
ಪಾಲಿಕೆಯಲ್ಲಿ ‘ಮಹಾ’ ದವರಿಗೆ ಕೆಲಸ..?
ಸಂಬಂಧಿಕರಿಗೆ ಉದ್ಯೋಗ ಕೊಟ್ಟರೂ ಕೇಳೊರಿಲ್ಲ. ಉದ್ಯೋಗಕ್ಕೆ ಏನು ಮಾನದಂಡ? ಆಯುಕ್ತರ ಗಮನಕ್ಕೆ ಈ ಸಂಗತಿ ಬರಲಿಲ್ಲ ಏಕೆ? ಪಾರದರ್ಶಕ ನೇಮಕ ಆಗಿದೆಯೇ? ಬೆಳಗಾವಿ. ಸ್ಥಳೀಯರಿಗೆ ಉದ್ಯೋಗ ಸಿಗಬೇಕು ಎನ್ನುವ ಶಾಸಕರ ಮತ್ತು ಸರ್ಕಾರದ ಆಸೆಗೆ ತಣ್ಣೀರೆರಚುವ ಕೆಲಸ ಬೆಳಗಾವಿ ಪಾಲಿಕೆಯಲ್ಲಿ ನಡೆಯುತ್ತಿದೆಯೇ? ಅಂತಹ ಮಾತುಗಳು ಪಾಲಿಕೆಯ ಆವರಣದಲ್ಲಿ ರಿಂಗಣಿಸುತ್ತಿವೆ. ಬೆಳಗಾವಿ ಮಹಾನಗರ ಪಾಲಿಕೆಯು ಏನೇ ಮಾಡಿದರೂ ಸ್ಥಳೀಕರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ನಿರ್ವಹಿಸಬೇಕು. ಅದೇ ಉದ್ದೇಶವನ್ನು ಸ್ಥಳೀಯ ಜನಪ್ರತಿನಿಧಿಗಳು ಹೊಂದಿರಬೇಕು. ಈ ನಿಟ್ಟಿನಲ್ಲಿ ಬೆಳಗಾವಿ ದಕ್ಷಿಣ ಶಾಸಕ…