ಕತ್ತಿ ಹೇಳಿಕೆ- ಸಮಯ ಬಂದಾಗ ತಕ್ಕ ಉತ್ತರ ಸಿಗುತ್ತೆ…ಸತೀಶ್.

ಹುಕ್ಕೇರಿ:
“ಆದೇಶ ಪತ್ರ ಕೊಡೋದೂ ಇಲ್ಲ, ಪೋಸ್ ಕೊಡುವ ಕಲೆ ನಮ್ಮಲ್ಲ!” ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಮಾಜಿ ಶಾಸಕ ರಮೇಶ ಕತ್ತಿಗೆ ಪ್ರತ್ಯುತ್ತರ ನೀಡಿದ್ದಾರೆ.
ಹುಕ್ಕೇರಿ ಹೊರಗಿನವರಿಗೆ ಆಡಳಿತದ ಅವಕಾಶ ನೀಡುವುದಿಲ್ಲ ಎನ್ನುವ ಕತ್ತಿಯ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ, “ಸಮಯ ಬಂದಾಗ ಉತ್ತರ ಕೊಡುವೆ. ನಾವು ಆಯುರ್ವೇದಿಕ ಡಾಕ್ಟರ್ ತರಹ – ಸ್ಲೋ ಆಗಿ, ಗಂಭೀರವಾಗಿ ಹೊಡೆತ್ತೇವೆ!” ಎಂದು ಗೂಢವಾಗಿ ಪ್ರತಿಕ್ರಿಯಿಸಿದರು.

ವಿದ್ಯುತ್ ಸಹಕಾರಿ ಸಂಘ ಚುನಾವಣೆ ಬಗ್ಗೆ ಸ್ಪಷ್ಟನೆ
ತಾಲೂಕಿನ ನೀಡಸೋಸಿ ದುರದುಂಡೇಶ್ವರ ಮಠದಲ್ಲಿ ಪೀಠಾಧಿಪತಿ ಪಂಚಮ ಶಿವಲಿಂಗೇಶ್ವರ ಶ್ರೀಗಳ ಜೊತೆಗಿನ ಆಂತರಿಕ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಾರಕಿಹೊಳಿ, “ಸಹಕಾರಿ ಸಂಘದ ಚುನಾವಣೆಗೆ ಈಗ ಯಾವುದೇ ತೀರ್ಮಾನವಿಲ್ಲ. ಮುಖಂಡರ ಜೊತೆ ಚರ್ಚೆ ಮಾಡುತ್ತೇವೆ. ಜನರಿಗೆ ಒಳ್ಳೆಯದಾಗಲಿ ಅನ್ನೋದೇ ನಮ್ಮ ಗುರಿ,” ಎಂದರು.

“ಪೋಸ್ ಕೊಡೋದಿಲ್ಲ, ನಮಗೆ ಅವಶ್ಯಕತೆಯೇ ಇಲ್ಲ!”
“ನಾವು ನೌಕರರನ್ನು ಖಾಯಂ ಮಾಡಿದ್ದೇವೆ, ಆದರೆ ಈಗ ಸಚಿವ ಬಂದು ಆದೇಶ ಪತ್ರ ನೀಡಿದ್ದಾರೆ” ಎಂಬ ಮಾಜಿ ಅಧ್ಯಕ್ಷ ಕಲಗೌಡ ಪಾಟೀಲ ಅವರ ಆರೋಪಕ್ಕೂ ಉತ್ತರಿಸಿದ ಜಾರಕಿಹೊಳಿ, “ನಾವು ಈಗ ಆಗೋದು ಏನು ಅಲ್ಲ. ಹಳೆಯದಲ್ಲೇ ಸ್ಪಷ್ಟತೆ ಇದೆ. ಪೋಸ್ ಕೊಡುವುದು ನಮ್ಮ ಶೈಲಿ ಅಲ್ಲ,” ಎಂದರು.

ಸಮಾವೇಶ? ನಂಬಿಕೆ ಇಲ್ಲ
“ಸಮಾವೇಶಗಳಿಂದ ಏನೂ ಆಗಲ್ಲ. ನಿನ್ನೆ 5 ಲಕ್ಷವನ್ನೆನ್ನೋಂದರು, ಆದರೆ ಸ್ಥಳದಲ್ಲಿ 2 ಸಾವಿರ ಜನ ಇದ್ದರು. ಜನ ಸೇರುವದು ನಮ್ಮಿಗೆ ಹೊಸದೇನಲ್ಲ. ಕತ್ತಿ ಕುಟುಂಬಕ್ಕೆ ತುರ್ತು ಅಗತ್ಯ ಇರಬಹುದು, ನನಗೆ ತುರ್ತು ಏನಿಲ್ಲ. ನಾನು ಆಯುರ್ವೇದ ಡಾಕ್ಟರ್ ಇದ್ದಂತೆ – ಹಿತವಾಗಿಯೇ ಹೊಡೆತ್ತೇನೆ!” ಎಂದು ಅವರು ಕಹಿ ಗಾಳಿಯ ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕಿರಣ ರಜಪೂತ, ಬಸವೇಶ ಪಟ್ಟಣಶೆಟ್ಟಿ, ರಿಷಭ್ ಪಾಟೀಲ, ಮಹಾಂತೇಶ ಮಗದುಮ್ಮ, ಮೌನೇಶ ಪೋತದಾರ, ಇಳಿಯಾಸ್ ಇನಾಮದಾರ, ಸಂಜು ಗಂಡ್ರೋಳಿ, ಬಂಡು ಹತನೂರೆ, ಅಮರ ನಲವಡೆ, ಅಜೀತ ಕರಜಗಿ, ಶಾನುಲ್ ತಹಶಿಲ್ದಾರ, ಜಯಪ್ರಕಾಶ ಕರಜಗಿ, ದಿಲೀಪ ಹೊಸಮನಿ ಹಾಗೂ ಹಲವರು ಉಪಸ್ಥಿತರಿದ್ದರು.


20 ವರ್ಷಗಳಿಂದ ಸಭೆ ಮಾತ್ರ ನಡೆಯುತ್ತಿವೆ!”

ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಕನ್ನೇರಿ ಮಠದಲ್ಲಿ ಜಾರಕಿಹೊಳಿ ವಿರೋಧಿಗಳಿಂದ ಲಿಂಗಾಯತ ಮುಖಂಡರ ಸಭೆ ನಡೆದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಜಾರಕಿಹೊಳಿ, “ಇಂಥ ಸಭೆಗಳು 20 ವರ್ಷಗಳಿಂದ ನಡೆಯುತ್ತಿವೆ. ಅವರ ಶಕ್ತಿ ಅವರು ತೋರಿಸಲಿ, ನಾವು ನಮ್ಮ ಒಗ್ಗಟ್ಟನ್ನು ತೋರಿಸುತ್ತೇವೆ. ಕನ್ನೇರಿ ಮಠದ ಸಭೆಯ ಬಗ್ಗೆ ಮಾಹಿತಿ ಇದೆ – ಅದು ಸಭೆಯಷ್ಟೇ. ಪರಿಣಾಮಕ್ಕೆ ಬರುವುದಿಲ್ಲ!” ಎಂದು ಗಂಭೀರವಾಗಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!