ಬೆಳಗಾವಿಯಲ್ಲಿ ಪ್ರದರ್ಶನ`ಸ್ಥಳೀಯ ಉದ್ಯಮಶೀಲತೆಯ ಆಚರಣೆ


ಬೆಳಗಾವಿ.
ಬೆಳಗಾವಿ ಮಿಲೇನಿಯಮ್ ಗಾರ್ಡನ್ನಲ್ಲಿ ಜಿತೊ ಬೆಳಗಾವಿ ಮತ್ತು ಜಿತೊ ಲೇಡೀಸ್ ವಿಂಗ್ ಎರಡು ದಿನಗಳ ಭವ್ಯ ಮತ್ತು ವರ್ಣರಂಜಿತ ಜೀವನಶೈಲಿ ಪ್ರದರ್ಶನವನ್ನು ಆಯೋಜಿಸಿತ್ತು.
ಇದರಲ್ಲಿ ಸ್ಥಳೀಯ ಮಹಿಳಾ ಉದ್ಯಮಿಗಳು, ಕಲಾವಿದರು ಮತ್ತು ಉದ್ಯಮಿಗಳು ತಮ್ಮ ವಿವಿಧ ಸರಕು ಮತ್ತು ಉತ್ಪನ್ನಗಳನ್ನು ಪ್ರಸ್ತುತಪಡಿಸಿದ್ದಾರೆ.


ಈ ಪ್ರದರ್ಶನವು ಕಲೆ, ಸಂಪ್ರದಾಯ, ಆಹಾರ ಸಂಸ್ಕೃತಿ ಮತ್ತು ಉದ್ಯಮಶೀಲತೆಯನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸುತ್ತಿದೆ.
ಪ್ರದರ್ಶನವನ್ನು ಬೆಳಗಾವಿ ನಗರ ಮಹಾನಗರ ಪಾಲಿಕೆಯ ಉಪಮೇಯರ್ ಶ್ರೀಮತಿ ವಾಣಿ ವಿಲಾಸ್ ಜೋಶಿ ಉದ್ಘಾಟಿಸಿದರು. ಮಹಿಳಾ ಶಕ್ತಿಯನ್ನು ಉತ್ತೇಜಿಸಲು ಸಂಘಟಕರ ಸಾಮಾಜಿಕ ಜಾಗೃತಿ ಮತ್ತು ಉಪಕ್ರಮಗಳನ್ನು ಅವರು ಶ್ಲಾಘಿಸಿದರು.
ಜಿತೊ ಲೇಡೀಸ್ ವಿಂಗ್ನ ಅಧ್ಯಕ್ಷೆ ಶ್ರೀಮತಿ ಸಾರಿಕಾ ಗಾಡಿಯಾ ನೇತೃತ್ವದಲ್ಲಿ ಲೀನಾ ಶಹಾ, ಶಿಲ್ಪಾ ಶಹಾ, ಅರ್ಚನಾ ಪದ್ಮನವರ್ ಅವರ ಮಾರ್ಗದರ್ಶನದಲ್ಲಿ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಕೀತರ್ಿ ದೊಡ್ಡಣನ್ನವರ, ಅಭಯ್ ಆದಿಮನಿ, ಪ್ರಮೋದ್ ಪಾಟೀಲ್, ನಿತಿನ್ ಪೋರವಾಲ ಮುಂತಾದವರು ಉಪಸ್ಥಿತರಿದ್ದರು.
ಈ ಪ್ರದರ್ಶನವು ವ್ಯಾಪಕ ಶ್ರೇಣಿಯ ಸಾಂಪ್ರದಾಯಿಕ ಉಡುಗೆಗಳು, ಕರಕುಶಲ ವಸ್ತುಗಳು, ಗೃಹೋಪಯೋಗಿ ಮತ್ತು ಸ್ಥಳೀಯ ಉತ್ಪನ್ನಗಳು, ನವೀನ ವಸ್ತುಗಳು ಮತ್ತು ರುಚಿಕರವಾದ ಆಹಾರ ಪದಾರ್ಥಗಳನ್ನು ಹೊಂದಿದೆ. ಮಹಿಳಾ ಉದ್ಯಮಿಗಳು ತಮ್ಮ ಸೃಜನಶೀಲತೆಯಿಂದ ರಚಿಸಿದ ವಸ್ತುಗಳಿಗೆ ಭಾರಿ ಪ್ರತಿಕ್ರಿಯೆ ಸಿಗುತ್ತಿದೆ

Leave a Reply

Your email address will not be published. Required fields are marked *

error: Content is protected !!