*ಐತಿಹಾಸಿಕ ಹೆಜ್ಜೆ… ‘ಕಿತ್ತೂರು ರಾಣಿ ಚೆನ್ನಮ್ಮ ವಿಮಾನ ನಿಲ್ದಾಣ’ ದ ಪರಿಕಲ್ಪನೆಗೆ ದಿಕ್ಕು!*
ಬೆಳಗಾವಿ
ಬ್ರಿಟಿಷ್ ರಾಜದ ವಿರುದ್ಧ ಧೈರ್ಯದಿಂದ ತಲೆ ಎತ್ತಿದ ಸಿದ್ಧಹಸ್ತ ನಾಯಕಿ. ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ನ ಈಗ ಬೆಳಗಾವಿ ವಿಮಾನ ನಿಲ್ದಾಣದ ಹೆಸರಿನಲ್ಲಿ ನೆನೆಸಲ್ಪಡುವ ದಿನ ದೂರವಿಲ್ಲ…

ಬೆಳಗಾವಿ ವಿಮಾನ ನಿಲ್ದಾಣಕ್ಕೆ “ಕಿತ್ತೂರು ರಾಣಿ ಚೆನ್ನಮ್ಮ ವಿಮಾನ ನಿಲ್ದಾಣ” ಎಂದು ನಾಮಕರಣ ಮಾಡುವಂತೆ ಹಾಗೂ ನಿಲ್ದಾಣದ ಪ್ರವೇಶದ್ವಾರದಲ್ಲಿ ರಾಣಿಯ ಭವ್ಯ ಪ್ರತಿಮೆ ಸ್ಥಾಪಿಸುವಂತೆ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ನೇತೃತ್ವದ ನಿಯೋಗವು ಕೇಂದ್ರ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಅವರಿಗೆ ಶನಿವಾರ ಭಾನುವಾರ ಮನವಿ ಸಲ್ಲಿಸಿತು,
ಈ ಪ್ರಸ್ತಾಪ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.

ಇದೊಂದು ವೈಯಕ್ತಿಕ ವಿನಂತಿ ಅಲ್ಲ. ಇದು ಕರ್ನಾಟಕದ ನಾಡಜೀವದ ಪ್ರತಿನಿಧಿ – ರಾಣಿ ಚೆನ್ನಮ್ಮನ ಜಯಘೋಷ. ಈ ಮನವಿಗೆ ಕೇಂದ್ರ ಸಚಿವರು ಸಕಾರಾತ್ಮಕ ಸ್ಪಂದನೆ ನೀಡಿದ್ದು, ಶೀಘ್ರದಲ್ಲಿಯೇ ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಈ ವಿಷಯ ಮಂಡನೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಕೇಂದ್ರ ಸಚಿವರು ಈ ಮನವಿಯನ್ನು ಮುಂದಿಟ್ಟು, “ಅನುಮೋದನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿರುವ ಬಗ್ಗೆ ಈರಣ್ಣ ಕಡಾಡಿ ಖಚಿತಪಡಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಮತ್ತು ತೆಲಂಗಾಣದ ಪ್ರಭಾರಿ ಅಭಯ ಪಾಟೀಲ ಉಪಸ್ಥಿತರಿದ್ದು, ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ – ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ, ತಮ್ಮ ಸೀಮಿತ ಸೈನ್ಯದೊಂದಿಗೆ ಬ್ರಿಟಿಷ್ ಸಾಮ್ರಾಜ್ಯಕ್ಕೆ ಎದಿರುಗೊಂಡ ಧೀರಳಿಯ ಪರಿಚಯ ದೇಶದ ಪ್ರತಿಯೊಂದು ಮನಸ್ಸಿಗೂ ಬಹುಕಾಲದಿಂದಲೂ ಅಗಾಧ ಪ್ರೇರಣೆಯಾಗಿದೆ.
*ಅಂತಾರಾಷ್ಟ್ರೀಯ ಮಾನ್ಯತೆಗಾಗಿ ಹೆಜ್ಜೆ:* ಈರಣ್ಣ ಕಡಾಡಿಯವರು ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಉತ್ತರಣೆ ನೀಡುವ ಆಶಯವನ್ನೂ ಈ ಸಂದರ್ಭದಲ್ಲಿ ಮಂಡಿಸಿದರು. ಏಕೆಂದರೆ ಬೆಳಗಾವಿಯ ಭೌಗೋಳಿಕ ಮಹತ್ವ, ಉದ್ದಿಮೆ ವಲಯ, ನಿರಂತರ ಬೆಳವಣಿಗೆಯೊಂದಿಗೆ ಈಗ ಅದಕ್ಕೆ ಅಂತಾರಾಷ್ಟ್ರೀಯ ಸಂಪರ್ಕದ ಅಗತ್ಯವಿದೆ ಎಂಬುದು ಅವರ ಅಭಿಪ್ರಾಯ.
*ಇತಿಹಾಸದ ನವ ಅಧ್ಯಾಯ!*
ಈ ಹೆಸರಿಡುವ ಕ್ರಮ ಕೇವಲ ಶ್ರದ್ಧಾಂಜಲಿಯಲ್ಲ. ಅದು ಪ್ರಜೆಗಳು ತಮ್ಮ ಇತಿಹಾಸವನ್ನು ಹೇಗೆ ಸ್ಮರಿಸುತ್ತಾರೆ ಎಂಬುದಕ್ಕೆ ನಿದರ್ಶನ. ರೈಲ್ವೆ ನಿಲ್ದಾಣಗಳಿಂದ ವಿಮಾನ ನಿಲ್ದಾಣದವರೆಗೆ, ರಾಜ್ಯದ ಶೂರ ನಾಯಕಿಯ ಹೆಸರಿನಲ್ಲಿ ಕಟ್ಟುವ ಹೊಸ ಶಿಲಾಲೇಖ – ನಾಳೆಯ ಪೀಳಿಗೆಗೆ ಸ್ಪೂರ್ತಿ!
“