್ಯವನ್ನು ಮರುಸ್ಥಾಪಿಸುವ ಮಹತ್ವದ ಹೆಜ್ಜೆಯಾಗಿದೆ.”