ಪೊಲೀಸ್ ಆಯುಕ್ತ ಭೂಷಣ್ ಬೋರಸೆ
ಬೆಳಗಾವಿ ಪೊಲೀಸ್ ಇಲಾಖೆ ಜನಸ್ನೇಹಿ ಧೋರಣೆಗೆ ಹೊಸ ರೂಪ
ಠಾಣೆ ಅಂದರೆ ಭೀತಿ ಅಲ್ಲ, ನಂಬಿಕೆ – ಬೆಳಗಾವಿ ಪೊಲೀಸರ ಹೊಸ ಪ್ರಯೋಗ
ಮನೆ ಮನೆಗೆ ಪೊಲೀಸ್’ ಯೋಜನೆಯ ಮೂಲಕ ನೇರ ಸಂಪರ್ಕ, ನಂಬಿಕೆ ಕಟ್ಟುವ ನಿಟ್ಟಿಗೆ ಹೆಜ್ಜೆ
ಬೆಳಗಾವಿ:
ಪೊಲೀಸ್ ಇಲಾಖೆಯ ಜನಪರ ಧೋರಣೆಗೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿರುವ ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ್ ಬೋರಸೆ, “ನೊಂದವರು ಯಾವುದೇ ಪ್ರದೇಶದ ನಿವಾಸಿಯಾದರೂ, ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು. ನಿರಾಕರಣೆ ಎಂಬ ಪ್ರಶ್ನೆಯೇ ಇಲ್ಲ” ಎಂದು ಘೋಷಿಸಿದರು.

ಬೆಳಗಾವಿ ಪತ್ರಕರ್ತರ ಸಂಘದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕೆಲವೊಮ್ಮೆ ಇನ್ಸ್ಪೆಕ್ಟರ್ ಇಲ್ಲದಿರುವ ಸಂದರ್ಭಗಳು ಕಂಡುಬರುತ್ತಿವೆ. ಆದರೆ ದೂರು ಸ್ವೀಕಾರದಲ್ಲಿ ವಿಳಂಬ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ” ಎಂದರು.
ಠಾಣೆ ಆಧುನೀಕರಣ – ಆತ್ಮೀಯ policing

ಥಾಣೆಗಳಲ್ಲಿ ದೂರು ವಿಭಾಗ, ಮಹಿಳಾ ಸಹಾಯ ಡೆಸ್ಕ್, ಹೆಚ್ಚುವರಿ ಕುಳಿತುಕೊಳ್ಳುವ ವ್ಯವಸ್ಥೆ ಸೇರಿ ಆಧುನೀಕರಣಗೊಳಿಸಲಾಗುತ್ತಿದೆ.
“ಠಾಣೆ ಅಂದರೆ ಭೀತಿ ಅಲ್ಲ – ಅದು ನಂಬಿಕೆ. ಪೊಲೀಸ್‌ರಿಗೂ ಜನರಿಗೂ ದ್ವಿಪಥ ನಂಟು ಅಗತ್ಯ” ಎಂದು ಅವರು ಹೇಳಿದರು.
ಸೈಬರ್ ಅಪರಾಧ, ಗಾಂಜಾ ದಂಧೆಗೆ ನಿಗಾ

ಸೈಬರ್ ಕ್ರೈಮ್ ನಿಯಂತ್ರಣ ಹಾಗೂ ಗಾಂಜಾ ಮಾರಾಟ ತಡೆಯಲು ಬಲವಾದ ಕ್ರಮಗಳು ಜಾರಿಗೆ ಬಂದಿದೆ. “ಡ್ರಗ್ಸ್ ಮಾಫಿಯಾದ ಜಾಲ ಪತ್ತೆ ಹಚ್ಚುವಲ್ಲಿ ವಿಶೇಷ ತಂಡವಿದೆ. ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ” ಎಂದರು.
ಸಂಚಾರ ಸಮಸ್ಯೆ – ನವೀಕೃತ ಕ್ರಮ

ವಾಹನ ಸಂಚಾರ ನಿಯಮ ಉಲ್ಲಂಘನೆಗೆ ಮನೆ ಮನೆಗೆ ನೋಟಿಸ್, ದಂಡ ಪಾವತಿಗೆ ಬೆಳಗಾವಿ ಒನ್ ಕೇಂದ್ರಗಳಲ್ಲಿ ವ್ಯವಸ್ಥೆ, 460 ಬ್ಯಾರಿಕೇಡ್‌ಗಳು, ಮತ್ತು ಬ್ಲಾಕ್ ಸ್ಪಾಟ್‌ಗಳ ಗುರುತಿಸುವ ಕೆಲಸಗಳು ಕೈಗೊಳ್ಳಲಾಗಿದೆ.
“ಮನೆ ಮನೆಗೆ ಪೊಲೀಸ್” – ನೇರ ಸಂಪರ್ಕದ ಯೋಜನೆ
“ 55 ಬೀಟ್ ಪ್ರದೇಶಗಳಲ್ಲಿ ಪೊಲೀಸರು ಮನೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸುತ್ತಿದ್ದಾರೆ. ಇದು ವಿಶ್ವಾಸ ನಿರ್ಮಾಣದ ಮೊದಲ ಹೆಜ್ಜೆ.”
ಗಣೇಶೋತ್ಸವಕ್ಕೆ ಪೊಲೀಸ್ ಸಜ್ಜು

ಸಾರ್ವಜನಿಕ ಗಣಪತಿ ಮಂಟಪಗಳ ಜೊತೆ ಸಭೆಗಳು ನಡೆಯುತ್ತಿದ್ದು, ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿದೆ.