ಪತ್ರಕರ್ತರಿಗೆ ಆರೋಗ್ಯ ಕಾರ್ಡ ವಿತರಣೆ

ಮಹಾನಗರ ಪಾಲಿಕೆಯಿಂದ ನೀಡಲಾದ ಹೆಲ್ತ್ ಕಾರ್ಡ

ಮೇಯರ್, ಉಪಮೇಯರ್, ಆಡಳಿತ ಗುಂಪಿನ ನಾಯಕ ಮತ್ತು ಆಯುಕ್ತರಿಂ‌ದ ಕಾರ್ಡ ವಿತರಣೆ.

ಪಾಲಿಕೆಗೆ ಧನ್ಯವಾದ ಹೇಳಿದ ಪತ್ರಕರ್ತರು

ಬೆಳಗಾವಿ
ಆರೋಗ್ಯದ ವಿಮೆ ಮಾಡಿರುವುದು ಪತ್ರಕರ್ತರ ಆರೋಗ್ಯದ ಸಲುವಾಗಿ ಎಂದು ಮೇಯರ್ ಮಂಗೇಶ್ ಪವಾರ್ ಹೇಳಿದರು.
ಶನಿವಾರ ಬೆಳಗಾವಿ ಮೇಯರ್ ಕಚೇರಿಯಲ್ಲಿ ಪತ್ರಕರ್ತರಿಗೆ ಆರೋಗ್ಯ ವಿಮೆ ಕಾರ್ಡ್ ವಿತರಿಸಿ ಮಾತನಾಡಿದರು. ಇತ್ತೀಚಿನ ದಿನಮಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು. ಸುಂದರ ಬೆಳಗಾವಿ ಮಾಡಲು ಪತ್ರಕರ್ತರು ಸಹಕರಿಸಬೇಕು ಎಂದರು.

ಉಪಮೇಯರ್ ವಾಣಿ ಜೋಶಿ ಮಾತನಾಡಿ, ಪತ್ರಕರ್ತರ ‌ಕುಟುಂಬದ ಹಿತ ದೃಷ್ಟಿಯಿಂದ ಮೂರು ಲಕ್ಷ ರೂ. ಇದ್ದ ಪತ್ರಕರ್ತರ ಆರೋಗ್ಯ ವಿಮೆ ಐದು ಲಕ್ಷಕ್ಕೆ ಮಾಡಲಾಗಿದೆ. ಎಲ್ಲರೂ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದರು.


ಪಾಲಿಕೆ ಆಯುಕ್ತೆ ಶುಭ ಬಿ. ಮಾತನಾಡಿ, ಹಲವಾರು ವರ್ಷಗಳಿಂದ ಪತ್ರಕರ್ತರಿಗೆ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯದ ಕಾಡ್೯ ವಿತರಿಸಲಾಗುತ್ತಿದೆ. ಮೊದಲು ಮೂರು ಲಕ್ಷ ರೂ. ಆರೋಗ್ಯ ವಿಮೆಯನ್ನು ಪತ್ರಕರ್ತರ ಬೇಡಿಕೆ ಅನುಸಾರವಾಗಿ ಐದು ಲಕ್ಷ ರೂ.ಮಾಡಲಾಗಿದೆ. ಇದಕ್ಕೆ ಎಲ್ಲ ಸದಸ್ಯರು ಸಹಕಾರ ನೀಡಿದ್ದಾರೆ ಎಂದರು.

ಮನುಷ್ಯನಿಗೆ ಏನಾದರೂ ಏರುಪೇರು ಆಗುವುದು ಸಹಜ. ಆರೋಗ್ಯದಲ್ಲಿ ಏನಾದರೂ ಪೇರಾದರೆ ಆರೋಗ್ಯ ವಿಮೆಯಿಂದ ಲಾಭಪಡೆಯಿರಿ ಎಂದರು.
ಪಾಲಿಕೆ ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಮಾತನಾಡಿ, ಬೆಳಗಾವಿ ಮಹಾನಗರ ಪಾಲಿಕೆಯಿಂದ ಮೊದಲ ಬಾರಿಗೆ ಪತ್ರಕರ್ತರಿಗೆ ಆರೋಗ್ಯ ವಿಮೆ ಜಾರಿ ಮಾಡಲಾಗಿದೆ. ಒಂದು ಪತ್ರಕರ್ತರ ಕುಟುಂಬಕ್ಕೆ ಐದು ಲಕ್ಷ ರೂ. ಆರೋಗ್ಯ ವಿಮೆ ನೀಡಲಾಗಿದೆ. ಮೇಯರ್ ಹಾಗೂ ಉಪಮೇಯರ್ ಮಾರ್ಗದರ್ಶನದಲ್ಲಿ ಈ ಆರೋಗ್ಯ ವಿಮೆ ಜಾರಿ ಮಾಡಿದ್ದೇವೆ. ಇದರ ಲಾಭವನ್ನು ಎಲ್ಲ ಪತ್ರಕರ್ತರು ಪಡೆದುಕೊಳ್ಳಬೇಕು ಎಂದರು.
ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಸ ಜೋಶಿ ಮಾತನಾಡಿ, ಮೊದಲು ಪಾಲಿಕೆಯಿಂದ ಪತ್ರಕರ್ತರಿಗೆ ಮೂರು ಲಕ್ಷ ರೂ. ಆರೋಗ್ಯ‌ವ ವಿಮೆ ಇತ್ತು. ಇದನ್ನು ಐದು ಲಕ್ಷ ರೂ.ಮಾಡಬೇಕು ಎಂದು ಮನವಿ ಮಾಡಿದಾಗ ಅದನ್ನು ಹೆಚ್ಚು ಮಾಡಿಕೊಟ್ಟ ಮೇಯರ್, ಉಪಮೇಯರ್, ಸ್ಥಳೀಯ ಶಾಸಕರು ಸಹಕಾರ ನೀಡಿದ್ದಾರೆ

ಎಲ್ಲ ಪತ್ರಕರ್ತರ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.
ಎಲೆಕ್ಟ್ರಾನಿಕ್ ಮಿಡಿಯಾ ಅಸೋಸಿಯೇಷನ್ ಸಂಘದ ಅಧ್ಯಕ್ಷ ಮಂಜುನಾಥ ಪಾಟೀಲ್ ಮಾತನಾಡಿ, ಬೆಳಗಾವಿ ಪತ್ರಕರ್ತರಿಗೆ ಪಾಲಿಕೆಯಿಂದ ಆರೋಗ್ಯ ವಿಮೆ ಕಾಡ್೯ ವಿತರಿಸಿದ್ದು ಸಂತಸದ ಸಂಗತಿ. ಕೆಲವೊಂದ ಪತ್ರಕರ್ತರ ಹೆಸರು ಬಿಟ್ಟು‌ ಹೋಗಿವೆ. ಅವುಗಳನ್ನು ಸೇರಿಸಿ ಎಂದರು.
ಪತ್ರಕರ್ತರಾದ ರಾಜು ಗವಳಿ, ಶ್ರೀಶೈಲ ಮಠದ, ರವಿ ಉಪ್ಪಾರ, ಮಲ್ಲಿಕಾರ್ಜುನ ಮುಗಳಿ, ಸಂಜಯ ಸುರ್ಯವಂಶಿ, ಸಹದೇವ ಮಾನೆ, ಮುನ್ನಾ‌ ಭಾಗವಾನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!